‘ಪಂಚತಂತ್ರ’ದ ಖ್ಯಾತಿಯ ಗ್ಲಾಮರಸ್‌ ನಟಿ ಸೋನಲ್‌ ಹೆಸರು ಈಗಾಗಲೇ ಅಧಿಕೃತವಾಗಿದೆ. ಇದೀಗ ನಟಿ ಮೇಘನಾ ರಾಜ್‌ ಈ ಚಿತ್ರದ ಮತ್ತೊಬ್ಬ ನಾಯಕಿ ಎನ್ನುವ ಸುದ್ದಿ ಹೊರಬಿದ್ದಿದೆ. ಆದರೆ,ಇಬ್ಬರಲ್ಲಿ ಉಪ್ಪಿಗೆ ಜೋಡಿ ಯಾರು ಎನ್ನುವುದು ಮಾತ್ರ ಸಸ್ಪೆನ್ಸ್‌.

ಭಾರತವನ್ನು ವಿದೇಶಕ್ಕೆ ಹೋಲಿಸಿ ಉಪೇಂದ್ರ ಗೇಲಿ; ನೆಟ್ಟಿಗರಿಂದ ಆಕ್ರೋಶ

ಚಿತ್ರಕ್ಕೆ ಇನ್ನು ಟೈಟಲ್‌ ಫೈನಲ್‌ ಆಗಿಲ್ಲ. ಆದರೂ ಒಂದೆರೆಡು ಹೆಸರು ಈ ಚಿತ್ರದ ಟೈಟಲ್‌ ಸುತ್ತ ಹರಿದಾಡಿವೆ. ಉಪೇಂದ್ರ ಅವರ ಮ್ಯಾನರಿಸಂಗೆ ಹೋಲಿಕೆ ಆಗುವಂತೆಯೇ ‘ಬುದ್ಧಿವಂತ 2’ ಅಥವಾ ‘ಪಿತಾಮಹ ’ಎನ್ನುವ ಹೆಸರಲ್ಲಿ ಚಿತ್ರತಂಡ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದೆ. ಆ ಬಗ್ಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ ಎನ್ನುತ್ತಿವೆ ಮೂಲಗಳು. ಆದರೆ ನಿರ್ದೇಶಕ ಮೌರ್ಯ ಈ ಸಾಧ್ಯತೆಗಳನ್ನು ತಳ್ಳಿ ಹಾಕಿದ್ದಾರೆ. ‘ ಈ ತನಕ ಟೈಟಲ್‌ ಕುರಿತಂತೆ ಯಾವುದು ಫೈನಲ್‌ ಆಗಿಲ್ಲ. ಈಗಷ್ಟೇ ಅದರ ಪ್ರಕ್ರಿಯೆ ಶುರುವಾಗಿದೆ. ಕತೆಗೆ ಮತ್ತು ಟ್ರೆಂಡಿಗೆ ತಕ್ಕಂತೆ ಟೈಟಲ್‌ ಇರಬೇಕೆನ್ನುವುದು ನಮ್ಮ ಅಭಿಪ್ರಾಯ.’ ಎನ್ನುತ್ತಾರೆ.

ಉಪ್ಪಿ ಲೈಫ್ ನಲ್ಲಿ ಆದಿತ್ಯ ವಿಲನ್ ?

‘ ಪಂಚ ತಂತ್ರ’ದ ಸಕ್ಸಸ್‌ ನಂತರ ಸೋನಲ್‌ಗೆ ಉಪೇಂದ್ರ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಹಾಗೆಯೇ ಮದುವೆಯಾದ ನಂತರ ನಟನೆಯಲ್ಲಿ ಮತ್ತೆ ಬ್ಯುಸಿ ಆಗುತ್ತಿರುವ ನಟಿ ಮೇಘನಾ ರಾಜ್‌, ಈಗ ಸ್ಟಾರ್‌ ನಟ ಉಪ್ಪಿ ಸಿನಿಮಾಕ್ಕೆ ನಾಯಕಿ ಆಗಿ ಕುತೂಹಲ ಮೂಡಿಸಿದ್ದಾರೆ. ಇಲ್ಲಿ ಉಪ್ಪಿಗೆ ಜೋಡಿ ಯಾರು ಎನ್ನುವುದು ಚಿತ್ರ ನೋಡಿದಾಗಲೇ ಗೊತ್ತಾಗುವ ಸಂಗತಿ ಎನ್ನುವುದ ನಿರ್ದೇಶಕ ಮೌರ್ಯ ನೀಡುವ ಜಾಣ್ಮೆಯ ಉತ್ತರ.