ನಟಿ ಭಾವನಾ ಅವರ ಸಂದರ್ಶನವೊಂದು ಮತ್ತೆ ವೈರಲ್ ಆಗಿದ್ದು, ಇದರಲ್ಲಿ ಅವರು ನಕಲಿ ಸುದ್ದಿಗಳನ್ನು ತಡೆಯಲು ಇನ್‌ಸ್ಟಾಗ್ರಾಮ್‌ಗೆ ಬಂದಿದ್ದು ಮತ್ತು ಸಮಸ್ಯೆಗಳನ್ನು ಏಕಾಂಗಿಯಾಗಿ ಎದುರಿಸುವುದಾಗಿ ಹೇಳಿದ್ದಾರೆ. ಜೊತೆಗೆ, ಕರ್ಮ ಹಾಗೂ ಪ್ರಾರ್ಥನೆಯಲ್ಲಿ ತಮಗಿರುವ ಅಚಲ ನಂಬಿಕೆಯ ಬಗ್ಗೆಯೂ ಮಾತನಾಡಿದ್ದಾರೆ.
ಮಲಯಾಳಂ ನಟಿ ಜಾಕಿ ಭಾವನಾ ಮೆನನ್ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಭಾವನಾ ಅವರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಫೆಬ್ರವರಿ 2017 ರಲ್ಲಿ ನಡೆದಿತ್ತು. ಈ ಕೇಸ್‌ನಲ್ಲಿ ದೊಡ್ಡ ಹಿನ್ನಡೆ ಎದುರಾಗಿದ್ದು, ಪ್ರಮುಖ ಆರೋಪಿ ಎಂದು ಹೆಸರಿಸಿದ್ದ ಸೂಪರ್‌ಸ್ಟಾರ್ ನಟ ದಿಲೀಪ್ ಈ ಕೇಸ್‌ನಿಂದ ಖುಲಾಸೆ ಆಗಿದ್ದಾರೆ. ಆದರೆ, ಪ್ರಕರಣದ ಉಳಿದ ಆರು ಮಂದಿಯನ್ನು ಅಪರಾಧಿಗಳು ಎಂದು ಕೋರ್ಟ್ ಹೇಳಿದೆ. ಇದರ ಬೆನ್ನಲ್ಲಿಯೇ ಅವರ ಈ ಮಾತುಗಳು ಮತ್ತೆ ವೈರಲ್ ಆಗಿದೆ.
ನಮ್ಮಳ್ ಚಿತ್ರದಲ್ಲಿ ಪರಿಮಳಂ ಪಾತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದ ಭಾವನಾ ಮೆನನ್, ನಂತರ ಇತರ ಭಾಷೆಗಳಲ್ಲಿ ನಾಯಕಿಯಾಗಿ ಮಿಂಚಿದರು. ಒಂದು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದ ಭಾಗವಾಗಿರುವ ನಟಿ ಈಗಾಗಲೇ ಅರವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಸೋಶಿಯಲ್‌ಮೀಡಿಯಾದಲ್ಲಿ ಸಕ್ರಿಯರಲ್ಲ. ಆದರೂ ಅಪರೂಪಕ್ಕೊಮ್ಮೆ ಅವರು ಹಂಚಿಕೊಳ್ಳುವ ಪೋಸ್ಟ್‌ಗಳು ಗಮನ ಸೆಳೆಯುತ್ತದೆ. ಈಗ, ಭಾವನಾ ಈ ಹಿಂದೆ ಯೂಟ್ಯೂಬ್ ಚಾನೆಲ್ ಗಲ್ಫ್ ಟ್ರಿಟ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಸೋಶಿಯಲ್ ಮೀಡಿಯಾದ ಬಗ್ಗೆ ಹೇಳಿರುವ ಮಾತು ಗಮನಸೆಳೆದಿದೆ. ಸೋಶಿಯಲ್ ಮೀಡಿಯಾ ಪೈಕಿ ಇನ್ಸ್‌ಟಾಗ್ರಾಮ್‌ನಲ್ಲಿ ಮಾತ್ರವೇ ತಾವು ಖಾತೆ ಹೊಂದಿರುವಾಗಿ ನಟಿ ಭಾವನಾ ಹೇಳಿದ್ದಾರೆ. 2019ರಲ್ಲಿ ಇದರಲ್ಲಿ ಅಕೌಂಟ್ ಓಪನ್ ಮಾಡಿದ್ದೇನೆ ಎಂದಿದ್ದಾರೆ. ಅದರೊಂದಿಗೆ ಸ್ನೇಹ ಹಾಗೂ ವಿಶ್ವಾಸದ ಬಗ್ಗೆ ಇದರಲ್ಲಿ ಮಾತನಾಡಿದ್ದರು.
"ನನಗೆ ತುಂಬಾ ಸ್ನೇಹಿತರಿದ್ದರೂ, ಸಮಸ್ಯೆ ಬಂದಾಗ ನಾನು ಯಾರಿಗೂ ಕರೆ ಮಾಡುವುದಿಲ್ಲ. ಸಮಸ್ಯೆಗಳು ಬಂದಾಗ, ನಾನು ಒಂದು ಚಿಪ್ಪಿನೊಳಗೆ ಹೋಗುತ್ತೇನೆ. ಅದು ಈಗ ಹೀಗಿದೆಯೋ ಅಥವಾ ಮೊದಲೇ ಹೀಗೆ ಇದ್ದೆನೋ ಅನ್ನೋದು ನನಗೆ ನೆನಪಿಲ್ಲ. ನನ್ನ ಸ್ನೇಹಿತರಿಗೆ ಅದು ತಿಳಿದಿದೆ. ನಾನು ಅದರಿಂದ ಚೇತರಿಸಿಕೊಂಡ ನಂತರವೇ ಅವರಿಗೆ ವಿಷಯಗಳನ್ನು ಹೇಳುತ್ತೇನೆ. ಸೋಶಿಯಲ್ ಮೀಡಿಯಾ ಪಕಿ ಇನ್‌ಸ್ಟಾಗ್ರಾಮ್‌ನಲ್ಲಿ ಮಾತ್ರವೇ ಅಕೌಂಟ್ ಇದೆ. ಅದು 2019 ರ ಕೊನೆಯಲ್ಲಿ ಪ್ರಾರಂಭವಾಯಿತು. ಮೊದಲು, ನನ್ನ ಅಕೌಂಟ್ ಪ್ರೈವೇಟ್ ಆಗಿತ್ತು. ನಂತರ ನಾನು ವಿಚ್ಛೇದನ ಪಡೆಯಲಿದ್ದೇನೆ, ನಾನು ವಿಚ್ಛೇದನ ಪಡೆದೆ, ಇತ್ಯಾದಿಗಳಂತಹ ಬಹಳಷ್ಟು ನಕಲಿ ಸುದ್ದಿಗಳು ಬಂದವು. ಅಂತಿಮವಾಗಿ, ಎಲ್ಲರೂ ಅಕೌಂಟ್ ಆರಂಭಿಸುವಂತೆ ಹೇಳಿದರು. ಇದರಿಂದಾಗಿ ಇನ್ಸ್‌ಟಾಗ್ರಾಮ್‌ಗೆ ಬಂದೆ. ಕೆಲವು ಪೋಸ್ಟ್‌ಗಳಿಗೆ ತುಂಬಾ ಕಾಮೆಂಟ್ ಬರುತ್ತದೆ. ಆದರೆ, ಅಕೌಂಟ್ ಇರೋದು ಅಕ್ಕಾಗಿ ಅಲ್ಲ. ಬೇರೆಯವರ ಹತಾಶೆಗಾಗಿ ನಮ್ಮ ದಿನವನ್ನು ವ್ಯರ್ಥ ಮಾಡಿಕೊಳ್ಳೋದರಲ್ಲಿ ಅರ್ಥವಿಲ್ಲ.ನನ್ನ ಸಂತೋಷ ನನಗೆ ಅಮೂಲ್ಯ. ನನ್ನ ಹೃದಯವನ್ನು ತಿಳಿದಿರುವ ವ್ಯಕ್ತಿಯೊಂದಿಗೆ ಸಂತೋಷವಾಗಿರುವುದು ಬಹಳ ಅಪರೂಪ. ಕಾಮೆಂಟ್ ಮಾಡುವವನಿಗೆ ನನ್ನ ಬಗ್ಗೆ ತಿಳಿದಿಲ್ಲ' ಎಂದು ಭಾವನಾ ಹೇಳಿದ್ದಾರೆ.
ನಂಬಿಕೆ ಇರುವ ವ್ಯಕ್ತಿ ನಾನು ಎಂದ ಭಾವನಾ
ನೀವು ನಂಬಿಕೆ ಅನ್ನೋದನ್ನು ಹೇಗೆ ನೋಡುತ್ತೀರಿ ಎಂದು ಕೇಳಿದಾಗ, "ನಾನು ನಂಬಿಕೆಯುಳ್ಳವಳು. ಹಾಗಂತ ಅತಿಯಾಗಿ ನಂಬಿಕೆ ಇರಿಸಿಕೊಳ್ಳೋದಿಲ್ಲ.ನನಗೆ ಕರ್ಮದಲ್ಲಿ ಸ್ವಲ್ಪ ನಂಬಿಕೆ ಇದೆ. ನನಗಿರುವುದು ನನಗೆ ಸಿಗುತ್ತದೆ. ಅದು ಒಳ್ಳೆಯದಾಗಲಿ ಅಥವಾ ಕೆಟ್ಟದ್ದಾಗಲಿ, ನಾನು ಅದನ್ನು ಎದುರಿಸುತ್ತೇನೆ. ಅದನ್ನು ನಿಭಾಯಿಸಲು ನನಗೆ ಶಕ್ತಿಯನ್ನು ನೀಡುವ ರೀತಿಯಲ್ಲಿ ನಾನು ಪ್ರಾರ್ಥಿಸುತ್ತೇನೆ. ಪ್ರಾರ್ಥನೆ ಎಂದರೆ ಯಾರಾದರೂ ನಮ್ಮೊಂದಿಗಿದ್ದಾರೆ. ನಾವು ಯಾರನ್ನಾದರೂ ಪ್ರಾರ್ಥಿಸುತ್ತೇವೆ. ಅವರು ನಮ್ಮ ಮಾತನ್ನು ಕೇಳುತ್ತಾರೆ. ನಾವು ಅದಕ್ಕೆ ಫಲಿತಾಂಶಗಳನ್ನು ಪಡೆಯುತ್ತೇವೆ. ನಾವು 10 ವಿಷಯಗಳಿಗಾಗಿ ಪ್ರಾರ್ಥಿಸುತ್ತೇವೆ ಮತ್ತು ಕೆಲವೊಮ್ಮೆ ಐದು ವಿಷಯಗಳು ಸಂಭವಿಸುತ್ತವೆ. ಅದು ದೇವರು ಕೊಟ್ಟ ನಂಬಿಕೆ. ಪ್ರತಿಯೊಬ್ಬರೂ ಆ ನಂಬಿಕೆಯಲ್ಲಿ ಬದುಕುತ್ತಾರೆ. ಆ ಒಂದು ನಂಬಿಕೆ ಇದೆ," ಎಂದು ಭಾವನಾ ಹೇಳಿದ್ದರು.


