Asianet Suvarna News Asianet Suvarna News

ಇದೇನು ಎಲೆಕ್ಷನ್ ಅಲ್ಲ; ವಿಜಯ್ 'ಬೀಸ್ಟ್' ಸಿನಿಮಾ ಪೈಪೋಟಿ ಬಗ್ಗೆ ಯಶ್ ಪ್ರತಿಕ್ರಿಯೆ

ತಮಿಳು ಪತ್ರಕರ್ತರು ಕೇಳಿದ ಈ ಪ್ರಶ್ನೆಗೆ ಯಶ್ ತಮಿಳಿನಲ್ಲೇ ಉತ್ತರಿಸಿದ್ದಾರೆ. 'ಇದು ಕೆಜಿಎಫ್ ವರ್ಸಸ್ ಬೀಸ್ಟ್ ಅಲ್ಲ.ಇದು ಕೆಜಿಎಫ್ ಮತ್ತು ಬಿಸ್ಟ್. ಇದೇನು ಎಲೆಕ್ಷನ್ ಅಲ್ಲ. ಎಲೆಕ್ಷನ್ ನಲ್ಲಿ ಒಂದೇ ಓಟು ಇರುತ್ತೆ. ಆ ಒಂದು ಓಟಿಗಾಗಿ ಫೈಟ್ ಇರುತ್ತೆ. ಇದು ಸಿನಿಮಾ. ಇಬ್ಬರ ಸಿನಿಮಾ ನೋಡುತ್ತಾರೆ ಎಂದು ಹೇಳಿದರು.

Actor yash reaction on vijay beast vs kgf 2 movie office war
Author
Bengaluru, First Published Mar 28, 2022, 6:36 PM IST | Last Updated Mar 28, 2022, 6:36 PM IST

ಏಪ್ರಿಲ್ ತಿಂಗಳು ಸಿನಿ ಪ್ರಿಯರಿಗೆ ದೊಡ್ಡ ಹಬ್ಬ. ಇಡೀ ವಿಶ್ವವೇ ಕಾತರದಿಂದ ಕಾಯುತ್ತಿರುವ ಯಶ್ ನಟನೆಯ ಕೆಜಎಫ್-2 ಮತ್ತು ತಮಿಳು ನಟ ವಿಜಯ್ ನಟನೆಯ ಬಹುನಿರೀಕ್ಷೆಯ ಬೀಸ್ಟ್ ಸಿನಿಮಾ ಬಿಡುಗಡೆಯಾಗುತ್ತಿವೆ. ಕೆಜಿಎಫ್-2 ಏಪ್ರಿಲ್ 14ರಂದು ತೆರೆಗೆ ಬಂದರೆ ಬೀಸ್ಟ್ ಸಿನಿಮಾ ಒಂದು ದಿನ ಮುಂಚಿತವಾಗಿ ರಿಲೀಸ್ ಆಗುತ್ತಿದೆ. ಇತ್ತೀಚಿಗಷ್ಟೆ ಬೀಸ್ಟ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದು, ಏಪ್ರಿಲ್ 13ರಂದು ವಿಜಯ್ ಸಿನಿಮಾ ಬಿಡುಗಡೆಯಾಗುತ್ತಿದೆ.

ಕೆಜಿಎಫ್-2 ಮತ್ತು ಬೀಸ್ಟ್ ಸಿನಿಮಾ ಒಟ್ಟಿಗೆ ತೆರೆಗೆ ಬರುತ್ತಿರುವುದರಿಂದ ಬಾಕ್ಸ್ ಆಫೀಸ್ ನಲ್ಲಿ ಮೆಗಾ ವಾರ್ ಪ್ರಾರಂಭವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಈ ವರ್ಷದ ಅತೀ ದೊಡ್ಡ ಬಾಕ್ಸ್ ಆಫೀಸ್ ವಾರ್ ಎಂದು ಸಿನಿ ಪಂಡಿತರು ಹೇಳುತ್ತಿದ್ದಾರೆ. ಸ್ಟಾರ್ ಕಲಾವಿದರ ಸಿನಿಮಾ ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ ಅಂದ್ಮೇಲೆ ಪೈಪೋಟಿ ಏರ್ಪಡುತ್ತದೆ. ಈ ಬಗ್ಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಕ್ಲ್ಯಾಶ್ ಎಂದು ಕರೆಯಲು ಸಿದ್ಧವಿಲ್ಲ ಎಂದು ಯಶ್ ಹೇಳಿದ್ದಾರೆ.

ಕೆಜಿಎಫ್-2 ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಶ್, 'ಕೆಜಿಎಫ್-2 ವರ್ಸಸ್ ಬೀಸ್ಟ್ ಅಲ್ಲ ಇದು ಕೆಜಿಎಫ್2 ಮತ್ತು ಬೀಸ್ಟ್' ಎಂದಿದ್ದಾರೆ. ಕೆಜಿಎಫ್-2 ಪ್ಯಾನ್ ಇಂಡಿಯಾ ಸಿನಿಮಾ. ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಚಿತ್ರದ ಟ್ರೈಲರ್ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು. ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ ಭಾರತದ ಎಲ್ಲಾ ಭಾಷೆಯ ಪತ್ರಕರ್ತರು ಸಮಾರಂಭದಲ್ಲಿ ಹಾರಿದ್ದರು. ಈ ವೇಳೆ ತಮಿಳು ಪತ್ರಕರ್ತರು ಕೇಳಿದ ಈ ಪ್ರಶ್ನೆಗೆ ಯಶ್ ತಮಿಳಿನಲ್ಲೇ ಉತ್ತರಿಸಿದ್ದಾರೆ.

ಯಶ್ v/s ವಿಜಯ್; ಬಾಕ್ಸ್ ಆಫೀಸ್ ನಲ್ಲಿ ಮೆಗಾ ವಾರ್

'ಇದು ಕೆಜಿಎಫ್ ವರ್ಸಸ್ ಬೀಸ್ಟ್ ಅಲ್ಲ.ಇದು ಕೆಜಿಎಫ್ ಮತ್ತು ಬಿಸ್ಟ್. ಇದೇನು ಎಲೆಕ್ಷನ್ ಅಲ್ಲ. ಎಲೆಕ್ಷನ್ ನಲ್ಲಿ ಒಂದೇ ಓಟು ಇರುತ್ತೆ. ಆ ಒಂದು ಓಟಿಗಾಗಿ ಫೈಟ್ ಇರುತ್ತೆ. ಇದು ಸಿನಿಮಾ. ಇಬ್ಬರ ಸಿನಿಮಾ ನೋಡುತ್ತಾರೆ. ವಿಜಯ್ ಸರ್ ತುಂಬಾ ದೊಡ್ಡ ಸ್ಟಾರ್. ಅವರ ಬಗ್ಗೆ ನನಗೆ ತುಂಬಾ ಗೌರವ ವಿದೆ. ನಮ್ಮ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. ಈ ಸಿನಿಮಾ ಅನೌನ್ಸ್ ಮಾಡಿ 8 ತಿಂಗಳಾಗಿದೆ. ಆಗ ಯಾವ ಸಿನಿಮಾ ಬರುತ್ತೆ ಅಂತ ಗೊತ್ತಿರಲಿಲ್ಲ. ಕೆಜಿಎಫ್ ವರ್ಸಸ್ ಬೀಸ್ಟ್ ಎಂದು ಹೇಳಲಾಗುತ್ತಿದೆ. ಆದರೆ ಇದು ಸರಿಯಲ್ಲ. ಅವರು ನಮ್ಮ ಸೀನಿಯರ್. ಎಲ್ಲಾ ವಿಜಯ್ ಸರ್ ಫ್ಯಾನ್ಸ್ ಕೂಡ ನಮ್ಮ ಸಿನಿಮಾ ನೋಡುತ್ತಾರೆ. ನಾವು ಜನರನ್ನು ಮನರಂಜಿಸುತ್ತೇವೆ ಅಷ್ಟೆ' ಎಂದು ಹೇಳಿದ್ದಾರೆ.

'KGF 2' ಚಿತ್ರದಲ್ಲಿ ಅನಂತ್ ನಾಗ್ ಯಾಕಿಲ್ಲ? ಅಭಿಮಾನಿಗಳ ಪ್ರಶ್ನೆ

ವಿಜಯ್ ಬಿಸ್ಟ್ ಸಿನಿಮಾದ ಬಗ್ಗೆ ಹೇಳುವುದಾದರೆ ಈ ಚಿತ್ರಕ್ಕೆ ದಿಲೀಪ್ ನೆಲ್ಸನ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ವಿಜಯ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಪೂಜಾ ವಿಜಯ್ ಜೊತೆ ನಟಿಸಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಬೀಸ್ಟ್ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಬಂದಿರುವ ಕೆಜಿಎಫ್-2ದ ಟ್ರೈಲರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ನಡೆಸಿಕೊಟ್ಟಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಕಾಣಿಸಿಕೊಂಡಿದ್ದು, ಕನ್ನಡ ಟ್ರೈಲರ್ ಬಿಡುಗಡೆ ಮಾಡಿದ್ದರು. ಪಾರ್ಟ್-2ನಲ್ಲಿ ಬಾಲಿವುಡ್ ನಟ ಸಂಜಯ್ ದತ್ ಮತ್ತು ರವೀನಾ ಟಂಡನ್ ಕಾಣಿಸಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios