ಸ್ಯಾಂಡಲ್‌ವುಡ್ ನಟ ಲೂಸ್ ಮಾದ ಯೋಗಿ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.
ಯೋಗಿ - ಸಾಹಿತ್ಯ ಕುಟುಂಬಕ್ಕೆ ಹೊಸ ಅತಿಥಿ ಆಗಮನವಾಗಿದೆ. ಮೇ 25ರ ಶನಿವಾರ ಬೆಳಗ್ಗೆ 5 ಗಂಟೆಗೆ ಪದ್ಮನಾಭನಗರದಲ್ಲಿರುವ ಮದರ್‌ವುಡ್ ಆಸ್ಪತ್ರೆಯಲ್ಲಿ ಸಾಹಿತ್ಯ ಹೆಣ್ಣ ಮಗುವಿಗೆ ಜನ್ಮ ನೀಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬಂಧು ವಿತ್ರರೊಂದಿಗೆ ಏಪ್ರೀಲ್ 15ರಂದು ಸಾಹಿತ್ಯ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ನಡೆದಿತ್ತು.
2017 ನವೆಂಬರ್ 2ರಂದು ಸಾಹಿತ್ಯ-ಯೋಗಿ ದಾಂಪತ್ಯ ಜೀನಕ್ಕೆ ಕಾಲಿಟ್ಟಿದ್ದರು. ಈ ಕ್ಯೂಟ್ ಕಪಲ್ ಈಗ ಹೆಣ್ಣು ಮಗುವಿನ ತಂದೆ-ತಾಯಿಯಾಗಿದ್ದು, ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿ ಇರುವುದಾಗಿ ತಿಳಿದು ಬಂದಿದೆ.
