ಚಿತ್ರದ ನಾಯಕ ಮಾಸ್ಟರ್‌ ಆನಂದ್‌. ಚಿತ್ರದ ಹೆಸರು ‘ನಾನು ಕೋಳಿಕೆ ರಂಗ’. ಎಸ್‌.ಟಿ. ಸೋಮಶೇಖರ್‌ ನಿರ್ಮಾಣದಲ್ಲಿ ಗೊರವಾಲೆ ಮಹೇಶ್‌ ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದು, ರಾಜು ಎಮ್ಮಿಗನೂರು ಸಂಗೀತ ಹಾಗೂ ಧನುಷ್‌ ಛಾಯಾಗ್ರಹಣ ಚಿತ್ರಕ್ಕಿದೆ.

ನಟ ಮಾಸ್ಟರ್ ಆನಂದ್ ಸಹ ಪಿಯುಸಿಯಲ್ಲಿ ಫೇಲಾಗಿದ್ದರಂತೆ!

ಚಿತ್ರದಲ್ಲಿ ಮಾಸ್ಟರ್‌ ಆನಂದ್‌ ಅವರಿಗೆ ಜೋಡಿಯಾಗಿ ರಾಜೇಶ್ವರಿ ಅಭಿನಯಿಸುತ್ತಿದ್ದಾರೆ. ಹೆಸರಿಗೆ ತಕ್ಕಂತೆ ಇದೊಂದು ಹಾಸ್ಯ ಪ್ರಧಾನ ಚಿತ್ರ. ನಿರ್ದೇಶಕ ಗೊರರವಾಲೆ ಅವರೇ ಸಂಭಾಷಣೆ ಬರೆದಿದ್ದು, ಪಕ್ಕಾ ಗ್ರಾಮೀಣ ಸೊಗಡಿನ ಕತೆಯೊಂದನ್ನು ನವೀರಾದ ಹಾಸ್ಯದ ಮೂಲಕ ತೋರಿಸಲು ಹೊರಟಿದ್ದಾರಂತೆ.

ಮಗಳ ವಿಚಾರಕ್ಕೆ ಮೊದಲ ಬಾರಿ ಕಣ್ಣೀರಿಟ್ಟ ಯಶ್!

ಈಗಾಗಲೇ ಹಿರಿಯ ನಟ, ನಿರ್ಮಾಪಕ ಹಾಗೂ ನಿರ್ದೇಶಕ ದ್ವಾರಕೀಶ್‌, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಹಲವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇರುವ ಮಹೇಶ್‌ ಗೊರವಾಲೆ ಅವರಿಗೆ ಇದು ಚೊಚ್ಚಲ ಚಿತ್ರ. ಒಂದೊಳ್ಳೆಯ ಕತೆ ತಾವು ನಿರ್ದೇಶಕರಾಗಲು ಕಾರಣವಾಯಿತು ಎನ್ನುತ್ತಾರೆ. ಕತೆಗೆ ತಕ್ಕಂತೆ ಗ್ರಾಮೀಣ ಹಿನ್ನೆಲೆಯಲ್ಲಿ ಚಿತ್ರೀಕರಿಸಿಕೊಂಡು ಬಂದಿದ್ದಾರೆ.