ಈ ಬಾಲಿವುಡ್ ನಟಿ ತಾನು ರಾಖಿ ಕಟ್ಟಿದ ಪುರುಷನನ್ನೇ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳ ತಾಯಿಯಾದರು. ಆ ಪುರುಷನ ತಾಯಿ ತನ್ನ ಮಗನಿಗೆ ರಾಖಿ ಕಟ್ಟುವಂತೆ ಆಕೆಯನ್ನು ಒತ್ತಾಯಿಸಿದ್ದರು ಎಂಬುದು ವಿಶೇಷ.

ರಾಖಿ ಕಟ್ಟಿದ ಗಂಡಸನ್ನೇ ಮದುವೆಯಾಗಿ ಮಕ್ಕಳು ಪಡೆದ ಬಾಲಿವುಡ್‌ ಹೀರೋಯಿನ್!

ಇತ್ತೀಚೆಗೆ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಯಿತು. ಈ ದಿನ ಹೆಣ್ಣುಮಕ್ಕಳು ಸಾಂಪ್ರದಾಯಿಕವಾಗಿ ತಮ್ಮ ಸಹೋದರರ ಮಣಿಕಟ್ಟಿನ ಮೇಲೆ ರಾಖಿ ಕಟ್ಟುತ್ತಾರೆ. ರಕ್ಷಾಬಂಧನಕ್ಕೆ ನಮ್ಮ ಹಿಂದೂ ಧರ್ಮದಲ್ಲಿ ಪವಿತ್ರವಾದ ಸ್ಥಾನವಿದೆ. ಯಾರಾದರೂ ಹೆಣ್ಣುಮಗಳು ಪುರುಷನೊಬ್ಬನಿಗೆ ರಾಖಿ ಅಥವಾ ರಕ್ಷೆ ಕಟ್ಟಿದರೆ ಆತನು ಜೀವಿತದ ಕೊನೆವರೆಗೂ ಆಕೆಯನ್ನು ಸಹೋದರಿ ಎಂದು ಪರಿಗಣಿಸುತ್ತಾನೆ. ಆದರೆ ಬಾಲಿವುಡ್‌ ನಟಿಯೊಬ್ಬಳ ವಿಷಯದಲ್ಲಿ ಹೀಗಾಗಲಿಲ್ಲ. ಈಕೆ ಬಾಲಿವುಡ್‌ನ ಬಲು ಬೇಡಿಕೆಯ ಹೀರೋಯಿನ್. ಪುರುಷನೊಬ್ಬನಿಗೆ‌ ರಾಖಿ ಕಟ್ಟಿದಳು. ಕೆಲ ಕಾಲದ ನಂತರ ಅವನನ್ನೇ ಮದುವೆಯಾದಳು, ಆತನ ಮಕ್ಕಳಿಗೆ ತಾಯಿಯಾದಳು!

ಆಕೆ ಬೇರೆ ಯಾರೂ ಅಲ್ಲ, ಅವಳ ಹೆಸರು ಶ್ರೀದೇವಿ! ಆತ ನಿರ್ಮಾಪಕ ಬೋನಿ ಕಪೂರ್.‌ ಬೋನಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದರೂ, ಅವರು ನಟಿ ಶ್ರೀದೇವಿಯನ್ನು ಪ್ರೀತಿಸುತ್ತಿದ್ದರು. ಇದಕ್ಕಾಗಿಯೇ ಬೋನಿ ಕಪೂರ್ ಅವರ ತಾಯಿ, ಒಮ್ಮೆ ಬೋನಿ ಕಪೂರ್ ಅವರ ಮಣಿಕಟ್ಟಿನ ಮೇಲೆ ರಾಖಿ ಕಟ್ಟಲು ಶ್ರೀದೇವಿಗೆ ಒತ್ತಾಯಿಸಿದ್ದರು ಎಂದು ವರದಿಯಾಗಿದೆ.

ಬೋನಿ ಕಪೂರ್ ಅವರನ್ನು ಶ್ರೀದೇವಿ ಪ್ರೀತಿಸುತ್ತಿದ್ದಾಳೆ ಎಂದು ಬೋನಿಯ ತಾಯಿ ಗ್ರಹಿಸಿದರು. ರಾಖಿ ಬಂಧನದಂದು, ಅವರು ಪೂಜಾ ತಟ್ಟೆಯಲ್ಲಿ ರಾಖಿಯನ್ನು ಇಟ್ಟು ಶ್ರೀದೇವಿಯನ್ನು ಬೋನಿ ಕಪೂರ್ ಅವರ ಮಣಿಕಟ್ಟಿನ ಮೇಲೆ ಕಟ್ಟಲು ಕೇಳಿಕೊಂಡರಂತೆ. ದಕ್ಷಿಣ ಭಾರತದಲ್ಲಿ ಬೆಳೆದ ಶ್ರೀದೇವಿಗೆ ಹಬ್ಬದ ಪರಿಚಯವಿತ್ತು. ಹೀಗಾಗಿ ಈ ಸಂದರ್ಭದಲ್ಲಿ ಅವರ ಮುಖ ಬಿಳಿಚಿಕೊಂಡಿತು ಎಂದು ವರದಿಯಾಗಿದೆ.

ಬೋನಿ ಕಪೂರ್ ಅವರ ಮೊದಲ ಪತ್ನಿ ಮೋನಾ ಶೌರಿ. ಅವರಿಗೆ ಇಬ್ಬರು ಮಕ್ಕಳು- ಅರ್ಜುನ್ ಮತ್ತು ಅನ್ಶುಲಾ ಕಪೂರ್. ಅರ್ಜುನ್ ತನ್ನ ತಂದೆಯ ಎರಡನೇ ಮದುವೆಯು ತನಗೆ ಭಾವನಾತ್ಮಕ ಒತ್ತಡವನ್ನು ಉಂಟುಮಾಡಿತು ಎಂದು ನಂತರ ಬಹಿರಂಗಪಡಿಸಿದರು. ಆದರೆ ಬೋನಿ ಹಾಗೂ ಶ್ರೀದೇವಿಯ ಹೆಣ್ಣುಮಕ್ಕಳಾದ ಜಾನ್ವಿ ಮತ್ತು ಖುಷಿ ಕಪೂರ್ ಅವರೊಂದಿಗೆ ಅರ್ಜುನ್‌ಗೆ ನಂತರ ನಿಕಟ ಒಡನಾಟ ಬೆಳೆಯಿತು. ವಾಸ್ತವವಾಗಿ, ಶ್ರೀದೇವಿ ತಮ್ಮ ಮದುವೆಗೆ ಮುಂಚೆಯೇ ಬೋನಿ ಅವರ ಮಗುವನ್ನು ಹೊಟ್ಟೆಯಲ್ಲಿ ಧರಿಸಿದರು. ಈ ಸಂಗತಿ ಸಾರ್ವಜನಿಕವಾಗಿ ಬಹಿರಂಗವಾಗಲು ತಡವೇನೂ ಆಗಲಿಲ್ಲ.

ಬೋನಿ ಕಪೂರ್ 1996ರ ಜೂನ್ 2ರಂದು ಶ್ರೀದೇವಿಯನ್ನು ರಹಸ್ಯವಾಗಿ ವಿವಾಹವಾದರು. ಜನವರಿ 1997ರಲ್ಲಿ ತಮ್ಮ ಮದುವೆಯನ್ನು ಬಹಿರಂಗಪಡಿಸಿದರು. ಅದೇ ವರ್ಷದ ಮಾರ್ಚ್‌ನಲ್ಲಿ ಅವರ ಹಿರಿಯ ಮಗಳು ಜಾನ್ವಿ ಕಪೂರ್ ಜನಿಸಿದಳು. ಶ್ರೀದೇವಿ ಗರ್ಭಧಾರಣೆಯ ಲಕ್ಷಣಗಳನ್ನು ತೋರಿಸಿದಾಗ ಬೋನಿ ತಮ್ಮ ಮದುವೆಯನ್ನು ಬಹಿರಂಗಪಡಿಸಿದರು.

ಬೋನಿ ತಮ್ಮ ಮದುವೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ್ದಾರೆ. ಅವರಿಬ್ಬರೂ ಶಿರಡಿಯಲ್ಲಿ ರಹಸ್ಯವಾಗಿ ವಿವಾಹವಾದರು ಮತ್ತು ಅದೇ ದಿನ ತಮ್ಮ ಮಧುಚಂದ್ರಕ್ಕೆ ಹೋದರು. ಇದರಿಂದಾಗಿ ಶ್ರೀದೇವಿ ಬೇಗನೆ ಗರ್ಭಿಣಿಯಾದರು ಎಂದು ಹೇಳಿದರು. ಬೋನಿ ಈಗಾಗಲೇ ವಿವಾಹವಾದ ಕಾರಣ, ತಮ್ಮ ಎರಡನೇ ಮದುವೆಯನ್ನು ಘೋಷಿಸಲು ಸುಮಾರು ಆರು ತಿಂಗಳು ಕಾದರು. ಒಂದು ಇಂಟರ್‌ವ್ಯೂನಲ್ಲಿ ಬೋನಿ, "ಶ್ರೀದೇವಿ ತುಂಬಾ ಧಾರ್ಮಿಕ ಸ್ವಭಾವದವಳು. ಪರಿಣಾಮವಾಗಿ, ಅವಳು ಗರ್ಭಿಣಿಯಾಗಿದ್ದಾಗ ಮದುವೆ ಕಾರ್ಯಕ್ರಮ ನಡೆಸಲು ಒಪ್ಪಲಿಲ್ಲ. ಅದಕ್ಕಾಗಿಯೇ ರಹಸ್ಯ ವಿವಾಹದ ನಂತರ ಆಕೆ ಬೇರೆ ಯಾವುದೇ ವಿವಾಹ ಸಮಾರಂಭವನ್ನು ಬಯಸಲಿಲ್ಲ" ಎಂದು ಹೇಳಿಕೊಂಡರು.

ಪ್ರಾಸಂಗಿಕವಾಗಿ, ಶ್ರೀದೇವಿಯ ಇಬ್ಬರು ಮಕ್ಕಳಾದ ಜಾನ್ವಿ ಮತ್ತು ಖುಷಿ ತಮ್ಮ ಪೋಷಕರ ಕಾರಣದಿಂದಾಗಿ ಚಿತ್ರರಂಗದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು ಸಾಧ್ಯವಾಯಿತು. ಜಾನ್ವಿ ಮತ್ತು ಖುಷಿ ತಮ್ಮ ಬಾಲ್ಯದಲ್ಲಿ ತಮ್ಮ ತಾಯಿ ವಿಧಿಸಿದ ಕಠಿಣ ನಿಯಮಗಳ ಅಡಿಯಲ್ಲಿ ಬೆಳೆದರು ಎಂದು ಬೋನಿ ಉಲ್ಲೇಖಿಸಿದ್ದಾರೆ.