ಈ ಚಿತ್ರಕ್ಕೆ ಟೈಟಲ್‌ ಫೈನಲ್‌ ಆಗಿಲ್ಲ. ಮೇ 24 ರಿಂದ ಚಿತ್ರಕ್ಕೆ ಅಧಿಕೃತವಾಗಿ ಚಿತ್ರೀಕರಣ ಶುರು ಎನ್ನಲಾಗಿದೆ. ಈ ಹಂತದಲ್ಲೀಗ ಚಿತ್ರ ತಂಡವು ಬಾಕಿ ಉಳಿದ ಕಲಾವಿದರ ಆಯ್ಕೆಯಲ್ಲಿ ಬ್ಯುಸಿ ಆಗಿದ್ದು, ಎರಡು ದಿನಗ ಹಿಂದಷ್ಟೇ ಚಿತ್ರದ ಪ್ರಮುಖ ವಿಲನ್‌ ಪಾತ್ರಕ್ಕೆ ಆದಿತ್ಯ ಅವರನ್ನು ಫೈನಲ್‌ ಮಾಡಿಕೊಂಡಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಚಿತ್ರಕ್ಕೆ ಈ ತನಕ ಉಪೇಂದ್ರ ಒಬ್ಬರೇ ಫೈನಲ್‌ ಆಗಿದ್ದು. ಇದೀಗ ಉಳಿದ ಪಾತ್ರಧಾರಿಗಳ ಆಯ್ಕೆ ನಡೆಯುತ್ತಿದೆ. ನಾಯಕಿಯೂ ಸೇರಿ ಇನ್ನು ಪೋಷಕ ಪಾತ್ರಗಳಿಗೂ ಕಲಾವಿದರ ಆಯ್ಕೆ ಬಾಕಿಯಿದೆ.

ಎರಡು ವರ್ಷಗಳ ನಂತರ ತೆರೆ ಮೇಲೆ ಉಪೇಂದ್ರ!

ನಿರ್ಮಾಪಕ ಟಿ.ಆರ್‌. ಚಂದ್ರಶೇಖರ್‌ ಈಗ ಸ್ಟಾರ್‌ ಸಿನಿಮಾಗಳ ನಿರ್ಮಾಪಕ. ಸಾಲು ಸಾಲು ಸಿನಿಮಾಗಳ ನಿರ್ಮಾಣದ ಜತೆಗೆ ಸಕ್ಸಸ್‌ಫುಲ್‌ ನಿರ್ಮಾಪಕ ಎನ್ನುವ ಖ್ಯಾತಿಯ ಅವರಿಗಿದೆ. ಇದೀಗ ಉಪ್ಪಿ ಕಾಂಬಿನೇಷನ್‌ ಹೊಸ ಸಿನಿಮಾಕ್ಕೆ ನಟ ಆದಿತ್ಯ ಅವರನ್ನೇ ವಿಲನ್‌ ಆಗಿ ಆಯ್ಕೆ ಮಾಡಿಕೊಂಡಿದ್ದು ಒಂದೆಡೆಯಾದರೆ, ಮುಂದಿನ ದಿನಗಳಲ್ಲಿ ಅವರನ್ನೇ ಹೀರೋ ಆಗಿಸಿಕೊಂಡು ಮತ್ತೊಂದು ಸಿನಿಮಾ ಮಾಡುವ ಸಿದ್ಧತೆಯಲ್ಲೂ ಇದ್ದಾರೆನ್ನಲಾಗಿದೆ. ಸದ್ಯಕ್ಕೆ ಅದಿನ್ನು ಅಧಿಕೃತಗೊಂಡಿಲ್ಲ. ಆದರೆ ಉಪ್ಪಿ ಜತೆಗಿನ ಅವರ ಹೊಸ ಸಿನಿಮಾದಲ್ಲಿ ಆದಿತ್ಯ ವಿಲನ್‌ ಆಗಿ ಕಾಣಿಸಿಕೊಳ್ಳುವುದಂತೂ ಖಚಿತ.