ಐರಾಳಿಗೆ ಕಿವಿ ಚುಚ್ಚಿಸಿದ ರಾಕಿಂಗ್ ದಂಪತಿ | ಮಗಳು ಅತ್ತಿದ್ದನ್ನು ನೋಡಿ ಕಣ್ಣೀರಿಟ್ಟ ಯಶ್ | ತಂದೆ- ಮಗಳ ಭಾವನಾತ್ಮಕ ಸಂಬಂಧ ನೋಡಿ ಭಾವುಕರಾದ ರಾಧಿಕಾ 

ರಾಕಿಂಗ್ ಸ್ಟಾರ್ ದಂಪತಿ ಮುದ್ದು ಮಗಳು ಐರಾಗೆ ಕಿವಿ ಚುಚ್ಚಿಸಿದ್ದಾರೆ. ಚುಚ್ಚುವ ವೇಳೆ ನೋವಿನಿಂದ ಐರಾ ಅತ್ತಾಗ ಯಶ್ ಕೂಡಾ ಕಣ್ಣೀರು ಹಾಕಿದ್ದಾರೆ. 

ಮಗಳು ಐರಾ ಜೊತೆಗಿರುವ ಫೋಟೋವನ್ನು ರಾಧಿಕಾ ಶೇರ್ ಮಾಡಿ, ನಾವು ಐರಾಳಿಗೆ ಕಿವಿ ಚುಚ್ಚಿಸಿದೆವು. ಈ ಸಂದರ್ಭದಲ್ಲಿ ಪೋಷಕರಾಗಿ ನಾವು ಅಲ್ಲಿರುವುದು ತುಂಬಾ ಕಷ್ಟದ ಸನ್ನಿವೇಶ. ಅವಳು ತುಂಬಾ ಅತ್ತಾಗ ನಮಗೆ ಹೃದಯವೇ ಬಾಯಿಗೆ ಬಂದಂತಾಗಿತ್ತು. ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ಕಣ್ಣಲ್ಲಿ ನೀರು ನೋಡಿದೆ. ಈ ಸಂಬಂಧ ಎಷ್ಟು ಅಮೂಲ್ಯವಾದದ್ದು ಎಂದು ನನಗರ್ಥವಾಯಿತು. ಅಪ್ಪ-ಮಗಳು ಕ್ಷೇಮವಾಗಿದ್ದಾರೆ ಎಂದು ರಾಧಿಕಾ ಹೇಳಿದ್ದಾರೆ. 

View post on Instagram

ಕೃಷ್ಣಾಷ್ಟಮಿ ದಿನದಂದು ಐರಾಳಿಗೆ ಕೃಷ್ಣನ ವೇಷ ಹಾಕಿ ಫೋಟೋ ಶೇರ್ ಮಾಡಿದ್ದರು. 

View post on Instagram

ಕೆಲ ದಿನಗಳ ಹಿಂದೆ ಐರಾಳ ಜೊತೆಗಿನ ಪ್ರತಿಯೊಂದು ಕ್ಷಣವನ್ನು ಮೆಮೋರೆಬಲ್ ಆಗಿಡಲು ಅವಳ ಪುಟಾಣಿ ಕೈ ಕಾಲುಗಳ ಅಚ್ಚನ್ನು ಮಾಡಿಸಿದ್ದರು. ಆರ್ಟಿಸ್ಟ್ ಪ್ರಶಾಂತ್ ಅವರು ಅದನ್ನು ಮಾಡಿದ್ದರು. ಇದು ತುಂಬಾ ಗಮನ ಸೆಳೆದಿದೆ. 

View post on Instagram