ದಕ್ಷಿಣ ಭಾರತದ ಚಿತ್ರರಂಗದಲ್ಲೇ ಹೊಸ ಅಲೆ ಎಬ್ಬಿಸಿ 2019ರಲ್ಲಿ ಧೂಳೆಬ್ಬಿಸಲು ಹೊರಟಿರುವ ಕುರುಕ್ಷೇತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಿದೆ.
ಬೆಂಗಳೂರು[ಡಿ.19] ಕನ್ನಡದ ಬಹು ನಿರೀಕ್ಷೆಯ ಬಿಗ್ ಬಜೆಟ್ ಚಿತ್ರ ‘ಕುರುಕ್ಷೇತ್ರ’ ಕ್ಕೆ ಸೆಸ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ 50ನೇ ಚಿತ್ರ ಕುರುಕ್ಷೇತ್ರವಾಗಿದ್ದು ಪ್ರಾದೇಶಿಕ ಸೆನ್ಸಾರ್ ಮಂಡಳಿಂದ ಚಿತ್ರಕ್ಕೆ ‘ಯುಎ‘ ಪ್ರಮಾಣ ಪತ್ರ ನೀಡಿದೆ.
2019 ಏಪ್ರೀಲ್ ನಲ್ಲಿ ಕುರುಕ್ಷೇತ್ರ ರಿಲೀಸ್ ಆಗುವ ಸಾಧ್ಯತೆ ಇದೆ. ಬಹು ತಾರಾಗಣದ ಬಹು ಕೋಟಿಯ ಚಿತ್ರದಲ್ಲಿ ದರ್ಶನ್ ದುರ್ಯೋದನನ ಪಾತ್ರ ನಿರ್ವಹಿಸಿದ್ದಾರೆ. ಕನ್ನಡಿಗರನ್ನು ಅಗಲಿದ ರೆಬಲ್ ಸ್ಟಾರ್ ಅಂಬರೀಶ್ ಭೀಷ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪತ್ನಿಯೊಂದಿಗೆ ಅಂಬಿ ಡ್ಯಾನ್ಸ್..ವಿಡಿಯೋ ವೈರಲ್
ಶಾಸಕ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ದಕ್ಷಿಣ ಭಾರತದಲ್ಲಿ ಹೊಸ ಅಲೆ ಎಬ್ಬಿಸಿದೆ. ಪ್ರತಿಯೊಂದು ದೃಶ್ಯಗಳನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲಾಗಿದೆ. ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಸಹ ಕುರುಕ್ಷೇತ್ರದ ತಾರಾಗಣದಲ್ಲಿದ್ದಾರೆ.
