ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಪುತ್ರಿ ಇರಾ ಖಾನ್ ಅಪ್ಲೋಡ್ ಮಾಡಿರುವ ಪ್ರೈವೇಟ್ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹುಡುಗನೊಬ್ಬನ ಜೊತೆ ಫೋಟೋ ಅಪ್ಲೋಡ್ ಮಾಡುತ್ತಿರುವ ಇರಾ ಖಾನ್ ಇದೀಗ ಮತ್ತೊಮ್ಮ ಸದ್ದು ಮಾಡುತ್ತಿದ್ದಾರೆ.

ಬೀಚ್ ಬಳಿ ಇಬ್ಬರೂ ಸ್ವಿಮಿಂಗ್ ಸೂಟ್‌ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಹರಿದು ಬರುತ್ತಿರುವ ಕಾಮೆಂಟ್ ನೋಡಿದರೆ ಇಬ್ಬರು ಡೇಟ್ ಮಾಡುತ್ತಿರುವ ಹಾಗೆ ಕಾಣುತ್ತಿದೆ. ಕೆಲ ದಿನಗಳ ಹಿಂದೆ ಈತನೊಂದಿಗೆ ಇರಾ ಕಿಸ್ಸಿಂಗ್ ಫೋಟೋ ಅಪ್ಲೋಡ್ ಮಾಡಿ ಕ್ಯಾಪ್ಷನ್ ಬರೆದು ಹಾಕಿಕೊಂಡಿದ್ದರು. ಆದರೆ ಈ ಬಾರಿ ಫೋಟೋ ಅಪ್ಲೋಡ್ ಮಾಡಿರುವುದು ಅ ಯುವಕನೇ.

View post on Instagram

ಇರಾ ಜೊತೆ ಇರುವ ಗೆಳೆಯ ಮಿಶಾಲ್ ಕಿರ್ಪಲಾನಿ ಎಂದು ತಿಳಿದು ಬಂದಿದೆ. ಮೂಲತಃ ಆ್ಯಕ್ಟರ್ ಆ್ಯಂಡ್ ಮ್ಯೂಸಿಕ್ ಕಂಪೊಸರ್.

ಅಮೀರ್ ಪುತ್ರಿಗೆ ಮುತ್ತಿಡುತ್ತಿರೋ ಈ ಯುವಕನಾರು?