ಸುಧಾರಾಣಿ ಮಗಳು ಸ್ಯಾಂಡಲ್‌ವುಡ್‌ಗೆ | ಜೋಗಿ ಪ್ರೇಮ್ ಚಿತ್ರದಲ್ಲಿ ಸುಧಾರಾಣಿ ಪುತ್ರಿ ನಿಧಿ | ವ್ಯಾಲಂಟೈನ್ಸ್ ಡೇ ದಿನ ಟೈಟಲ್ ಲಾಂಚ್ 

ಬೆಂಗಳೂರು (ಡಿ. 19): ಸುಧಾರಾಣಿ ಪುತ್ರಿ ನಿಧಿ ನಾಯಕಿಯಾಗಿ ಚಿತ್ರರಂಗಕ್ಕೆ ಬರುತ್ತಿದ್ದಾರೆ. ವಿಶೇಷ ಅಂದರೆ ನಿಧಿ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವುದು ನಿರ್ದೇಶಕ ಜೋಗಿ ಪ್ರೇಮ್ ಅವರ ಚಿತ್ರದಲ್ಲಿ.

Add Asianetnews Kannada as a Preferred SourcegooglePreferred

ಬರಲಿದೆ ಕಿಚ್ಚ ಸುದೀಪ್ ಹೊಸ ಚಿತ್ರ

ರಕ್ಷಿತಾ ಪ್ರೇಮ್ ಅವರ ಸೋದರ ಅಭಿಷೇಕ್ ನಾಯಕನಾಗಿ ಚಿತ್ರರಂಗಕ್ಕೆ ಬರುತ್ತಿರುವ ಚಿತ್ರದಲ್ಲಿ ನಿಧಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ತುಂಬಾ ಹಿಂದಿನಿಂದಲೂ ನಿಧಿ ನಾಯಕಿಯಾಗುವ ಬಗ್ಗೆ ಮಾತುಗಳು
ಕೇಳಿ ಬರುತ್ತಿದ್ದವು. ಜಾಹೀರಾತೊಂದರಲ್ಲಿ ಯುವರಾಣಿಯಾಗಿ ಕಾಣಿಸಿಕೊಂಡಾಗಲಂತೂ ‘ಈಕೆ ಸುಧಾರಾಣಿ ಮಗಳಾ?’ ಎಂದು ಅಚ್ಚರಿಪಟ್ಟವರೇ ಜಾಸ್ತಿ.

ದರ್ಶನ್ ಕುರುಕ್ಷೇತ್ರಕ್ಕೆ ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್, ಅಂಬಿ ನೆನಪು

ಆಗಲೇ ನಿರ್ಮಾಪಕ ಮಂಜು ಕೂಡ ತಮ್ಮ ಪುತ್ರ ಶ್ರೇಯಾಸ್ ಅವರ ‘ಪಡ್ಡೆಹುಲಿ’ ಚಿತ್ರಕ್ಕೆ ನಾಯಕಿಯಾಗುವಂತೆ ಕೇಳಿದ್ದರು. ಆಗ ನಿಧಿ ಇನ್ನೂ ಓದುತ್ತಿದ್ದರಿಂದ ಬಣ್ಣ ಹಚ್ಚುವುದಕ್ಕೆ ಒಪ್ಪಿರಲಿಲ್ಲ. ಪ್ರೇಮಿಗಳ ದಿನದಂದು ಚಿತ್ರಕ್ಕ ಚಾಲನೆ: ಫೆ.14 ಪ್ರೇಮಿಗಳ ದಿನದಂದು ತಮ್ಮ ಭಾಮೈದ ಅಭಿಷೇಕ್ ಚಿತ್ರದ ಟೈಟಲ್ ಲಾಂಚ್ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ ಪ್ರೇಮ್. ಈ ಚಿತ್ರದ ಮೂಲಕ ಜೋಗಿ ಪ್ರೇಮ್ ಇಬ್ಬರು ನವತಾರೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.