ಲೂಸ್ ಮಾದ ಯೋಗೀಶ್ ಸೋದರ ಮಹೇಶ್ ನಟನೆಯಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದ್ದು, ಇಲ್ಲಿ ಅವರು ಕುರುಡನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ತಮಸ್’ ಹೆಸರಿನಲ್ಲಿ ಸೆಟ್ಟೇರಿರುವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಸ್ವಾತಿ ಸುಂದರೇಶ್. 

ಹಾಗಂತ ಇವರು ಹುಡುಗಿ ಅಲ್ಲ. ಕುಮಾರಸ್ವಾಮಿ ಎಂಬುವವರು ತಮ್ಮ ಅಡ್ಡ ಹೆಸರಾಗಿಟ್ಟುಕೊಂಡಿರುವುದು ಸ್ವಾತಿ ಎಂದು. ಆದರೆ, ಇವರು ಅಂಬರೀಶ್ ಅಭಿಮಾನಿಯಾಗಿದ್ದರಿಂದ ಸ್ವಾತಿ ಜತೆಗೆ ಅಂಬರೀಶ್ ಸೇರಿಸಿಕೊಂಡಿದ್ದಾರೆ. ಈ ಸ್ವಾತಿ ಅಂಬರೀಶ್ ನಿರ್ದೇಶನದ ಚಿತ್ರಕ್ಕೆ ಈಗಷ್ಟೆ ಮುಹೂರ್ತ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲೂಸ್ ಮಾದ ಯೋಗಿ ಕುಟುಂಬಕ್ಕೆ ಯುವರಾಣಿ ಆಗಮನ!

ಅಮೃತಾ ಚಿತ್ರದ ನಾಯಕಿ. ಈ ಹಿಂದೆ ‘ತಾಂಡವ’ ಚಿತ್ರಕ್ಕೆ ನಿರ್ಮಾಪಕರಾದವರು, ‘ದೇವದಾಸಿಯರು’ ಹೆಸರಿನ ಚಿತ್ರಕ್ಕೆ ತಾವೇ ನಿರ್ದೇಶನ, ನಿರ್ಮಾಣದ ಜತೆಗೆ ಪ್ರಮುಖ ಪಾತ್ರದಲ್ಲಿ ನಟಿಸಿದವರು. ಇದರ ನಡುವೆ ‘ರಾಮ್‌ಸೇತು’ ಚಿತ್ರಕ್ಕೂ ನಿರ್ಮಾಣ, ನಿರ್ದೇಶನದ ಸಾರಥಿಯಾಗಿದ್ದವರು ಸ್ವಾತಿ ಸುಂದರೇಶ್. ಈಗ ಪಕ್ಕಾ ಒಂದು ಕಮರ್ಷಿಯಲ್ ಸಿನಿಮಾ ಶುರು ಮಾಡಿದ್ದು,

ಲೂಸ್ ಮಾದ ಯೋಗಿಯ ಲಿಟಲ್ ಪ್ರಿನ್ಸಸ್ 'ಶ್ರೀನಿಕಾ' ಪೋಟೋಸ್!

ಈ ‘ತಮಸ್’ ಚಿತ್ರದಲ್ಲಿ ಮಹೇಶ್ ಬ್ಲೈಂಡ್ ಆಗಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಹೈಲೈಟ್ ಅಂತೆ. ಇದೇ ತಿಂಗಳು 28ರಿಂದ ಶೂಟಿಂಗ್. ತಮಸ್ ಅಂದರೆ ಕತ್ತಲು ಅಂತ. ಇಲ್ಲಿ ಹೀರೋ ಬ್ಲೈಂಡ್. ಹೀಗಾಗಿ ಚಿತ್ರಕ್ಕೆ ಅದೇ ಹೆಸರಿಟ್ಟಿದ್ದಾರೆ.
ಅಂದಹಾಗೆ ಇದು ಕಾದಂಬರಿ ಆಧರಿಸಿದ ಸಿನಿಮಾ.ಚಿಕ್ಕಬಳ್ಳಾಪುರ, ರಾಮನಗರ, ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.