- Home
- Entertainment
- Sandalwood
- ಮಲಯಾಳಂ ಸ್ಟಾರ್ ಮಮ್ಮೂಟಿ ಜೊತೆ ನಟಿಸಿದ್ದ ಕನ್ನಡತಿ, ಈಗ ‘ಕರಾವಳಿ’ಯ Raj B Shetty ಗೆ ನಾಯಕಿ
ಮಲಯಾಳಂ ಸ್ಟಾರ್ ಮಮ್ಮೂಟಿ ಜೊತೆ ನಟಿಸಿದ್ದ ಕನ್ನಡತಿ, ಈಗ ‘ಕರಾವಳಿ’ಯ Raj B Shetty ಗೆ ನಾಯಕಿ
ಉದಯ ಟಿವಿಯಲ್ಲಿ ಕಾವ್ಯಾಂಜಲಿ ಸೀರಿಯಲ್ ಮೂಲಕ ಗಮನ ಸೆಳೆದಿದ್ದ ನಟಿ ಸುಷ್ಮಿತಾ ಭಟ್, ಇದೀಗ ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದು, ಇದೀಗ ರಾಜ್ ಬಿ ಶೆಟ್ಟಿಗೆ (Raj B Shetty) ನಾಯಕಿಯಾಗಿ ‘ಕರಾವಳಿ’ ಚಿತ್ರ ತಂಡ ಸೇರಿದ್ದಾರೆ ಈ ನಟಿ.

ಸುಷ್ಮಿತಾ ಭಟ್
ಕನ್ನಡ ಕಿರುತೆರೆಯ ಮೂಲಕ ನಟನೆಗೆ ಎಂಟ್ರಿ ಕೊಟ್ಟು, ಮಲಯಾಳಂ ಮತ್ತು ತಮಿಳಿನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಸುಷ್ಮಿತಾ ಭಟ್ ಇದೀಗ ರಾಜ್ ಬಿ ಶೆಟ್ಟಿ ಅವರ ಜೊತೆ ‘ಕರಾವಳಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಕಾವ್ಯಾಂಜಲಿ ನಟಿ
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾವ್ಯಾಂಜಲಿ ಸೀರಿಯಲ್ ನಲ್ಲಿ ನಾಯಕಿ ಅಂಜಲಿಯಾಗಿ ಸುಷ್ಮಿತಾ ಭಟ್ ನಟನೆಗೆ ಎಂಟ್ರಿ ಕೊಟ್ಟಿದ್ದರು., ಆ ಪಾತ್ರ ಮತ್ತು ತಮ್ಮ ಅಭಿನಯದ ಮೂಲಕ ಮನೆಮಾತಾಗಿದ್ದರು. ಆದರೆ ಕಾರಣಾಂತರಗಳಿಂದ ಸೀರಿಯಲ್ ನಿಂದ ಅರ್ಧದಲ್ಲೇ ಹೊರ ಬಂದಿದ್ದರು ನಟಿ.
ಕಿರುತೆರೆಯಿಂದ ದೂರ ಉಳಿದ ನಟಿ
ನಟಿಸಿದ ಮೊದಲ ಹಾಗೂ ಒಂದೇ ಸೀರಿಯಲ್ ಮೂಲಕ ಜನರ ಮನಸ್ಸನ್ನು ಗೆದ್ದಿದ್ದರು. ಅಂಜಲಿ ಪಾತ್ರವು ಎಷ್ಟೊಂದು ಆಪ್ತವಾಗಿತ್ತೆಂದರೆ ಜನರಿಗೆ ಆಕೆ ನಮ್ಮ ಮನೆ ಮಗಳು ಎನ್ನುವಷ್ಟು ಇಷ್ಟವಾಗಿದ್ದರು. ಆ ಸೀರಿಯಲ್ ಬಳಿಕ ಮತ್ತೆ ನಟಿ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ.
ಐಟಿ ಉದ್ಯೋಗದಿಂದ ನಟನೆಗೆ
ಇಂಜಿನಿಯರಿಂಗ್ ಪದವಿ ಪಡೆದಿರುವ ಸುಷ್ಮಿತಾ ಭಟ್, ವಿದ್ಯಾಭ್ಯಾಸದ ಬಳಿಕ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಅಚಾನಕ್ ಆಗಿ ಸಿಕ್ಕ ಅವಕಾಶದಿಂದ ಕಿರುತೆರೆಯಲ್ಲಿ ಅಭಿನಯಿಸೋ ಅವಕಾಶ ಪಡೆದುಕೊಂಡರು ಸುಷ್ಮಿತಾ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್
ಸೋಶಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುವ ಸುಷ್ಮಿತಾ ಹೆಚ್ಚಾಗಿ ಫೋಟೊ ಶೂಟ್, ಕ್ಯೂಟ್ ಆಗಿರೋ ವಿಡಿಯೋಗಳನ್ನು ಮಾಡುತ್ತಾ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ತಮ್ಮ ಭಾವ ಭಂಗಿಯಿಂದಲೇ ಸುಶ್ಮಿತಾ ಜನಪ್ರಿಯತೆ ಪಡೆದಿದ್ದಾರೆ.
ಶಾರ್ಟ್ ಫಿಲಂಗಳಲ್ಲಿ ನಟನೆ
ಸುಷ್ಮಿತಾ ಎಕೋಸ್ ಆಫ್ ಲವ್ ಎನ್ನುವ ಕಿರು ಚಿತ್ರ, ಚೌ ಚೌ ಬಾತ್ ಎನ್ನುವ ಕನ್ನಡದ ಮೊದಲ ಹೈಪರ್ ಲಿಂಕ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕನ್ನಡ ಸ್ಪರ್ಧಾತ್ಮಕ ವಿಭಾಗಗಳಿಗೆ ಆಯ್ಕೆಯಾಗಿತ್ತು.
ಮಲಯಾಂಳ -ತಮಿಳಿನಲ್ಲಿ ಸೂಪರ್ ಹಿಟ್ ಚಿತ್ರಗಳು
ಸುಷ್ಮಿತಾ ಮಲಯಾಳಂ ನಲ್ಲಿ ಸೂಪರ್ ಸ್ಟಾರ್ ಮಮ್ಮೂಟಿ ಜೊತೆಗೆ ಡೊಮೆನಿಕ್ ಆಂಡ್ ಲೇಡೀಸ್ ಪರ್ಸ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಹಿಟ್ ಆಗಿತ್ತು, ಇತ್ತೀಚೆಗೆ ರಿಲೀಸ್ ಆದ ಪವನ್ ಮೋಹನ್ ಲಾಲ್ ನಟನೆಯ ಡಾಯಿಸ್ ಈರಾ ಸಿನಿಮಾದಲ್ಲೂ ಇವರು ನಟಿಸಿದ್ದರು. ಜೊತೆಗೆ ತಮಿಳಿನಲ್ಲಿ ಲವ್ ಮ್ಯಾರೇಜ್ ಎನ್ನುವ ಸಿನಿಮಾದಲ್ಲೂ ನಟಿಸಿದ್ದರು.
ಈಗ ‘ಕರಾವಳಿ’ಗೆ ಎಂಟ್ರಿ
ಇದೀಗ ಕರಾವಳಿ ಪ್ರದೇಶದ ಕಥೆಯನ್ನು ಹೊಂದಿರುವ ‘ಕರಾವಳಿ’ ಸಿನಿಮಾಗೆ ಸುಷ್ಮಿತಾ ಭಟ್ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿದ್ದು, ಇವರಿಗೆ ಸಂಪದಾ ನಾಯಕಿಯಾಗಿದ್ದಾರೆ. ಅಲ್ಲದೇ ರಾಜ್. ಬಿ. ಶೆಟ್ಟಿ ಮಾವೀರನಾಗಿ ನಟಿಸುತ್ತಿದ್ದು, ಅವರಿಗೆ ಸುಷ್ಮಿತಾ ಭಟ್ ನಾಯಕಿಯಾಗಲಿದ್ದಾರೆ, ಸುಷ್ಮಿತಾ ಭೂಮಿ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
