ಜಗ್ಗೇಶ್ ಹಾಗೂ ಅವರ ಪತ್ನಿ ಪರಿಮಳಾ ಜಗ್ಗೇಶ್ ಸಾಮಾಜಿಕ ಕೆಲಸ ಮಾಡುವುದರಲ್ಲಿ ಯಾವಾಗಲೂ ಮುಂದು. ಪರಿಮಳಾ ಜಗ್ಗೇಶ್ ಗೆ ಓದುವುದೆಂದರೆ ಸಿಕ್ಕಾಪಟ್ಟೆ ಇಷ್ಟ. ಅವರು ಮಾತ್ರ ಓದುವುದಕ್ಕಲ್ಲ, ಓದುವವರಿಗೂ ಸಪೋರ್ಟ್ ಮಾಡುತ್ತಾರೆ. 

ಓದಬೇಕು ಎಂಬ ಆಸೆ ಇರುವ ಎಷ್ಟೋ ಮಕ್ಕಳಿಗೆ ಪೆನ್ನು, ಪುಸ್ತಕ ಕೊಂಡುಕೊಳ್ಳಲು ದುಡ್ಡಿರುವುದಿಲ್ಲ. ಅಂತವರಿಗೆ ಪರಿಮಳಾ ಜಗ್ಗೇಶ್ ಸಹಾಯ ಮಾಡಿದ್ದಾರೆ. 

 

ಪರಿಮಳಾ ಜಗ್ಗೇಶ್ 300 ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಪುಸ್ತಕ ಪೆನ್ನು, ಪೆನ್ಸಿಲ್, ರಬ್ಬರ್ ವಿತರಣೆ ಮಾಡಿದ್ದಾರೆ. ದಾನಗಳಲ್ಲಿ ಉತ್ತಮ ದಾನ ವಿದ್ಯಾದಾನ ಎಂದು ಬರೆದುಕೊಂಡಿದ್ದಾರೆ. 

ಜಗ್ಗೇಶ್ ಪತ್ನಿ ಪರಿಮಳಾ ಈ ಉತ್ತಮ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.