'ಪ್ರೇಮಂ'ನ 'ಮಲರ್' ಚಿತ್ರದ ಖ್ಯಾತ ನಟಿ ಸಾಯಿ ಪಲ್ಲವಿ ಸಿನಿಮಾ ಇಂಡಸ್ಟ್ರಿಯಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವರಲ್ಲಿ ಒಬ್ಬರು. ಆದರೆ ಇದೊಂದು ಘಟನೆ ಅವರ ಮಾನವೀಯತೆನ್ನು ಎತ್ತಿ ತೋರಿಸುತ್ತದೆ. ಈ ಸಭ್ಯ ನಡೆತೆ ಏನು? ಆ ಚಿತ್ರವಾದರೂ ಯಾವುದು ಇಲ್ಲಿದೆ ನೋಡಿ...

ಇತ್ತೀಚೆಗೆ ಹೆಚ್ಚು ಪ್ರೆಸ್ ಮೀಟ್ ಮಾಡಿ ಸುದ್ದಿಯಲ್ಲಿದ್ದ ಚಿತ್ರ 'ಪಡಿ ಪಡಿ ಲೇಚೇ ಮನಸ್ಸು'. ಡಿಸೆಂಬರ್ 21ರಂದು ಬಿಡುಗಡೆಯಾಗಿದೆ. ಅಂದುಕೊಂಡಂತೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲೇ ಇಲ್ಲ. ಆದರೂ ಸಾಯಿ ಪಲ್ಲವಿ ನೋಡಬೇಕೆಂದು ಚಿತ್ರ ನೋಡಿದವರಿಗೇನೂ ಕಡಿಮೆ ಇಲ್ಲ. ಆದರೂ ನಿರೀಕ್ಷಿತ ಮಟ್ಟದಲ್ಲಿ ಚಿತ್ರ ಯಶಸ್ಸು ಕಾಣದ ಹಿನ್ನಲೆಯಲ್ಲಿ ಪಲ್ಲವಿ ಉಳಿದರ್ಧ ಸಂಭಾವನೆಯನ್ನು ಹಿಂಪಡೆಯಲೇ ಇಲ್ಲ.

ಚಿತ್ರದ ಆರಂಭಕ್ಕೂ ಮುನ್ನ ಸಾಯಿ ಪಲ್ಲವಿಗೆ ಅಡ್ವಾನ್ಸ್ ನೀಡಲಾಗಿತ್ತು. ಬಿಡುಗಡೆ ನಂತರ ಸಂಪೂರ್ಣ ಹಣ ನೀಡುವುದಾಗಿ ಮಾತಾಗಿತ್ತು. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿಲ್ಲ ಎಂಬ ಕಾರಣಕ್ಕೆ ಉಳಿದರ್ಧ ಸಂಭಾವನೆಯನ್ನು ಪಲ್ಲವಿ ನಿರಾಕರಿಸಿದರು. ಅದೂ ಕಡಿಮೆ ಮೊತ್ತವೇನಲ್ಲ, ಬರೋಬ್ಬರಿ 40 ಲಕ್ಷಗಳು!

ಮಲಯಾಳಂ, ತೆಲುಗು ಹಾಗು ತಮಿಳಿನಲ್ಲಿ ಬಹು ಬೇಡಿಕೆ ನಟಿಯಾಗಿರುವ ಸಾಯಿ ಪಲ್ಲವಿಯ ಈ ಗುಣಕ್ಕೆ ಎಲ್ಲರೂ 'ಫಿದಾ' ಆಗಿದ್ದಾರೆ. ಇಷ್ಟು ದಿನ ಸಿಂಪಲ್ ಬ್ಯೂಟಿಗೆ ಬಿದ್ದಿದ್ದ ಮಂದಿ, ಅವರ ಈ ಸಿಂಪ್ಲಿಸಿಟಿಯನ್ನೂ ಮೆಚ್ಚಿಕೊಂಡಿದ್ದಾರೆ.