ಬಾಲಿವುಡ್ ಪರ್ಫೆಕ್ಟ್ ಸ್ಟಾರ್ ಅಮೀರ್ ಖಾನ್ ಪುತ್ರಿ ಯುವಕನೊಂದಿಗಿರೋ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದು, ವೈರಲ್ ಆಗುತ್ತಿದೆ. ಅಷ್ಟಕ್ಕೂ ಯಾರೀತ? ಏನು ಹಿನ್ನೆಲೆ?
ಬಾಲಿವುಡ್ ದಿ ಮೋಸ್ಟ್ ಮಿ.ಪರ್ಫೆಕ್ಟ್ ಆ್ಯಂಡ್ ಜೆಂಟಲ್ ಮ್ಯಾನ್ ಅಂದ್ರೆ ಅಮೀರ್ ಖಾನ್, ಸಿನಿಮಾ ಕ್ಷೇತ್ರದಲ್ಲೂ ಹಾಗೂ ನಿಜ ಜೀವನದಲ್ಲೂ ಪರ್ಫೆಕ್ಟ್. ಇದೀಗ ಸುದ್ದಿಯಾಗುತ್ತಿರುವುದು ಲಗಾನ್ ಹೀರೋ ಅಲ್ಲ. ಬದಲಾಗಿ ಅವರ ಮಗಳು!
ಅಮೀರ್ ಮಗಳು ಇರಾ ಖಾನ್ ತನ್ನ ಗೆಳೆಯನೊಂದಿಗೆ ಮುತ್ತು ಪಡೆಯುತ್ತಿರುವ ಫೋಟೋವೊಂದನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಇವರಿಬ್ಬರೂ ಡೇಟ್ ಮಾಡುತ್ತಿದ್ದಾರೆ ಎಂದು ಮಾತನಾಡಿ ಕೊಳ್ಳುತ್ತಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಆದರೆ ಇದೇ ಗೆಳೆಯನೊಂದಿಗಿರುವ ಇರುವ ಸಾಕಷ್ಟು ಫೋಟೋಗಳನ್ನೂ ಅಪ್ಲೋಡ್ ಮಾಡಿದ್ದಾರೆ ಇರಾ.
ಮುತ್ತು ಕೊಟ್ಟ ಚೋರನಾರು?
ಇರಾ ಜೊತೆ ಫೋಟೋದಲ್ಲಿ ಇರುವವನ ಹೆಸರು ವಿಶಾಲ್ . ನಟ, ಮ್ಯೂಸಿಕ್ ಕಂಪೋಸರ್ ಹಾಗೂ ನಿರ್ದೇಶಕ.
ವಿಶಾಲ್ ಜೊತೆ ಮೂರು ಫೋಟೋ ಅಪ್ಲೋಡ್ ಮಾಡಿ ‘Hope your Spring Break was sunny and smiley as @mishaalkirpalani's, which of course, I piled onto @sahirahoshidar’ ಎಂದು ಬರೆದಿದ್ದಾರೆ.
ವಿಶಾಲ್ ಬಗ್ಗೆಯಾಗಲೀ ಅಥವಾ ಅವರೊಂದಿಗೆ ಇರಾ ಹೊಂದಿರುವ ಸಂಬಂಧದ ಬಗ್ಗೆಯಾಗಲಿ ಇನ್ನೂ ಹೆಚ್ಚಿನ ಮಾಹಿತಿ ಮಾತ್ರ ಇಲ್ಲ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 28, 2019, 3:13 PM IST