ಕೆಜಿಎಫ್ ನೋಡಿದ ನಟಿ ಅಮೂಲ್ಯ | ಕುಟುಂಬದವರು, ಸ್ನೇಹಿತರಿಗಾಗಿ 25 ಟಿಕೆಟ್ ಬುಕ್ ಮಾಡಿದ ಅಮೂಲ್ಯ | ಗಜಕೇಸರಿ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು.
ಬೆಂಗಳೂರು (ಡಿ. 27): ಕನ್ನಡ ಚಿತ್ರರಂಗ ಹೆಮ್ಮೆ ಪಡುವಂತೆ ಮಾಡಿದೆ ಕೆಜಿಎಫ್. ಯಶ್ ಬಗ್ಗೆ ಎಲ್ಲಾ ಕಡೆ ಸಿಕ್ಕಾಪಟ್ಟೆ ಪಾಸಿಟೀವ್ ಮಾತುಗಳು ಕೇಳಿ ಬರುತ್ತಿದೆ. ಚಿತ್ರ ಬಿಡುಗಡೆಯಾದ ದಿನದಿಂದಲೂ ಥಿಯೇಟರ್ ಫುಲ್. ಎಲ್ಲಾ ಶೋಗಳು ಹೌಸ್ ಫುಲ್ ಆಗಿರುವುದೇ ಇದಕ್ಕೆ ಸಾಕ್ಷಿ.
ಕೆಜಿಎಫ್ ಡಿಜಿಟಲ್ ಹಕ್ಕು 18 ಕೋಟಿಗೆ ಮಾರಾಟ
ಎಲ್ಲರ ಬಾಯಲ್ಲಿ ರಾಕಿ ಬಾಯ್...ರಾಕಿ ಭಾಯ್.. ನಟಿ ಅಮೂಲ್ಯ ಅವರ ಕುಟುಂಬದವರು, ಸ್ನೇಹಿತರಿಗಾಗಿ 25 ಟಿಕೆಟ್ ಬುಕ್ ಮಾಡಿ ಕೆಜಿಎಫ್ ನೋಡಿ ಎಂಜಾಯ್ ಮಾಡಿದ್ದಾರೆ.
ಇದಪ್ಪಾ ಕೆಜಿಎಫ್ ಹವಾ! ಯಶ್ ಸಾಧನೆ ಬಗ್ಗೆ ಸ್ಪೆಷಲ್ ವಿಡಿಯೋ ಮಾಡಿದ ತಮಿಳು ನಟ
ರಾಕಿ ಬಾಯ್ ಪ್ರತಿ ಫ್ರೇಮ್ ನಲ್ಲಿ ರಾಕ್ ಆಗಿದ್ದಾರೆ. ಕನ್ನಡ ಚಿತ್ರರಂಗವನ್ನು ಎತ್ತರಕ್ಕೇರಿಸಿದ್ದಕ್ಕೆ ಇಡೀ ಚಿತ್ರತಂಡಕ್ಕೆ ಧನ್ಯವಾದಗಳು. ನಾವು ಹೆಮ್ಮೆ ಪಡುವಂತೆ ಮಾಡಿದೆ ಕೆಜಿಎಫ್. ಕೆಜಿಎಫ್- 2 ಗಾಗಿ ಕಾತರದಿಂದ ಕಾಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಅಮೂಲ್ಯ ಹಾಗೂ ಯಶ್ ಗಜಕೇಸರಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ.
