ಭಾರತದವನ್ನು ವಿದೇಶದ ಜೊತೆ ಹೋಲಿಸಿದ ಉಪೇಂದ್ರ | ಸೋಷಿಯಲ್ ಮೀಡಿಯಾದಲ್ಲಿ ಉಪೇಂದ್ರ ವಿರುದ್ಧ ಆಕ್ರೋಶ |
ರಿಯಲ್ ಸ್ಟಾರ್ ಉಪೇಂದ್ರ ಅಮೇರಿಕಾ ಪ್ರವಾಸದಲ್ಲಿದ್ದಾರೆ. ಫ್ಯಾಮಿಲಿ ಜೊತೆ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತ ದೇಶವನ್ನು ವಿದೇಶಕ್ಕೆ ಹೋಲಿಸಿ ಗೇಲಿ ಮಾಡಿದ್ದಾರೆ.
ಟ್ವಿಟರ್ ನಲ್ಲಿ ವಿದೇಶ ಹಾಗೂ ಭಾರತದ ಪೋಟೋ ಹಾಕಿ, ‘ಇದು ನಮ್ಮ ದೇಶಕ್ಕೂ ವಿದೇಶಕ್ಕೂ ಇರುವ ವ್ಯತ್ಯಾಸ. ಇದು ರಾಜಕೀಯದ ಕೊಡುಗೆ’ ಎಂದು ಟ್ವೀಟ್ ಮಾಡಿದ್ದಾರೆ. ಇದು ಸೋಷಿಯರ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಸೂಪರ್ ಸಿನಿಮಾದ ಗುಂಗು ಇನ್ನೂ ಇಳಿದಿಲ್ವ ಸರ್ ನಿಮಗೆ? ಯಾಕೆ ನಿಮಗೆ ನಮ್ಮ ದೇಶ ಅಂದ್ರೆ ಕಸಕಡ್ಡಿನೇ ಕಾಣುತ್ತಾ? ಮೊದಲು ನೀವು ಗೆದ್ದು ಸರ್ಕಾರ ರಚನೆ ಮಾಡಿ. ಏನಾದ್ರೂ ಮಾಡಿ ತೋರಿಸಿ ಎಂದು ನಟ ಉಪೇಂದ್ರರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
