ಚಿತ್ರದ ನಾಯಕ ಶೀಲಮ್ ಹಾಗೂ ನಾಯಕಿ ಸಾತ್ವಿಕಾ ಅವರಿಬ್ಬರನ್ನೂ ನಿರ್ಧಿಷ್ಟ ದೃಶ್ಯದ ಶೂಟಿಂಗ್ ಸಲುವಾಗಿ ಹಗ್ಗದಲ್ಲಿ ಮೇಲಕ್ಕೆ ಎಳೆಯಲಾಗುತ್ತಿತ್ತು. ನಾಯಕ ಹಗ್ಗದಲ್ಲಿ ಇರುವಾಗಲೇ ನಾಯಕಿ ಬ್ಯಾಲೆನ್ಸ್ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಆಗ ನಾಯಕ ಹಗ್ಗದಲ್ಲಿ..
ಕನ್ನಡದ ನಿರ್ದೇಶಕ ಸಿಂಪಲ್ ಸುನಿ ಶೂಟಿಂಗ್‌ನಲ್ಲಿ ಅವಘಡ ಸಂಭವಿಸಿದೆ. ಶೂಟಿಂಗ್ ಸಮಯದಲ್ಲಿ ಈ ಚಿತ್ರದ ನಾಯಕಿ ಅಯ ತಪ್ಪಿ ಬಿದ್ದಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಹೊಸ ಸಿನಿಮಾ 'ಮೋಡ ಕವಿದ ವಾತಾವರಣ' ಚಿತ್ರದ ಶೂಟಿಂಗ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಹಗ್ಗದಲ್ಲಿ ಚಿತ್ರದ ನಾಯಕ ಹಾಗೂ ನಾಯಕಿ ನೇತಾಡುವ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದಾಗ, ಚಿತ್ರದ ನಾಯಕಿ ಸಾತ್ವಿಕಾ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದ್ದಾರೆ.

ಚಿತ್ರದ ನಾಯಕ ಶೀಲಮ್ ಹಾಗೂ ನಾಯಕಿ ಸಾತ್ವಿಕಾ ಅವರಿಬ್ಬರನ್ನೂ ನಿರ್ಧಿಷ್ಟ ದೃಶ್ಯದ ಶೂಟಿಂಗ್ ಸಲುವಾಗಿ ಹಗ್ಗದಲ್ಲಿ ಮೇಲಕ್ಕೆ ಎಳೆಯಲಾಗುತ್ತಿತ್ತು. ನಾಯಕ ಹಗ್ಗದಲ್ಲಿ ಇರುವಾಗಲೇ ನಾಯಕಿ ಬ್ಯಾಲೆನ್ಸ್ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಆಗ ನಾಯಕ ಹಗ್ಗದಲ್ಲಿ ನೇತಾಡುವಂತಾಗಿದೆ. ನಟಿಗೆ ಯಾವುದೇ ಗಂಭೀರ ಅಥವಾ ಗಾಯ ಅಗಿಲ್ಲ. ಸ್ವಲ್ಪದರಲ್ಲೇ ಆಗಬಹುದಾಗಿದ್ದ ಅಪಾರ ಅಪಾಯ ತಪ್ಪಿದೆ ಎನ್ನಲಾಗಿದೆ. ಇದೀಗ ಈ ಅವಘಡದ ಸುದ್ದಿ ಮೀಡಿಯಾ ಮೂಲಕ ವೈರಲ್ ಆಗುತ್ತಿದೆ.
ನಟಿ ಸಾತ್ವಿಕಾ ಅವರು ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಮಗಳು. ಶೀಲಮ್ ಹಾಗೂ ಸಾತ್ವಿಕಾ ಜೋಡಿ ಇದೀಗ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಮೂಲಕ ಖ್ಯಾತಿ ಪಡೆದಿರುವ ನಿರ್ದೇಶಕ ಸುನಿಯವರ ಮುಂಬರುವ ಸಿನಿಮಾ ‘ಮೋಡ ಕವಿದ ವಾತಾವರಣ’ದಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಈ ಚಿತ್ರದ ಹಾಡಿನ ಶೂಟಿಂಗ್ ನಡೆಯುತ್ತಿದೆ. ಹಗ್ಗದಲ್ಲಿ ಮೇಲಕ್ಕೆ ಹೋಗುತ್ತಿರುವಾಗ ಈ ಅಪಘಾತ ಸಂಭವಿಸಿದೆ. ತಕ್ಷಣ ನಟಿಯನ್ನು ಚಿತ್ರತಂಡ ಆರೈಕೆ ಮಾಡಿದೆ.
