ಪಿಯು ಜೀವನದ ಅತ್ಯುತ್ತಮ ಘಟ್ಟ ಹೌದು. ಆದರೆ, ಅದೇ ಅಂತಿಮ ಘಟ್ಟವಲ್ಲ. ಪಿಯುಯಲ್ಲಿ ಕಡಿಮೆ ಅಂಕಗಳು ಬಂತು ಅಥವಾ ಫೇಲ್ ಆದರೆಂದ ಕೂಡಲೇ ಜೀವನವೇ ಮುಗಿಯಿತು ಎಂದರ್ಥವಲ್ಲ. ಮತ್ತೊಂದೆಡೆ ಬಾಗಿಲು ತೆಗೆದಿದೆ ಎಂದರ್ಥ. ಎಂದು ನಟ ಮಾಸ್ಟರ್ ಆನಂದ್ ವಿದ್ಯಾರ್ಥಿಗಳಿಗೊಂದು ಆಪ್ತ ಪತ್ರವೊಂದನ್ನು ಬರೆದಿದ್ದಾರೆ.
ಬೆಂಗಳೂರು (ಏ.30): ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದೆ. ಅತ್ಯುತ್ತಮ ಅಂಕಗಳನ್ನು ಪಡೆದವರ ಸಂಭ್ರಮಕ್ಕೆ ಸಂತೋಷ. ಆದರೆ, ಕಡಿಮೆ ಅಂಕ ಪಡೆದವರಿಗೆ ಇದುವೇ ಜೀವನವಲ್ಲ ಎಂಬುದನ್ನು ನಟ, ನಿರ್ದೇಶಕ ಮಾಸ್ಟರ್ ಆನಂದ್ ಮನ ಮುಟ್ಟುವಂಥ ಪತ್ರವೊಂದನ್ನು ಬರೆಯುವ ಮೂಲಕ ಮನದಟ್ಟು ಮಾಡಿಕೊಟ್ಟಿದ್ದಾರೆ.
'ಪರೀಕ್ಷೆಯಲ್ಲಿ ಅನುತ್ತೀರ್ಣವೆಂದ ಕೂಡಲೇ ಜೀವನದಲ್ಲಿಯೇ ಫೇಲಾದ್ರಿ ಎಂದಲ್ಲ. ಜೀವನದಲ್ಲಿ ಪಾಸ್ ಆಗುವ ಪರೀಕ್ಷೆಗಳು ಸಾಕಷ್ಟು ಇವೆ,' ಎಂದಿದ್ದಾರೆ.
'ಅನುತ್ತೀರ್ಣರಾದರೆಂದ ಕೂಡಲೇ ಆಕಾಶವೇ ತಲೆ ಮೇಲೆ ಬಿದ್ದಂತೆ ಅನೇಕರು ವರ್ತಿಸುತ್ತಾರೆ. ಕೆಲವರು ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಇಂಥ ನಿರ್ಧಾರಕ್ಕೆ ಬರಬೇಡಿ,' ಎಂದು ಆತ್ಮವಿಶ್ವಾಸ ಕಳೆದುಕೊಂಡ ವಿದ್ಯಾರ್ಥಿ ಸಮೂಹಕ್ಕೆ ಆನಂದ್ ಆಗ್ರಹಿಸಿದ್ದಾರೆ.
"
'ಫೇಲಾದವರೆಲ್ಲರೂ ಕಷ್ಟದಲ್ಲಿಲ್ಲ. ಬದುಕಿಗೆ ಬದುಕಲು ಇನ್ನೊಂದು ಅವಕಾಶ ಕೊಡಿ. ಈಗ ಮುಚ್ಚಿರುವ ಬಾಗಿಲು ಇನ್ನೊಂದು ಕಡೆ ತೆರೆದಿರುತ್ತದೆ,' ಎಂದು ಆನಂದ್ ಹೆಚ್ಚಿನ ಅಂಕ ತೆಗೆಯುವಲ್ಲಿ ವಿಫಲರಾದ ಮಕ್ಕಳನ್ನು ಹುರಿದುಂಬಿಸಿ, ಲಾಂಗ್ ಡ್ರೈವ್ ಕರೆದುಕೊಂಡು ಹೋಗಿ ಎಂದು ಪೋಷಕರಿಗೂ ಕಿವಿಮಾತು ಹೇಳಿದ್ದಾರೆ.
'ನಾನೂ ದ್ವಿತೀಯ ಪಿಯುಸಿ ಫೇಲಾದವನೇ, ಫೇಲಾದೋನೆ ಪಾಸ್ ಆಗೋದು. ಪಿಯುಸಿ ಜೀವನದ ಮುಖ್ಯ ಘಟ್ಟ ಹೌದು. ಆದರೆ, ಅದೇ ಕೊನೆ ಘಟ್ಟವಲ್ಲ,' ಎಂದು ನೊಂದ ಮನಸ್ಸುಗಳಿಗೆ ಆಪ್ತ ಸಲಹೆ ನೀಡಿದ್ದಾರೆ.

Last Updated 30, Apr 2018, 8:10 PM IST