ನನ್ನ ಜೀವನದಲ್ಲಿ ನೀನು ಫೇವರಿಟ್ ಡೈರೆಕ್ಟರ್: ಉಪೇಂದ್ರ ಬಗ್ಗೆ ಮನಸಾರೆ ಮಾತನಾಡಿದ ಶಿವಣ್ಣ
ಉಪೇಂದ್ರ ತಲೆಗೆ ಹುಳ ಬಿಟ್ಟಿದ್ದಾರೆ ಅಂದುಕೊಳ್ಳಬೇಡಿ. ಇದು ನೋಡೋ ಟೀಸರು ಅಲ್ಲ, ಕೇಳೋ ಟೀಸರು. ಈ ಟೀಸರ್‌ನಲ್ಲಿ ಬಂದಿರುವ ಡೈಲಾಗ್‌ಗಳನ್ನು ಕೇಳಿ ನೀವು ಯೋಚನೆ ಮಾಡಿ. ಕಣ್ಣಿಂದ ನೋಡಿ ಮರೆಯುವುದಕ್ಕಿಂತ ಕಿವಿಯಿಂದ ಕೇಳಿ, ಹೃದಯದಿಂದ ಯೋಚನೆ ಮಾಡಿ ಎಂದು ಉಪೇಂದ್ರ ಈ ಟೀಸರ್ ಮೂಲಕ ನಮಗೆ ಹೇಳಿದ್ದಾರೆ ಎಂದರು ಶಿವಣ್ಣ.
ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಉಪೇಂದ್ರ ಹುಟ್ಟುಹಬ್ಬ ಹಾಗೂ ‘ಯುಐ’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭಕ್ಕೆ ಅವರ ಅಭಿಮಾನಿಗಳು, ಚಿತ್ರರಂಗದ ಗಣ್ಯರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ವೇದಿಕೆ ಮೇಲೆ ಶಿವಣ್ಣ, ದುನಿಯಾ ವಿಜಯ್ ಬರುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮತ್ತಷ್ಟು ಜೋರಾಯಿತು. ಅಭಿಮಾನಿಗಳ ಗದ್ದಲದ ಮಧ್ಯೆಯೇ ತೆರೆಮೇಲೆ ‘ಯುಐ’ ಟೀಸರ್ ಬಿಡುಗಡೆ ಆಯಿತು. ಕತ್ಲೆ... ಕತ್ಲೆ ಮತ್ತು ಕತ್ಲೆ. ವಿಷ್ಯುವಲ್ ಇರಲಿಲ್ಲ, ಡೈಲಾಗ್ ಓನ್ಲಿ ಟೀಸರ್ ಅದಾಗಿತ್ತು. ಈಗ ದೃಶ್ಯಗಳು ಬರಬಹುದು, ಆಗ ಬರಹುದು ಅಂತ ಕಾಯುತ್ತಿದ್ದವರಿಗೆ ಉಪೇಂದ್ರ ಕೊಟ್ಟ ಶಾಕ್ ಇದು!
ನಂತರ ಶಿವರಾಜ್ ಕುಮಾರ್ ಮಾತನಾಡಿ, ‘ಉಪೇಂದ್ರ ತಲೆಗೆ ಹುಳ ಬಿಟ್ಟಿದ್ದಾರೆ ಅಂದುಕೊಳ್ಳಬೇಡಿ. ಇದು ನೋಡೋ ಟೀಸರು ಅಲ್ಲ, ಕೇಳೋ ಟೀಸರು. ಈ ಟೀಸರ್‌ನಲ್ಲಿ ಬಂದಿರುವ ಡೈಲಾಗ್‌ಗಳನ್ನು ಕೇಳಿ ನೀವು ಯೋಚನೆ ಮಾಡಿ. ಕಣ್ಣಿಂದ ನೋಡಿ ಮರೆಯುವುದಕ್ಕಿಂತ ಕಿವಿಯಿಂದ ಕೇಳಿ, ಹೃದಯದಿಂದ ಯೋಚನೆ ಮಾಡಿ ಎಂದು ಉಪೇಂದ್ರ ಈ ಟೀಸರ್ ಮೂಲಕ ನಮಗೆ ಹೇಳಿದ್ದಾರೆ’ ಎಂದರು.‘ಉಪ್ಪಿಗೆ ಹ್ಯಾಪಿ ಬರ್ತ್ಡೇ. ನಿನ್ನನ್ನು ನಾನು ಅಂದು ಹೇಗೆ ಪ್ರೀತಿಸುತ್ತಿದ್ದೆನೋ ಅದೇ ರೀತಿ ಯಾವಾಗಲೂ ಪ್ರೀತಿಸುತ್ತೇನೆ. ಯಾಕೆಂದರೆ, ನನ್ನ ಜೀವನದಲ್ಲಿ ನೀನು ಫೇವರಿಟ್ ಡೈರೆಕ್ಟರ್.
ನನ್ನ ಇಮೇಜ್ ಅನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋದ ನಿರ್ದೇಶಕ ನೀನು ಎಂಬುದನ್ನು ನಾನು ಎಂದಿಗೂ ಮರೆಯಲ್ಲ. ಇಂದು ನಾನು ಕಣ್ಣಿಂದ ಆ್ಯಕ್ಟ್ ಮಾಡ್ತೀನಿ ಅಂತ ಜನರು ಹೇಳ್ತಾರೆ. ಆದರೆ ಅದು ನನಗೆ ಮೊದಲು ಗೊತ್ತಾಗಿದ್ದು ನಿನ್ನಿಂದ. ಇಂದು ನನ್ನ ಕಣ್ಣಿನ ಬಗ್ಗೆ ಇಡೀ ಭಾರತದಲ್ಲಿ ಮಾತಾಡುತ್ತಾರೆ ಎಂದರೆ ಅದರ ಕ್ರೆಡಿಟ್ ನಿನಗೆ ಸಲ್ಲುತ್ತದೆ’ ಎಂದು ಶಿವಣ್ಣ ಹೇಳಿದರು. ‘ಓಂ’ ಸಿನಿಮಾದ ಸಂದರ್ಭವನ್ನು ಶಿವಣ್ಣ ಮತ್ತೆ ನೆನಪು ಮಾಡಿಕೊಂಡಿದ್ದಾರೆ.
‘ರಜನಿಕಾಂತ್ ಅವರು ಓಂ ಸಿನಿಮಾದ ಇಂಟ್ರಡಕ್ಷನ್ ಸೀನ್ ಬಗ್ಗೆ ಈಗಲೂ ಹೇಳುತ್ತಾ ಇರುತ್ತಾರೆ. ಅಂಥ ಇಂಟ್ರಡಕ್ಷನ್ ಸೀನ್ ನಾನು ಈವರೆಗೂ ನೋಡಿಲ್ಲ ಮರಿ ಅಂತ ಹೇಳ್ತಾರೆ. ಆ ಸಿನಿಮಾವನ್ನು ನಾವು ಎಂದಿಗೂ ಮರೆಯೋಕೆ ಆಗಲ್ಲ. ನೀವು ಡೈರೆಕ್ಷನ್ ಮಾಡ್ತೀರಿ ಎಂದಾಗ ಬೇರೆ ರೀತಿಯ ಭರವಸೆ ಮೂಡುತ್ತದೆ. ಮತ್ತೆ ನಾವು-ನೀವು ಜೊತೆಯಾಗಿ ಸಿನಿಮಾ ಮಾಡೋದು ಯಾವಾಗ ಅಂತ ಅಭಿಮಾನಿಗಳು ಕೇಳುತ್ತಾರೆ. ಅದು ಬೇಡಿಕೆ ಕೂಡ ಹೌದು. ನಾನು ಕೂಡ ಅದಕ್ಕಾಗಿ ಕಾಯುತ್ತಿದ್ದೇನೆ ಎಂದು ಈ ಸಂದರ್ಭದಲ್ಲಿ ಶಿವಣ್ಣ ಹೇಳಿದರು.
ಸ್ಯಾಂಡಲ್‌ವುಡ್‌ನ ಸೈಕ್ ಮಾಡೋಕೆ ಬಂದ ಭೀಮ: ಟ್ರೆಂಡ್ ಆಯ್ತು ಬ್ಯಾಡ್‌ಬಾಯ್ಸ್ ಸಾಂಗ್!
ನಂತರ ‘ಕಳ್ಳ ಜನರಿಗೆ ಖುಷಿ ಕೊಟ್ಟಾಗ, ಸುಳ್ಳು ನಿಜವಾದಾಗ...’ ಎನ್ನುವ ಡೈಲಾಗ್ ಹೇಳುತ್ತಾ ವೇದಿಕೆ ಮೇಲೆ ಬಂದ ಉಪೇಂದ್ರ ‘ಇವನು ವೆರಿ ಬ್ಯಾಡ್, ಬರ್ತಾನೆ ಮತ್ತೆ. ಅಂದರೆ ಮತ್ತೊಂದು ಟೀಸರ್ ಬರುತ್ತದೆ. ಅಲ್ಲಿಯವರೆಗೂ ನೀವು ಕಲ್ಪನೆ ಮಾಡಿಕೊಂಡು ಯೋಚನೆ ಮಾಡಿ’ ಎಂದರು. ನಿರ್ಮಾಪಕರಾದ ಕೆ ಪಿ ಶ್ರೀಕಾಂತ್, ಜಿ ಮನೋಹರನ್, ಗೀತಾ ಶಿವರಾಜಕುಮಾರ್, ದುನಿಯಾ ವಿಜಯ್, ವಿನಯ್ ರಾಜಕುಮಾರ್, ಸಂಚಿತ್, ನಿರಂಜನ್ ಸುಧೀಂದ್ರ ಇದ್ದರು.