ದಿಸ್ ಈಸ್ ನಾಟ್ AI ವರ್ಲ್ಡ್, ದಿಸ್ ಈಸ್ UI ವರ್ಲ್ಡ್: ಕತ್ತಲುಮಯ ಟೀಸರ್ ಮೂಲಕ ಫ್ಯಾನ್ಸ್ ತಲೆಗೆ ಹುಳ ಬಿಟ್ಟ ಉಪೇಂದ್ರ!
ಸ್ಯಾಂಡಲ್ವುಡ್ನ ಸೂಪರ್ ಸ್ಟಾರ್ ನಟ, ನಿರ್ದೇಶಕ ರಿಯಲ್ ಸ್ಟಾರ್ ನಟ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗಿದೆ.
ಸ್ಯಾಂಡಲ್ವುಡ್ನ ಸೂಪರ್ ಸ್ಟಾರ್ ನಟ, ನಿರ್ದೇಶಕ ರಿಯಲ್ ಸ್ಟಾರ್ ನಟ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಹೌದು! ಈ ಸಮಯಕ್ಕಾಗಿ ಬಹಳಷ್ಟು ದಿನದಿಂದ ಕಾಯುತ್ತಿದ್ದ ಸಿನಿಪ್ರೇಕ್ಷಕರಿಗೆ ಇದೀಗ ಚಿತ್ರತಂಡ ಅಧಿಕೃತವಾಗಿ ಟೀಸರ್ ಬಿಡುಗಡೆ ಮಾಡುವ ಮೂಲಕ ಉಪೇಂದ್ರ ಹುಟ್ಟು ಹಬ್ಬ ಮತ್ತು ಗಣೇಶ ಹಬ್ಬದ ಗಿಫ್ಟ್ ನೀಡಿದೆ.
ಈ ಚಿತ್ರ ಟೈಟಲ್‌ನಿಂದಲೇ ಕ್ಯೂರಿಯಾಸಿಟಿ ಹುಟ್ಟಿಸಿತ್ತು. ಅಲ್ಲದೆ, ಬಹಳಷ್ಟು ದಿನಗಳ ಬಳಿಕ ಉಪ್ಪಿ ಡೈರಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ರಿಲೀಸ್ ಮಾಡಿರುವ ಟೀಸರ್‌ನಲ್ಲಿ ಯಾವುದೇ ಥರದ ಸೀನ್‌ಗಳಿಲ್ಲ. ಬರೀ ಕತ್ಲು ಕತ್ಲು. ಟೀಸರ್ ಆರಂಭದಲ್ಲಿ ಉಪ್ಪಿಯ ಒಂದಷ್ಟು ಡೈಲಾಗ್ಸ್ ಕೇಳಿಸ್ತಾವೆ. ಊಟಕ್ಕಾಗಿ ಯಾರೋ ಪರದಾಡುತ್ತಿರುವುದು, ಅರಚಾಡುತ್ತಿರುವುದು ಕೇಳಿಸುತ್ತದೆ. ನಂತರ ಹೊಡೆದಾಟ. ಈ ಕತ್ತಲಿನಿಂದ ಎಸ್ಕೇಪ್ ಆಗಬೇಕು ಅಂದ್ರೆ ಏನ್ ಮಾಡಬೇಕು ಅನ್ನೋ ಚರ್ಚೆ ಶುರು ಆಗುತ್ತದೆ. ಆಗ ಒಂದು ಧ್ವನಿ, 'ದಿಸ್ ಈಸ್ ನಾಟ್ AI ವರ್ಲ್ಡ್. ದಿಸ್ ಈಸ್ ಯುಐ ವರ್ಲ್ಡ್. To escape, Use Our Intelligence.. ಎಂದು ಹೇಳುತ್ತದೆ.
ಅಲ್ಲಿಗೆ ಟೀಸರ್ ಮುಕ್ತಾವಾಗುತ್ತಿದೆ. ಕೊನೆಗೆ, 'ಈ ಟೀಸರ್ ನಿಮ್ಮ ಕಲ್ಪನೆಗಾಗಿ..' ಎಂಬ ಸ್ಟೇಟ್‌ಮೆಂಟ್ ಇದೆ. ಅಲ್ಲಿಗೆ 'ಯುಐ' ಸಿನಿಮಾದ ವಿಶುವಲ್ಸ್ ನೋಡಬೇಕು ಎಂದು ಕಾದಿದ್ದವರಿಗೆ ಬೇರೆಯದೇ ಕಂಟೆಂಟ್ ಕೇಳಿಸಿ, ತಲೆ ಕೆಡಿಸಿದ್ದಾರೆ ಉಪೇಂದ್ರ! ಇನ್ನು ಟೀಸರ್ ರಿಲೀಸ್ ವೇಳೆ ಅಭಿಮಾನಿಗಳು ವೇದಿಕೆ ಮೇಲೆ ಬಂದು ಟೀಸರ್ ಬಿಡುಗಡೆ ಮಾಡಬಾರದು ಅಂತ ಗಲಾಟೆ ತಗೆದರು. ಈ ವೇಳೆ ಫ್ಯಾನ್ಸ್ ಅಭಿಮಾನಿಗಳು ತಲೆ ಎತ್ತಿ ನೋಡುವಂತೆ ಟೀಸರ್ ರಿಲೀಸ್ ಮಾಡ್ತೀನಿ ಅಂದು ಇವಾಗ ಹೀಗೆ ಮಾಡಿದ್ರೆ ಹೇಗೆ ಅಂದ್ರು, ಆಗ ಉಪ್ಪಿ ಮತ್ತು ಶಿವಣ್ಣ ಸಮಾಧಾನ ಮಾಡಿದರು.
ಸುಳ್ಳಿಗೆ ಹೈಪ್ ತರ್ಬೇಕು, ಸತ್ಯಕ್ಕೆ ತಾನಾಗೇ ಹೈಪ್ ಸಿಗುತ್ತೆ: ಉಪೇಂದ್ರ ವಿಡಿಯೋ ರಿಲೀಸ್
ಅಲ್ಲದೆ ಕೇಕ್ ಕಟ್ ಮಾಡಿ ಅಭಿಮಾನಿಗಳಿಗೆ ತಿನ್ನಿಸಿದರು. ಯುಐ ಪ್ಯಾನ್-ಇಂಡಿಯನ್ ಚಲನಚಿತ್ರವಾಗಿದ್ದು, ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸಿದ್ದಾರೆ. ಜಿ. ಮನೋಹರನ್ ಮತ್ತು ಕೆಪಿ ಶ್ರೀಕಾಂತ್ ಅವರು 'ಲಹರಿ ಫಿಲ್ಮ್ಸ್ LLP' ಮತ್ತು "ವೀನಸ್ ಎಂಟರ್‌ಟೈನರ್ಸ್" ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ನಿಧಿ ಸುಬ್ಬಯ್ಯ, ನಿರ್ದೇಶಕ ಇಂದ್ರಜಿತ್ ಲಂಕೇಶ್, 'ಬಿಗ್ ಬಾಸ್' ಖ್ಯಾತಿಯ ಪ್ರಶಾಂತ್ ಸಂಬರಗಿ, ನಿರ್ಮಾಪಕ ಉಮೇಶ್ ಬಣಕಾರ್, ನಿರ್ದೇಶಕ ಓಂ ಸಾಯಿಪ್ರಕಾಶ್ ಮುಂತಾದವರು ನಟಿಸಿದ್ದಾರೆ.