ಸಿನಿಮಾಗಳಲ್ಲಿ ಕಾಮಿಡಿ ಕಮಾಲ್‌ ಹೆಚ್ಚಿಸಿ, ಹೈ ಪೇಯ್ಡ್ ಪಟ್ಟಿಯಲ್ಲಿ ನಿಂತಿರುವ ಆ್ಯಕ್ಟರ್ ಕಮ್ ಕಾಮಿಡಿಯನ್ ಶರಣ್ ತನ್ನ ಮೊದಲ ನಾಟಕ ನೋಡಿ 10 ರೂ. ಕೊಟ್ಟ ದಿಗ್ಗಜನ ನಟನ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನೆನೆದಿದ್ದಾರೆ.

ನಟಿ ಶ್ರುತಿ ಅವರ ಅಣ್ಣ ಶರಣ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಬೈ ಮಿಸ್ ಆಗಿಯೇ ಹೊರತು ಇದೇ ಕನಸು ಕಟ್ಟಿಕೊಂಡವರಲ್ಲ. ಗುಬ್ಬಿ ವೀರಣ್ಣ ಕಂಪನಿಯಲ್ಲಿ ತಾತ ಕೆಲಸ ಮಾಡಿದ್ದು ತಂದೆ ಸ್ವಂತಃ ನಾಟಕ ಕಂಪನಿ ನೆಡೆಸುತ್ತಿದ್ದರು. ಮಗನೂ ಅದೇ ಹಾದಿಯಲ್ಲಿ ನಡೆಯಲಿ ಎಂಬುವುದು ಶರಣ್ ತಂದೆ ಕನಸಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಹಾರ ಕೊಡದೆ ನಾರಾಯಣ ಮೂರ್ತಿಗೆ ಹಿಂಸೆ ನೀಡಿದ ಸಿಬ್ಬಂದಿ!

ಜೀವನದಲ್ಲಿ ಅಪಾರ ಕನಸು ಕಂಡು ಏನೋ ಮಾಡಲು ಹೋಗಿ, ಏನೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಎಲ್ಲರನ್ನೂ ನಗೆಗಡಲಲ್ಲಿ ಮುಳುಗಿಸುತ್ತಾರೆ ಶರಣ್. ಸತತ ಹಿಟ್ ಸಿನಿಮಾಗಳನ್ನು ನೀಡುತ್ತಾ ಅಪಾರ ಅಭಿಮಾನಿಗಳನ್ನು ಹೊಂದಿರುವ ಕಲಾವಿದ ಶರಣ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ತಂದೆ ನಾಟಕ ಕಂಪನಿ ಹೊಂದಿದ ಕಾರಣ ಸಣ್ಣ ವಯಸ್ಸಿನಲ್ಲಿಯೇ ಶರಣ್ ತಂದೆಯೊಂದಿಗೆ ಕಾಮಿಡಿ ಪಾತ್ರಗಳನ್ನು ಮಾಡುತ್ತಿದ್ದರಂತೆ. ನಾಟಕ ನೋಡಲು ಬಂದಿದ್ದ ನಿರ್ದೇಶಕ ಹಾಗೂ ನಟ ದ್ವಾರಕೀಶ್, ಆ ಚಿಕ್ಕವಯಸ್ಸಿಗೇ ಶರಣ್‌ಗಿದ್ದ ಕಾಮಿಡಿ ಸೆನ್ಸ್ ನೋಡಿ ಕೈಯಿಗೆ 10 ರೂಪಾಯಿ ನೀಡಿದ್ದರಂತೆ. ಆಗ ಕೇವಲ 10 ರೂ. ಪಡೆದು ಸಂತೋಷ ಪಟ್ಟ ನಟನಿಗೆ ಈಗ ಲಕ್ಷಾಂತರ ಸಂಭಾವನೆ ಪಡೆಯುವಂತಾಗಿರುವುದೂ ಸಾಧನೆಯಲ್ಲವೇ?

ಮಂಡ್ಯದ ಸ್ವಾಭಿಮಾನಿ ಜನತೆಗೆ ರಾಕ್ ಲೈನ್ ವೆಂಕಟೇಶ್ ಗಿಫ್ಟ್!