Asianet Suvarna News Asianet Suvarna News

ಆಹಾರ ಕೊಡದೆ ನಾರಾಯಣ ಮೂರ್ತಿಗೆ ಹಿಂಸೆ ನೀಡಿದ ಸಿಬ್ಬಂದಿ!

 

ಐಟಿ ದಿಗ್ಗಜ ಇನ್ಫೋಸಿಸ್ ಹರಿಕಾರ ನಾರಾಯಣಮೂರ್ತಿ ಒಂದು ಕಾಲದಲ್ಲಿ ಕಷ್ಟ ಅವಮಾನವನ್ನು ಎದುರಿಸಿ ಮೇಲೆ ಬಂದವರು. ಇನ್ಫೋಸಿಸ್ ನಂತಹ ದೈತ್ಯ ಕಂಪನಿ ಕಟ್ಟುವ ಹಿಂದೆ ಇವರ ಶ್ರಮ ಬಹಳಷ್ಟಿದೆ. ತಾವು ಕಂಪನಿಯನ್ನು ಕಟ್ಟಿ ಬೆಳೆಸಿದ ಕಥೆಯನ್ನು ಹೇಳುವಾಗ ಕಷ್ಟದ ದಿನಗಳನ್ನು ನೆನೆಸಿಕೊಂಡಿದ್ದಾರೆ.

Infosys Narayana Murthy shares Paris police station incident Weekend with ramesh
Author
Bangalore, First Published Jun 14, 2019, 1:09 PM IST

 

ಜಗತ್ತಿನ ದೊಡ್ಡ ಶ್ರೀಮಂತರಲ್ಲಿ ಒಬ್ಬರಾದ ನಾರಾಯಣ ಮೂರ್ತಿಗೆ ಅನ್ನ, ನೀರು ಇಲ್ಲದೆ ಖೈದಿಯಂತೆ ಕೋಣೆಯಲ್ಲಿ 4 ದಿನಗಳ ಕಾಲ ಬಂಧಿಸಲಾಗಿತ್ತು.

ಮಂಡ್ಯದ ಸ್ವಾಭಿಮಾನಿ ಜನತೆಗೆ ರಾಕ್ ಲೈನ್ ವೆಂಕಟೇಶ್ ಗಿಫ್ಟ್!

ಒಮ್ಮೆ ಪ್ಯಾರೀಸ್‌ ನಿಂದ ನಿಶ್ ಪಟ್ಟಣಕ್ಕೆ ಪ್ರಯಾಣ ಮಾಡುವಾಗ ನಾರಾಯಣ ಮೂರ್ತಿ ಬಳಿ ಇಟಾಲಿಯನ್‌ ದುಡ್ಡು ಇತ್ತು. ಈ ಕಾರಣದಿಂದ ಊಟ ಮಾಡಲು ಕಷ್ಟವಾಗುತ್ತಿತ್ತು. ಏನಾದರೂ ಮಾಡಿ ಬೆಳಗ್ಗೆ ಸಿಟಿಯಲ್ಲಿ ಹಣ ಬದಲಾಯಿಸಬೇಕೆಂದು ಟ್ರೇನ್‌ನಲ್ಲಿ ಪ್ರವಾಸ ಮಾಡುವಾಗ ಎದುರಿಗಿದ್ದ ಹುಡುಗನನ್ನು ಮೊದಲು ಇಂಗ್ಲಿಷ್ ನಲ್ಲಿ ಮಾತನಾಡಿಸಿದರು. ಅವರು ಉತ್ತರ ಕೊಡಲಿಲ್ಲ. ಆ ನಂತರ ರಷ್ಯಾ ಭಾಷೆಯಲ್ಲಿ ಮಾತನಾಡಿಸಿದರೂ ಉತ್ತರ ಸಿಗಲಿಲ್ಲ. ಕೊನೆಗೆ ಜರ್ಮನ್‌ನಲ್ಲಿ ಮಾತನಾಡಿಸಲು ಪ್ರಯತ್ನಪಟ್ಟರು ಆದರೆ ಅದನ್ನು ತಪ್ಪು ತಿಳಿದುಕೊಂಡು ಅವರು ಪೊಲೀಸ್‌ಗೆ ದೂರು ನೀಡುತ್ತಾರೆ.

ರಿಕ್ಷಾದಲ್ಲಿ ಸುಧಾ ಮೂರ್ತಿಗೆ ಪ್ರಪೋಸ್ ಮಾಡಿದ್ದ ಇನ್ಫೋಸಿಸ್ ಮಾಲೀಕ!

ಪೊಲೀಸರು ಠಾಣೆಗೆ ಕರೆದೊಯ್ಯುತ್ತಾರೆ. ಭಾನುವಾರ ರಾತ್ರಿ ಕರೆದೊಯ್ದು ಬುಧವಾರ ರಾತ್ರಿ ಹೊರಗೆ ಬಿಟ್ಟಿದ್ದಾರೆ. ಅನ್ನ ನೀರು ಕೊಡದೇ ಸತಾಯಿಸಿದ್ದಾರೆ. 8 ಅಡಿ ಕೋಣೆಯಲ್ಲಿ ಅದೂ ಟಾಯ್ಲೆಟ್‌ ಪಕ್ಕ ಇದ್ದು ಹಿಂಸೆ ಅನುಭವಿಸಿದ್ದನ್ನು ವೀಕೆಂಟ್ ವಿತ್ ರಮೇಶ್ ನಲ್ಲಿ ನೆನೆಸಿಕೊಂಡಿದ್ದಾರೆ.

Follow Us:
Download App:
  • android
  • ios