Asianet Suvarna News Asianet Suvarna News

ಯಶ್ v/s ವಿಜಯ್; ಬಾಕ್ಸ್ ಆಫೀಸ್ ನಲ್ಲಿ ಮೆಗಾ ವಾರ್

ಯಶ್ ನಟನೆಯ ಕೆಜಿಎಫ್-2 ಸಿನಿಮಾ ಬಿಡುಗಡೆಗೂ ಒಂದು ದಿನ ಮೊದಲು ತಮಿಳು ಸ್ಟಾರ್ ವಿಜಯ್ ನಟನೆಯ ಬೀಸ್ಟ್ ಸಿನಿಮಾ ತೆರೆಗೆ ಬರುತ್ತಿದೆ. ಬೀಸ್ಟ್ ಸಿನಿಮಾದ ಬಿಡುಗಡೆ ದಿನಾಂಕ ಅನೌನ್ಸ್ ಆಗಿದ್ದು ಏಪ್ರಿಲ್ 13ರಂದು ತೆರೆಗೆ ಬರುತ್ತಿದೆ.

Vijay starrer Beast gets a release date, film to clash with Yash KGF2 at box office
Author
Bengaluru, First Published Mar 22, 2022, 3:18 PM IST | Last Updated Mar 22, 2022, 3:18 PM IST

ತಮಿಳು ಸ್ಟಾರ್ ನಟ ವಿಜಯ್(Vijay) ಅಭಿನಯದ ಬಹುನಿರೀಕ್ಷೆಯ ಬೀಸ್ಟ್(Beast) ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ದೊಡ್ಡ ಮಟ್ಟದ ಅಭಿಮಾನಿ ಬಳಗ ಹೊಂದಿರುವ ನಟ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಏಪ್ರಿಲ್ 13ರಂದು ಗ್ರ್ಯಾಂಡ್ ಎಂಟ್ರಿ ನೀಡುತ್ತಿದೆ. ವಿಜಯ್ ನಟನೆಯ ಬೀಸ್ಟ್ ಸಿನಿಮಾ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಆದರೆ ಇದುವರೆಗೂ ಸಿನಿಮಾತಂಡ ಬಿಡುಗಡೆ ದಿನಾಂಕ ಬಹಿರಂಗ ಪಡಿಸಿರಲಿಲ್ಲ. ಆದರೆ ಇಂದು (ಮಾರ್ಚ್ 22) ಸಿನಿಮಾ ಬಿಡುಗಡೆ ದಿನಾಂಕ ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಸ್ಯಾಂಡಲ್ ವುಡ್ ನ ಅತೀ ದೊಡ್ಡ ಸಿನಿಮಾ, ಇಡೀ ದೇಶವೇ ಕಾತರದಿಂದ ಕಾಯುತ್ತಿರುವ ಕೆಜಿಎಫ್2(KGF2) ಸಿನಿಮಾ ಬಿಡುಗಡೆಗೆ ಒಂದು ದಿನದ ಮುಂಚಿತವಾಗಿ ಬೀಸ್ಟ್ ಸಿನಿಮಾ ತೆರೆಗೆ ಬರುತ್ತಿದೆ. ಇದು ವಿಜಯ್ ಮತ್ತು ಯಶ್(Yash) ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇಂದು ಹೊಸ ಪೋಸ್ಟರ್ ಬಿಡುಗಡೆ ಮಾಡಿರುವ ಬೀಸ್ಟ್ ಸಿನಿಮಾತಂಡ ಏಪ್ರಿಲ್ 13ರಂದು ಚಿತ್ರಮಂದಿರಕ್ಕೆ ಬರುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ಈ ವರ್ಷದ ಅತೀ ದೊಡ್ಡ ಬಾಕ್ಸ್ ಆಫೀಸ್ ವಾರ್ ಗೆ ನಾಂದಿ ಹಾಡುತ್ತಿದೆ.

ವಿಜಯ್ ಸಿನಿಮಾ ಬಿಡುಗಡೆ ದಿನಾಂಕ ಅನೌನ್ಸ್ ಮಾಡುತ್ತಿದ್ದಂತೆ ಬೀಸ್ಟ್ ಮತ್ತು ಕೆಜಿಎಫ್-2 ಸಿನಿಮಾಗಳ ಬಾಕ್ಸ್ ಆಫೀರ್ ಕ್ಲಾಶ್ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ನಟರ ಅಭಿಮಾನಿಗಳು ಯಾವ ಸಿನಿಮಾ ಗೆಲ್ಲಲಿದೆ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಯಶ್ ಅಭಿಮಾನಿಗಳು ಕೆಜಿಎಫ್-2 ಸಿನಿಮಾನೆ ಗಲ್ಲಲಿದೆ ಎಂದು ಹೇಳುತ್ತಿದ್ದರೆ, ವಿಜಯ್ ಅಭಿಮಾನಿಗಳು ತಮಿಳುನಾಡು ಮತ್ತು ಕೇರಳದಲ್ಲಿ ವಿಜಯ್ ಸಿನಿಮಾ ಸೋಲಿಸಲು ಸಾಧ್ಯನೆ ಇಲ್ಲ ಎನ್ನುತ್ತಿದ್ದಾರೆ. ಕೆಜಿಎಫ್ ಮೊದಲ ಭಾಗ ಈಗಾಗಲೇ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಹಾಗಾಗಿ ಚಾಪ್ಟರ್-2 ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇಡೀ ವಿಶ್ವವೇ ಕೆಜಿಎಫ್-2ಗಾಗಿ ಕಾಯುತ್ತಿದೆ ಹಾಗಾಗಿ ವಿಜಯ್ ಸಿನಿಮಾ ಮುಂದೆ ಕೆಜಿಎಫ್-2 ಗೆದ್ದು ಬೀಗಲಿದೆ ಎಂದು ಯಶ್ ಅಭಿಮಾನಿಗಳು ಚಾಲೆಂಜ್ ಮಾಡುತ್ತಿದ್ದಾರೆ.

KGF 2 ತೊಡೆ ತಟ್ಟಿನಿಂತ ಗಟ್ಟಿಗನೇ, ಮುನ್ನುಗ್ಗೋ ಸಿಡಿಲ ಕಿಡಿ ಕಿಚ್ಚಿವನೇ!

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಬಾಲಿವುಡ್ ಸಿನಿಮಾ ವಿಶ್ಲೇಶಕ ತರಣ್ ಆದರ್ಶ್, ಬೀಸ್ಟ್, ಕೆಜಿಎಫ್-2 ಮತ್ತು ಜರ್ಸಿ ಸಿನಿಮಾಗಳ ನಡುವೆ ದೊಡ್ಡ ಕ್ಲಾಶ್ ನಡೆಯಲಿದೆ. ಇದು ನಿಜಕ್ಕೂ ಕುತೂಹಲಕಾರಿಯಾಗಿದೆ ಅಲ್ಲವೇ ಎಂದು ಹೇಳಿದ್ದಾರೆ.

ವಿಜಯ್ ಬಿಸ್ಟ್ ಸಿನಿಮಾದ ಬಗ್ಗೆ ಹೇಳುವುದಾದರೆ ಈ ಚಿತ್ರಕ್ಕೆ ದಿಲೀಪ್ ನೆಲ್ಸನ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ವಿಜಯ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಪೂಜಾ ವಿಜಯ್ ಜೊತೆ ನಟಿಸಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಬೀಸ್ಟ್ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕೆಜಿಎಫ್‌ 2 ತೂಫಾನ್‌ ಹಾಡು, ಬಿಡುಗಡೆಯಾದ ಮೊದಲ ದಿನ 4 ಮಿಲಿಯನ್ ವೀಕ್ಷಣೆ!

ಕೆಜಿಎಫ್-2 ಚಿತ್ರ ಹೊಂಬಾಳೆ ಫಿಲ್ಮ್ಸ್ ನಲ್ಲಿ ಮೂಡಿಬಂದಿದೆ. ಚಿತ್ರಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಅಧೀರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ ರವೀನಾ ಟಂಡನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೊಡ್ಡ ಮಟ್ಟದ ಸ್ಟಾರ್ ಕಾಸ್ಟ್ ಹೊಂದಿರುವ ಕೆಜಿಎಫ್-2 ಏಪ್ರಿಲ್ 14ರಂದು ಅದ್ದೂರಿಯಾಗಿ ದೇಶದಾದ್ಯಂತ ತೆರೆಗೆ ಬರುತ್ತಿದೆ. ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ ತೂಫಾನ್ ಹಾಡು ಸದ್ಯ ನಂಬರ್ 1 ಟ್ರೆಂಡಿಂಗ್ ನಲ್ಲಿದೆ.

Latest Videos
Follow Us:
Download App:
  • android
  • ios