ಬಾಲಿವುಡ್‌ ಡಿಫರೆಂಟ್ ಡೈರೆಕ್ಟರ್ ಏಕ್ತಾ ಕಪೂರ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ 'ಫಿಕ್ಸರ್' ಎನ್ನುವ ವೆಬ್‌ ಸೀರಿಸ್‌ಗೆ ನಟಿ ಆಗಿರುವ ಮಹೀ ಗಿಲ್‌ ಹಾಗೂ ತಂಡದವರ ಮೇಲೆ ಗೂಂಡಾಗಳಿಂದ ಹಲ್ಲೆಯಾಗಿದೆ.

ಜೂನ್‌ 20 ರಂದು 'ಫಿಕ್ಸರ್' ಸೀರಿಸ್ ಚಿತ್ರೀಕರಣ ವೇಳೆ ಫ್ಯಾಕ್ಟರಿ ಒಳಗೆ ನಾಲ್ಕು ಗೂಂಡಾಗಳು ಕಂಠಪೂರ್ತಿ ಕುಡಿದು ನುಗ್ಗಿ ಸೆಟ್‌ನಲ್ಲಿ ಸಿಕ್ಕವರ ಮೇಲೆಲ್ಲಾ ಹಲ್ಲೆ ಮಾಡಿದ್ದಾರೆ. ಈ ವೇಳೆ ಅವರ ಕೈಯಲ್ಲಿ ಕಬ್ಬಿಣದ ಸರಳು, ದೊಣ್ಣೆ ಹಾಗೂ ಕೋಲುಗಳಿದ್ದು ನಿರ್ಮಾಪಕರಿಗೆ ಹಾಗೂ ಕೆಲ ತಂತ್ರಜ್ಞರ ಮೇಲೆ ಹಲ್ಲೆಯಾಗಿದೆ. ಈ ಘಟನೆ ಬಗ್ಗೆ ತಂಡದವರು ವೀಡಿಯೋ ಮಾಡಿ ಪೊಲೀಸರಿಗೆ ದೂರು ನೀಡಿ ಆ ನಂತರ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

 

ಶ್ರೀದೇವಿ ಮಾಡಿದ ತಪ್ಪನ್ನೇ ಮಗಳು ಜಾಹ್ನವಿ ಮಾಡಿದ್ಲಾ?

ಚಿತ್ರತಂಡದವರು ಈ ಹಿಂದೆ ಫ್ಯಾಕ್ಟರಿ ಮಾಲಿಕರ ಅನುಮತಿ ಪಡೆದು ಹಣ ನೀಡಿ ಆ ನಂತರ ಶೂಟಿಂಗ್ ಮಾಡುವುದಾಗಿ ನಿರ್ಧಾರ ತೆಗೆದುಕೊಂಡಿದ್ದರು. ಪೊಲೀಸರಿಗೆ ದೂರ ನೀಡಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ಗೂಂಡಗಳನ್ನು ಬಂಧಿಸಿ ಫ್ಯಾಕ್ಟರಿಗೆ ಬೀಗ ಹಾಕಿದ್ದಾರೆ.

ಪ್ರೀತಿಸುತ್ತಿರುವ ಮುಸ್ಲಿಂ ಪತ್ರಕರ್ತ ಉಗ್ರನೆಂದು ತಂದೆಯಿಂದ ಹಲ್ಲೆ: ಹೃತಿಕ್ ತಂಗಿ ಆರೋಪ