ಬಿಗ್‌ಬಾಸ್ ಮೂಲಕ ಜನರ ಮನಸ್ಸು ಗೆದ್ದ ಶ್ರದ್ಧಾವಂತ ಕಲಾವಿಂದ ಭುವನ್ ಪೊನ್ನಣ್ಣ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅವರು ವಿಭಿನ್ನ ಗೆಟಪ್‌ನಲ್ಲಿ ಅಭಿನಯಿಸಿರುವ ಬಹುನಿರೀಕ್ಷಿತ ರಾಂಧವ ಸಿನಿಮಾ ಜಯಣ್ಣ ಕಂಬೈನ್ಸ್ ಮೂಲಕ ಜುಲೈ 26 ರಂದು ಬಿಡುಗಡೆಯಾಗುತ್ತಿದೆ.

ಟ್ರೋಲ್ ಆಯ್ತು ಸಮೀರಾ ರೆಡ್ಡಿ ಅಂಡರ್‌ವಾಟರ್ ಫೋಟೋಶೂಟ್‌!

11 ಸಿನಿಮಾ ರಿಜೆಕ್ಟ್ ಮಾಡಿ ‘ರಾಂಧವ’ ಕೈಗೆತ್ತಿಕೊಂಡಿದ್ದರ ವಿಶೇಷವೇನು?

ನನಗೆ ಲವರ್ ಬಾಯ್ ಥರದ, ಮರ ಸುತ್ತೋ ರೀತಿಯ ಸಿನಿಮಾಗಳೇ ಬರ‌್ತಾ ಇದ್ದಿದ್ದು. ಅಂಥಾ ಸಿನಿಮಾಗಳಲ್ಲಿ ಆ್ಯಕ್ಟ್ ಮಾಡೋದಕ್ಕಿಂತ ಬೇರೇನಾದ್ರೂ ಕೆಲ್ಸ ಮಾಡೋದು ಬೆಟರ್ ಅನಿಸ್ತು. ಹಾಗಾಗಿ ಒಪ್ಕೊಳ್ಳಲಿಲ್ಲ. ಆದರೆ ‘ರಾಂಧ ವ’ ಹಾಗಲ್ಲ.

ನಿರ್ದೇಶಕ ಸುನಿಲ್ ಅವರು ಕತೆ ಯನ್ನ ವಿವರಿಸಿದ್ದೇ ದೂಸ್ರಾ ಮಾತಾಡದೇ ‘ಎಸ್’ ಅಂದೆ. ಅಷ್ಟಿಷ್ಟ ಆಗಿತ್ತು ಕತೆ. ಮೂರು ಕಾಲಘಟ್ಟಗಳಲ್ಲಿ ಈ ಕತೆ ಚಲಿಸುತ್ತೆ. ರಾಘವ, ರಾಬರ್ಟ್ ಹಾಗೂ ರಾಣಾ ಎಂಬ ಪಾತ್ರಗಳು ಒಂದಕ್ಕಿಂತ ಒಂದು ಭಿನ್ನ. ಸಖತ್ ಚಾಲೆಂಜಿಂಗ್.

ಬೆಂಗಳೂರಿನಲ್ಲಿ ಕೆಜಿಎಫ್ ಗಾಗಿ ನಿರ್ಮಾಣ ಆಯ್ತು ‘ನರಾಚಿ’

ಎರಡು ವರ್ಷ ಎಳೆಯಿತು ಸಿನಿಮಾ, ಏನ್ಕತೆ?

ಅದಕ್ಕೆ ಕಾರಣ ಇದರ ಕಥೆ. ಅದು ಅಷ್ಟು ಸಮಯ ಬೇಡ್ತಿತ್ತು. ಮೂರು ಕಾಲ ಘಟ್ಟಗಳ ಪಾತ್ರ ಅಂದ್ನಲ್ಲ. ಪ್ರತಿಯೊಂದು ಪಾತ್ರವೂ ಭಿನ್ನ. ರಾಬರ್ಟ್ ಅನ್ನೋ ಪಾತ್ರ ಒಬ್ಬ ಪಕ್ಷಿತಜ್ಞನದು. ಅತ್ಯಂತ ಕಡಿಮೆ
ಮಾತುಗಳಲ್ಲಿ ಎಲ್ಲವನ್ನೂ ಹೇಳುವಂಥಾ ಪಾತ್ರ.

ಇನ್ನೊಂದು ರಾಘವ ಅನ್ನುವ ಪುರಾಣದ ಪಾತ್ರ. ಸಣ್ಣ ಮೈಕಟ್ಟಿನ ಹುಡುಗು ಮನಸ್ಸಿನ ಕ್ಯಾರೆಕ್ಟರ್ ಅದು. ಇನ್ನೊಂದು ರಾಣಾ. ಅದು ಮಾಸ್ ಆಡಿಯನ್ಸ್‌ಗೆ ಇಷ್ಟವಾಗುವಂಥಾದ್ದು. ಸಖತ್ ಜೋಶ್‌ನ ಹೀರೋ ಅವನು.

ರಾಣಾ ಬಗ್ಗೆ ಹೆಚ್ಚು ಹೇಳಲ್ಲ. ಆ ಪಾತ್ರವನ್ನು ಸಿನಿಮಾದಲ್ಲಿ ನೋಡಿದ್ರೇ ಮಜಾ. ಇದರಲ್ಲಿ ಬಳಸಲಾದ ತಂತ್ರಜ್ಞಾನ ಈವರೆಗೆ ಬಂದ ಕನ್ನಡ ಸಿನಿಮಾಗಳಲ್ಲಿ ಕಾಣದ್ದು. ಅದಕ್ಕೂ ಸಮಯ ಹಿಡಿಯಿತು. 

ಮೂರು ಸಂಪೂರ್ಣ ವಿರುದ್ಧ ಬಗೆಯ ಪಾತ್ರಗಳು. ಅದಕ್ಕಾಗಿ ಸಿದ್ಧತೆ ಹೇಗಿತ್ತು?

ಅದನ್ನ ನೆನೆಸ್ಕೊಂಡ್ರೇ ಮೈ ಜುಮ್ ಅನ್ನತ್ತೆ. ರಾಬರ್ಟ್ ಪಾತ್ರ ಸಖತ್ ಚಾಲೆಂಜಿಂಗ್. ಅದು ನನ್ನ ಸ್ವಭಾವಕ್ಕೆ ತದ್ವಿರುದ್ಧ. ನಾನೋ ಎಲ್ಲರ ಜೊತೆಗೆ ಫ್ರೆಂಡ್ಲಿಯಾಗಿರುವ ಸೋಶಿಯಲ್ ವ್ಯಕ್ತಿ. ಈ ಪಾತ್ರಕ್ಕೆ ಬಹಳ ಕಡಿಮೆ ಮಾತು. ಬಹಳ ಸೀರಿಯಸ್, ಅಷ್ಟೇ ರಿಸರ್ವ್ಡ್. ನಾನು ಈ ಪಾತ್ರಕ್ಕಾಗಿ 3 ತಿಂಗಳು ಮನೆಯೊಳಗೆ ಬಂಧಿಯಾಗಿದ್ದೆ.

ಅಡುಗೆಯವನೊಬ್ಬ ಜೊತೆಗಿದ್ದ ಅಷ್ಟೇ. ಮೊಬೈಲ್, ಲ್ಯಾಪ್‌ಟಾಪ್ ಏನಿಲ್ಲ. ಗೋಡೆಯ ತುಂಬ ‘ಡೋಂಟ್ ಸ್ಮೈಲ್’, ‘ಲುಕ್ ಸೀರಿಯಸ್’ ಅಂತೆಲ್ಲ ನೋಟ್‌ಗಳು. ಇಡೀ ದಿನ ಒಂಟಿಯಾಗಿ ಆ ಕ್ಯಾರೆಕ್ಟರ್ ಥರ ಜೀವಿಸಲು ಪ್ರಯತ್ನಿಸುತ್ತಿದ್ದೆ.

ಆ ಮೂರು ತಿಂಗಳು ಕಳೆದಾಗ ಅಕ್ಷರಶಃ ಸೈಕೋ ಥರಾನೇ ಆಗಿಬಿಟ್ಟಿದ್ದೆ. ಇದರಿಂದ ಆ ಪಾತ್ರದೊಳಗೆ ಪ್ರವೇಶಿಸುವುದು ಸಾಧ್ಯವಾಯ್ತು. ಇನ್ನೊಂದು ಪಾತ್ರ ರಾಘವ ಎಂಬ ರಾಜಕುಮಾರನದು. ಇದಕ್ಕಾಗಿ ಏಳೆಂಟು ಕೇಜಿ ತೂಕ ಕಳೆದುಕೊಳ್ಳಬೇಕಿತ್ತು. ಹನ್ನೆರಡು ದಿನ ಗ್ಯಾಪ್ ತಗೊಂಡೆ.

ಆ ವೇಳೆ ರಾಜ್‌ಕುಮಾರ್ ಅವರ ‘ಮಯೂರ’, ದರ್ಶನ್ ಅಭಿನಯದ ‘ಸಂಗೊಳ್ಳಿ ರಾಯಣ್ಣ’ ಸಿನಿಮಾಗಳನ್ನೆಲ್ಲ ನೋಡಿದೆ. ರಾಘವ ಪಾತ್ರದ ಕಲ್ಪನೆ ಬಂತು. ರಾಣಾ ಪಾತ್ರಕ್ಕೂ ಒಂದಿಷ್ಟು ತಯಾರಿ ಬೇಕಾಯ್ತು. ಒಟ್ಟಾರೆ ಸಿದ್ಧತೆ ಭಲೇ ಜೋರಾಗಿತು. 

ನಾಯಕಿಯ ಜೊತೆಗೆ ಕೆಮಿಸ್ಟ್ರಿ ಹೇಗಿತ್ತು?

ಹೀರೋಯಿನ್‌ಗಳಿಂದ ನಮಗೆ ಬೇಕಾದ ಸಪೋರ್ಟ್ ಸಿಕ್ಕಿಲ್ಲ. ನಾನು ನಾಲ್ಕೂವರೆಗೆ ಎದ್ದು, ಐದೂವರೆಗೆಲ್ಲ ರೆಡಿಯಾಗಿ ಆರೂ ಕಾಲು ಗಂಟೆಗೆ ಮೇಕಪ್ ಮುಗಿಸಿ ರೆಡಿಯಾಗಿರ‌್ತಿದ್ದೆ. ನಾಯಕಿಯರಲ್ಲಿ ಒಬ್ಬಳು ಹೊಸಬಳು. ಹಾಗಿದ್ದೂ ಬದ್ಧತೆ ಇರಲಿಲ್ಲ. ಮಧ್ಯಾಹ್ನ ಒಂದೂವರೆಯಷ್ಟು ಹೊತ್ತಿಗೆ ಬರ‌್ತಿದ್ರು.

ರಿಹರ್ಸಲ್‌ಗೂ ಬರ‌್ತಿರಲಿಲ್ಲ. ಬಹಳ ತೊಂದರೆ ಅನುಭವಿಸಿದ್ವಿ. ನನ್ನ ಮೊದಲ ಸಿನಿಮಾದ ಹೀರೋಯಿನ್ ಅಂದರೆ ಏನೇನೋ ಕಲ್ಪನೆ ಇತ್ತು. ಆದರೆ ಎಲ್ಲಾ ಉಲ್ಟಾಪಲ್ಟಾ ಆಯ್ತು. ಮೂರು ಜನ ಹೀರೋಯಿನ್ ಇದ್ದಾರೆ. ಅವರಲ್ಲಿ ಇಬ್ರು ಹೀಗಿದ್ರು. ಇನ್ನೊಬ್ರ ವಿಷ್ಯ ಬೇಡ.

- ಪ್ರಿಯಾ ಕೆರ್ವಾಶೆ