ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಫೇಮಸ್ ವೀಕೆಂಡ್ ಶೋ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಹಾಟ್ ಸೀಟ್‌ನಲ್ಲಿ ಕಾಣಿಸಿಕೊಂಡ ಕಾಮಿಡಿ ಕಿಂಗ್ ಕಮ್ ಆ್ಯಕ್ಟರ್ ಶರಣ್ ಬಾಲ್ಯದ ಫೋಟೋವಿದು.

ಖ್ಯಾತ ನಿರ್ದೇಶಕನಿಂದ 10.ರೂ ಪಡೆದು ಧನ್ಯನಾದ ಶರಣ್!

8 ನೇ ತರಗತಿಯಲ್ಲಿದ್ದಾಗ ಚಿಕ್ಕಬಳ್ಳಾಪುರದಲ್ಲಿ ವ್ಯಾಸಂಗ ಮಾಡುತ್ತಿದ್ದ ಶರಣ್ ಶಾಲಾ ದಿನಗಳಲ್ಲಿ ಕಲಾವಿದನಾಗಬೇಕು ಎನ್ನುವ ನಿರ್ಧಾರ ಮಾಡಿದರು. ಅದಕ್ಕಾಗಿ ಎಲ್ಲಾ ಶೈಲಿಯ ನೃತ್ಯ ಕಲಿತ್ತಿದ್ದರು. ಡಾ. ವಿಷ್ಣುವರ್ಧನ್ 'ಖೈದಿ' ಚಿತ್ರದ 'ತಾಳಿ ಹೂವ ಪೊದೆಯಿಂದ ಜಾರಿ ಜಾರಿ ಹೊರಬಂದ' ಎಂದ ಫೇಮಸ್ ಹಾಡಿಗೆ ನಾಗಿಣಿಯಾಗಿ ಹೆಜ್ಜೆ ಹಾಕಿದ್ದರು.

ಆಹಾರ ಕೊಡದೆ ನಾರಾಯಣ ಮೂರ್ತಿಗೆ ಹಿಂಸೆ ನೀಡಿದ ಸಿಬ್ಬಂದಿ!

ಇನ್ನು ವಿಶೇಷವೇನೆಂದರೆ ಈ ಫೋಟೋ ಅವರ ಜೀವನದ ಮೊದಲ ಡ್ಯಾನ್ಸ್ ಫೋಟೋ ಆಗಿದ್ದು ಅದನ್ನು ಶರಣ್ ಡ್ಯಾನ್ಸ್ ಗುರುಗಳಾದ ರೂಪ ಮೇಡಂ ಶೇರ್ ಹಂಚಿಕೊಂಡಿದ್ದರು. ಸಿನಿಮಾದಲ್ಲಿ ನಟನಾದ ಮೇಲೆ ಶರಣ್‌ ಡ್ಯಾನ್ಸ್ ಮಾಡುವುದು ಅನಿವಾರ್ಯವಾಯ್ತು. ಆದರೆ ಗುಡ್‌ ನ್ಯೂಸ್ ಅಂದ್ರೆ ಶರಣ್‌ ಸಿಕ್ಕಾಪಟ್ಟೆ ಹೆಜ್ಜೆ ಹಾಕಿರುವ ಹಾಡುಗಳು ಹಿಟ್‌ ಆಗಿದೆ.