ಪ್ರೇಮಂ ಖ್ಯಾತಿಯ ಸಾಯಿ ಪಲ್ಲವಿ ನಿರ್ದೇಶಕ ಎ ಎಲ್ ವಿಜಯ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಸುದ್ದಿಯಾಗಿದ್ದರು. ಇವೆಲ್ಲಾ ವದಂತಿಯಷ್ಟೇ. ನಮ್ಮಿಬ್ಬರ ನಡುವೆ ಯಾವುದೇ ಸಂಬಂಧವಿಲ್ಲ. ಸಿನಿಮಾಗಳಿಗೆಗಷ್ಟೇ ಗಮನ ಕೊಡುವುದರ ಬಗ್ಗೆ ಫೋಕಸ್ ಮಾಡಿದ್ದೇನೆ ಎಂದು ಹೇಳಿ ಈ ವದಂತಿಗೆ ನಿರ್ದೇಶಕ ತೆರೆ ಎಳೆದರು. 

’ಭಗಿನಿ: ಬೆಂಗಾಲ್ ಟೈಗ್ರೆಸ್’ ಮೂಲಕ ಮಮತಾ ಬ್ಯಾನರ್ಜಿ ತೆರೆ ಮೇಲೆ?

ಈಗ ಸಾಯಿ ಪಲ್ಲವಿ ಇನ್ನೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಕಾರಣ ಸ್ವಲ್ಪ ಢಿಪರೆಂಟಾಗಿದೆ.  ಖ್ಯಾತ ಫೆರ್ ನೆಸ್ ಬ್ರಾಂಡ್ ಕಂಪನಿಯೊಂದು ಸಾಯಿ ಪಲ್ಲವಿಯನ್ನು ಅಪ್ರೋಚ್ ಮಾಡಿದೆ. ಈ ಆ್ಯಡ್ ಗಾಗಿ 2 ಕೋಟಿ ರೂ ಆಫರ್ ಮಾಡಿದೆ. ಆದರೆ ಇದನ್ನು ಸಾಯಿ ಪಲ್ಲವಿ ನಿರಾಕರಿಸಿದ್ದಾರೆ ಎನ್ನಲಾಗಿದೆ. 

ವಿಡಿಯೋ ಸಾಂಗ್ ಮೂಲಕ ಮತ ಜಾಗೃತಿ ಮೂಡಿಸುತ್ತಿದ್ದಾರೆ ಆರ್‌ಜೆ ಪ್ರದೀಪ್

ಸಾಯಿ ಪಲ್ಲವಿ ಸಿನಿಮಾಗಳಲ್ಲಿ ಅಷ್ಟಾಗಿ ಮೇಕಪ್ ಮಾಡುವುದಿಲ್ಲ. ಮೊಡವೆಗಳಿಗೂ ಏನೂ ಮಾಡುವುದಿಲ್ಲ. ಹಾಗಾಗಿ ಫೇರ್ ನೆಸ್ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವುದು ಅವರ ಪಾಲಿಸಿಗೆ ವಿರುದ್ಧವಾದಂತೆ ಎಂದು ಆಫರನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ಅಧಿಕೃತವಾಗಿ ತಿಳಿದುಬರಬೇಕಿದೆ. ಸಾಯಿ ಪಲ್ಲವಿಯವರ ಈ ನಿರ್ಧಾರವನ್ನು ಅಭಿಮಾನಿಗಳು, ಫಾಲೋವರ್ಸ್ ಸ್ವಾಗತಿಸಿದ್ದಾರೆ.