Asianet Suvarna News Asianet Suvarna News

'ಪ್ರಯೋಗಾತ್ಮಕ ಸಿನಿಮಾ ಮಾಡಲ್ಲ, ಡಬಲ್‌ ಮೀನಿಂಗ್‌ ಮಾತಾಡಿದ್ರೆ ಬೈಬೇಡಿ'!

 ಸಾಮಾನ್ಯವಾಗಿ ಸಿನಿಮಾ ಪತ್ರಿಕಾಗೋಷ್ಠಿ ಇದ್ದರೆ ಅಲ್ಲಿ ನಗು ಇರುತ್ತದೆ. ಏನಾದರೊಂದು ಡೈಲಾಗ್‌ ಹೊಡೆದು ನಗಿಸುವುದು ಸಹಜ. ಆದರೆ ಸೋಮವಾರ ನಡೆದ ‘ಪ್ರೀಮಿಯರ್‌ ಪದ್ಮಿನಿ’ ಚಿತ್ರದ 50ನೇ ದಿನದ ಸಂಭ್ರಮಾಚರಣೆಯಲ್ಲಿ ಸ್ವಲ್ಪ ಸಿಟ್ಟಾಗಿದ್ದರು. ಅವರ ಸಿಟ್ಟು ವ್ಯವಸ್ಥೆಯ ಕುರಿತು. ಅವರ ಮಾತುಗಳಲ್ಲಿ ಎರಡು ವಿಚಾರಗಳಿದ್ದವು.

Actor Jaggesh in Premier Padmini Press meet
Author
Bangalore, First Published Jun 18, 2019, 8:50 AM IST

ಇವು ಜಗ್ಗೇಶ್‌ ಹೇಳಿದ ಮಾತುಗಳು.

- ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಾನಿನ್ನು ನಟಿಸಲ್ಲ. ನನ್ನ ಕಾಮಿಡಿ ಸಿನಿಮಾಗಳಿಗೆ ಮರಳುತ್ತೇನೆ. ಡಬಲ್‌ ಮೀನಿಂಗ್‌ ಡೈಲಾಗ್‌ ಹೇಳಿದರೆ ಬೈಬೇಡಿ.

- ನಮ್ಮ ಚಿತ್ರಮಂದಿರಗಳು ಸರಿ ಇಲ್ಲ. ನಮ್ಮ ನಿರ್ಮಾಪಕರಿಗೆ ಹೇಳುವುದೇನೆಂದರೆ ಸಿಂಗಲ್‌ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್‌ ಮಾಡಬೇಡಿ. ಪರ್ಸೆಂಟೇಜ್‌ ಕೊಟ್ಟರೆ ಮಾತ್ರ ಮುಂದುವರೆಯಿರಿ.

ದೊಡ್ಡ ಮಟ್ಟದಲ್ಲಿ ಬರಲಿದೆ 'ತೋತಾಪುರಿ'!

- ಚಿತ್ರಮಂದಿರಗಳ ಮಾಲೀಕರು ಚಿತ್ರಮಂದಿರಗಳನ್ನು ಸರಿಯಾಗಿ ಇಟ್ಟುಕೊಂಡಿಲ್ಲ. ಕೆಟ್ಟವ್ಯವಸ್ಥೆ ಇರುವ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಯಾಕಾದರೂ ಬರುತ್ತಾರೆ.

1. ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟಿಸುವುದಿಲ್ಲ

ಅವರು ಈ ನಿರ್ಧಾರಕ್ಕೆ ಬರಲು ಕಾರಣ ಏನು ಅನ್ನುವುದನ್ನು ಹೇಳಲಿಲ್ಲ. ಆದರೆ ಅವರು ‘ಪ್ರೀಮಿಯರ್‌ ಪದ್ಮಿನಿ’ ಸಿನಿಮಾದಲ್ಲಿ ವಿಭಿನ್ನವಾದ ಪಾತ್ರ ಮಾಡಿದ್ದರು. ಆ ಚಿತ್ರದ ಪತ್ರಿಕಾಗೋಷ್ಠಿಯಲ್ಲೇ ಆ ಚಿತ್ರದ ನಿರ್ದೇಶಕರಿಗೆ ಇನ್ನು ಮುಂದೆ ನನಗೆ ವಯಸ್ಸಾದ ಪಾತ್ರಗಳಲ್ಲಿ ನಟಿಸುವಂತೆ ಕೇಳಬೇಡಿ ಎಂದರು. ಅದರ ಬೆನ್ನಲ್ಲೇ ನಾನಿನ್ನು ಪೂರ್ತಿ ಕಾಮಿಡಿ ಸಿನಿಮಾಗಳಲ್ಲೇ ನಟಿಸುತ್ತೇನೆ ಎಂದರು. ಆ ನಿರ್ಧಾರಕ್ಕೆ ಎರಡು ಉದಾಹರಣೆ ನೀಡಿದರು. ಐ ಲವ್‌ ಯೂ ಚಿತ್ರದಲ್ಲಿ ಉಪೇಂದ್ರ ಯಂಗ್‌ ಪಾತ್ರದಲ್ಲಿ ನಟಿಸಿದ್ದು ಮತ್ತು ರಜನಿಕಾಂತ್‌ ‘ಪೆಟ್ಟಾ’ ಚಿತ್ರದಲ್ಲಿ ಯುವಕನಾಗಿ ನಟಿಸಿದ್ದು. ಹಾಗಾಗಿ ತಾನೂ ಯುವ ಪಾತ್ರಗಳಲ್ಲೇ ನಟಿಸಿ ಎಲ್ಲರಿಗೂ ನಾನೇನು ಅನ್ನುವುದನ್ನು ತೋರಿಸುತ್ತೇನೆ ಎಂಬಂತೆ ಮಾತಾಡಿದರು. ಸದ್ಯ ಅವರು ತೋತಾಪುರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಾದ ನಂತರ ಎರಡು ಕಾಮಿಡಿ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂದು ಘೋಷಿಸಿದ್ದಾರೆ. ಅದರಲ್ಲಿ ಒಂದು ದೆವ್ವದ ಸಿನಿಮಾ.

ಬೇರೆ ಭಾಷೆಗಳಲ್ಲಿ ಜಗ್ಗೇಶ್ ನಟಿಸದಿರಲು ಕೊಟ್ಟ ಕಾರಣವಿದು!

2. ಚಿತ್ರಮಂದಿರಗಳು ಸರಿ ಇಲ್ಲ

ಈ ವಿಚಾರದ ಕುರಿತು ಮಾತಾಡುವಾಗ ಜಗ್ಗೇಶ್‌ ಸ್ವಲ್ಪ ಸಿಟ್ಟಾಗಿದ್ದರು. ‘ಮೊದಲು ಸಾವಿರ ಚಿತ್ರಮಂದಿರಗಳು ಇದ್ದವು. ಈಗ ನಾಲ್ಕು ನೂರಕ್ಕೆ ಇಳಿದಿವೆ. ಚಿತ್ರಮಂದಿರಗಳ ಮಾಲೀಕರು ಚಿತ್ರಮಂದಿರಗಳನ್ನು ಸರಿಯಾಗಿ ಇಟ್ಟುಕೊಂಡಿಲ್ಲ. ಫ್ಯಾನ್‌ ಇಲ್ಲ, ಏಸಿ ಇಲ್ಲ, ಶೌಚಾಲಯಗಳು ಸರಿ ಇಲ್ಲ. ಹಾಗಿರುವಾಗ ಜನ ಯಾಕಾದರೂ ಚಿತ್ರಮಂದಿರಗಳಿಗೆ ಬರುತ್ತಾರೆ? ಬರಲ್ಲ. ಕೆಲವು ಸ್ಟಾರ್‌ಗಳ ಸಿನಿಮಾ ಅಲ್ಲಿ ನಾಲ್ಕು ದಿನ ಓಡುತ್ತಷ್ಟೇ. ಅಲ್ಲದೇ ವಾರಕ್ಕೆ ಅಂದಾಜು ನಾಲ್ಕೂವರೆ ಲಕ್ಷ ಬಾಡಿಗೆ ಕಟ್ಟಬೇಕು. ಮೊದಲೆರಡು ವಾರ ಜಾಸ್ತಿ ಎಂಟೂವರೆ ಲಕ್ಷ ಕಲೆಕ್ಷನ್‌ ಆಗುತ್ತದೆ ಅಂತಿಟ್ಟುಕೊಳ್ಳಿ. ಮುಂದಿನ ಎರಡು ವಾರ ಎರಡೂವರೆ ಲಕ್ಷ ಕಲೆಕ್ಷನ್‌ ಆಗುತ್ತದೆ. ಆಗ ಬಾಡಿಗೆ ಅಲ್ಲಿಂದಲ್ಲಿಗೆ ಸರಿ ಹೋಗುತ್ತದೆ. ನಿರ್ಮಾಪಕನಿಗೆ ದುಡ್ಡು ಬರುವುದು ಹೇಗೆ? ಹಾಗಾಗಿ ನಿರ್ಮಾಪಕರು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್‌ ಮಾಡಬಾರದು. ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಬೇಕು’ ಎಂದರು ಜಗ್ಗೇಶ್‌.

ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕಗಳ ಸಹಾಯ ನೀಡಿದ ಪರಿಮಳಾ ಜಗ್ಗೇಶ್

Follow Us:
Download App:
  • android
  • ios