Thriller Short Movie: ಕೇರಳದ ಅರಣ್ಯ ಪ್ರದೇಶದಲ್ಲಿ ಫೋಟೋಗ್ರಾಫರ್ ರಿಷಿಗೆ ಎದುರಾಗುವ ಭಯಾನಕ ಅನುಭವಗಳನ್ನು ಈ ಕಿರುಚಿತ್ರ ಚಿತ್ರಿಸುತ್ತದೆ. 

Malayalam Short Film: ಇಂದು ಭಾರತದ ಇಡೀ ಚಿತ್ರರಂಗ ಮಲಯಾಳಂ ಭಾಷೆಯ ಸಿನಿಮಾಗಳತ್ತ ಮುಖ ಮಾಡುತ್ತಿದೆ. ಮಾಲಿವುಡ್‌ ಅಂಗಳದ ಸಿನಿಮಾಗಳು ತುಂಬಾ ಸರಳ ಕತೆಯನ್ನು ಹೊಂದಿರುತ್ತವೆ. ಸೀಮಿತ ಪ್ರದೇಶ ಮತ್ತು ಕೆಲವೇ ಕೆಲ ಪಾತ್ರಗಳ ನಡುವೆ ಚಿತ್ರದ ಕತೆ ಸಾಗುತ್ತದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗುವ ಮಲಯಾಳಂ ಸಿನಿಮಾಗಳು ಮೂರರಿಂದ ನಾಲ್ಕು ಪಟ್ಟು ಲಾಭವನ್ನು ತಮ್ಮದಾಗಿಸಿಕೊಳ್ಳುತ್ತವೆ. ಇಂದು ನಾವು ಹೇಳುತ್ತಿರುವ ಕಿರುಚಿತ್ರವನ್ನು ಉಚಿತವಾಗಿ ಯುಟ್ಯೂಬ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಕೇವಲ 13 ನಿಮಿಷದ ಈ ಕಿರುಚಿತ್ರದಲ್ಲಿ ಮೂರು ಪಾತ್ರಗಳಿದ್ದು, ಕ್ಲೈಮ್ಯಾಕ್ಸ್‌ ನಿಮ್ಮಲ್ಲಿ ಭಯವನ್ನುಂಟು ಮಾಡುತ್ತದೆ.

ಈ ಕಿರುಚಿತ್ರವನ್ನು Pocket Film ಯುಟ್ಯೂಬ್‌ ಚಾನೆಲ್‌ನಲ್ಲಿ ವೀಕ್ಷಿಸಬಹುದು. 2018ರಂದು ಅಪ್ಲೋಡ್ ಆಗಿರುವ Thriller Short Film - Yakshi - (a demon in disguise) ಕಿರುಚಿತ್ರ 30 ಲಕ್ಷಕ್ಕೂ ಅಧಿಕ ವ್ಯೂವ್‌ ಪಡೆದುಕೊಂಡಿದೆ. ಈ ಕಿರುಚಿತ್ರ ನೋಡಿದ್ರೆ ಪ್ರತಿಯೊಬ್ಬ ವೀಕ್ಷಕರು ಮೆಚ್ಚುಗೆ ಸೂಚಿಸಿ ಕಮೆಂಟ್ ಬಾಕ್ಸ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಯಕ್ಷಿ ಕಿರುಚಿತ್ರ ನೋಡಿದ್ಮೇಲೆ ಒಂಟಿ ರಸ್ತೆಯಲ್ಲಿ ಅಪರಿಚಿತರಿಗೆ ಡ್ರಾಪ್‌ ಕೊಡಬೇಕಾ ಎಂಬ ಪ್ರಶ್ನೆ ಮೂಡುತ್ತದೆ.

ಯಕ್ಷಿ ಕಥೆ ಏನು?

ರಿಷಿ ಎಂಬ ಫೋಟೋಗ್ರಾಫರ್ ಕೇರಳದ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿರುತ್ತಾನೆ. ಫೋಟೋ ಕ್ಲಿಕ್ ಮಾಡುತ್ತಾ ದಟ್ಟವಾದ ಅರಣ್ಯದೊಳಗೆ ಬಂದಿರುತ್ತಾನೆ. ಕೊನೆಗೆ ಹೇಗೋ ಮುಖ್ಯರಸ್ತೆಗೆ ಬರುತ್ತಾನೆ. ಈ ವೇಳೆ ಕಾರ್‌ನಲ್ಲಿ ಬಂದ ಸ್ಥಳೀಯ ವ್ಯಕ್ತಿಯೋರ್ವ, ಇಂದು ನಮ್ಮಲ್ಲಿ ಪ್ರತಿಭಟನೆ ನಡೆಯುತ್ತಿದೆ. ಹಾಗಾಗಿ ಯಾವುದೇ ಬಸ್, ಆಟೋ ಸಿಗಲ್ಲ. ಬೇಕಿದ್ರೆ ನಿಮಗೆ ನಾನು ಡ್ರಾಪ್ ಮಾಡುವೆ ಎಂದು ಹೇಳುತ್ತಾನೆ. ಇಲ್ಲಿಂದ ರಿಷಿ ಮತ್ತು ಸ್ಥಳೀಯ ವ್ಯಕ್ತಿಯ ಪ್ರಯಾಣ ಆರಂಭವಾಗುತ್ತದೆ. ಈ ವೇಳೆ ರಿಷಿ ನಿಂತಿದ್ದ ಜಾಗ ಎಷ್ಟು ಅಪಾಯಕಾರಿ ಎಂದು ವಿವರಿಸಲು ಆರಂಭಿಸುತ್ತಾನೆ.

ರಿಷಿ ನಿಂತಿದ್ದ ಬೃಹತ್ ಮರದಲ್ಲಿ ಯಕ್ಷಿ (ದೆವ್ವ) ವಾಸವಾಗಿದ್ದಾಳೆ. ಮಂತ್ರವಾದಿಗಳೊಬ್ಬರು ಆ ಮರಕ್ಕೆ ಮೊಳೆ ಹೊಡೆದು ಆಕೆಯನ್ನು ಬಂಧಿಸಿದ್ದಾರೆ. ಆ ಮೊಳೆ ಇರೋವರೆಗೂ ಯಕ್ಷ ಆ ಮರದಲ್ಲಿರುತ್ತಾಳೆ. ಆಗ ರಿಷಿ, ನಾನು ಯಕ್ಷಿಯನ್ನು ಸ್ವತಂತ್ರ ಮಾಡಿದ್ದೇನೆ. ಮರದ ಮೊಳೆಗೆ ನನ್ನ ಬ್ಯಾಗ್ ಹಾಕಿದ್ದೆ ಎಂದು ಹೇಳುತ್ತಾನೆ. ಈ ವಿಷಯ ತಿಳಿಯುತ್ತಿದ್ದಂತೆ ಚಾಲಕ ಭಯಗೊಳ್ಳುತ್ತಾನೆ. ಈ ವೇಳೆ ನೋಡ ನೋಡುತ್ತಿದ್ದಂತೆ ಮಹಿಳೆ ರಸ್ತೆಗೆ ಅಡ್ಡಲಾಗಿ ಬರುತ್ತಾಳೆ. ಕೂಡಲೇ ಬ್ರೇಕ್ ಹಾಕಿ ಕಾರ್ ನಿಲ್ಲಿಸುತ್ತಾನೆ. ನಂತರ ಆ ಮಹಿಳೆಗೆ ಕ್ಲಾಸ್ ತೆಗೆದುಕೊಳ್ಳುತ್ತಾನೆ.

ರಿಷಿ, ಮಹಿಳೆ ಮತ್ತು ಕಾರ್ ಚಾಲಕ

ನಂತರ ಆಕೆಯನ್ನು ಕೊಚ್ಚಿಗೆ ಡ್ರಾಪ್ ಕೊಡಲು ಒಪ್ಪಿ ಕಾರ್‌ನಲ್ಲಿ ಕುಳಿತುಕೊಳ್ಳುವಂತೆ ಹೇಳುತ್ತಾನೆ. ಇಲ್ಲಿಂದ ಮಹಿಳೆ ಸೇರಿದಂತೆ ಮೂವರ ಪ್ರಯಾಣ ಆರಂಭವಾಗುತ್ತದೆ. ಕಾರ್ ಚಾಲಕ, ಈ ಹಿಂದೆ ಆರು ಜನರು ಸಾವನ್ನಪ್ಪಿದ್ದಾರೆ. ಅದಕ್ಕೆಲ್ಲವೂ ಯಕ್ಷಿಯೇ ಕಾರಣ. ಯಾವುದೇ ರೂಪದಲ್ಲಾದರು ಯಕ್ಷಿ ಕಾಣಿಸಿಕೊಳ್ಳಬಹುದು. ಸ್ವಲ್ಪ ಮುಂದೆ ಹೋಗ್ತಿದ್ದಂರೆ ಕಾರ್ ನಿಲ್ಲಿಸಿ, ನನಗೆ ಇಲ್ಲಿ ಕೆಲಸವಿದೆ. ಇಲ್ಲೇ ಸುಂದರವಾದ ಜಲಪಾತವಿದ್ದು, ಫೋಟೋ ಕ್ಲಿಕ್ಕಿಸಿಕೊಳ್ಳಿ ಎಂದು ಸಲಹೆ ನೀಡುತ್ತಾನೆ.

ಫೋಟೋದಿಂದ ಕಿರುಚಿತ್ರದಲ್ಲಿ ಬಿಗ್ ಟ್ವಿಸ್ಟ್

ರಿಷಿ ಫೋಟೋ ಕ್ಲಿಕ್ಕಿಸಲು ಕಾಡಿನೊಳಗೆ ಹೋಗುತ್ತಾನೆ. ಮಹಿಳೆ ಕಾರ್‌ನಲ್ಲಿಯೇ ಕುಳಿತುಕೊಳ್ಳುತ್ತಾಳೆ. ಕಾರ್ ಚಾಲಕ ಸ್ಮೋಕ್ ಮಾಡುತ್ತಿರುವಾಗ ಆತನ ಮೊಬೈಲ್‌ಗೆ ಫೋಟೋ ಬರುತ್ತದೆ. ಫೋಟೋ ನೋಡುತ್ತಿದ್ದಂತೆ ಕಾರ್ ಚಾಲಕ ಭಯಗೊಳ್ಳುತ್ತಾನೆ. ಅಷ್ಟರಲ್ಲಿಯೇ ಆತನ ಹೆಗಲ ಮೇಲೊಂದು ಕೈ ಕಾಣಿಸಿಕೊಳ್ಳುತ್ತದೆ. ಆತನ ಮೊಬೈಲ್‌ಗೆ ಬಂದ ಫೋಟೋ ಯಾರದ್ದು? ಕಾಡಿನೊಳಗೆ ಹೋದ ರಿಷಿ ಏನಾದ? ಕಾರ್‌ನಲ್ಲಿದ್ದ ಮಹಿಳೆ ಯಾರು ಎಂದು ತಿಳಿದುಕೊಳ್ಳಲು ಈ ಕಿರುಚಿತ್ರ ವೀಕ್ಷಿಸಬೇಕು. ಥ್ರಿಲ್ಲರ್ ಕತೆಯನ್ನು ಹೊಂದಿರುವ ಯಕ್ಷಿ ಕಿರುಚಿತ್ರ ನೋಡಲು ಈ ಕೆಳಗಿರುವ ಲಿಂಕ್ ಮೇಲೆ ಮಾಡಿ.

https://www.youtube.com/watch?v=8phLqwdnrjU

YouTube video player