Asianet Suvarna News Asianet Suvarna News

ಕುಟುಂಬ ರಾಜಕಾರಣದಲ್ಲಿ ವಿಫಲರಾದ ನಾಯಕರಿವರು!

ರಾಜಕಾರಣದಲ್ಲಿ ಕುಟುಂಬ ರಾಜಕಾರಣ ಹೆಚ್ಚಾಗುತ್ತಿದೆ | ಕುಟುಂಬ ರಾಜಕಾರಣದಲ್ಲಿ ಸಾಕಷ್ಟು ಧುರೀಣರು ವಿಫಲರಾಗಿದ್ದಾರೆ | ಯಾರ್ಯಾರು ವಿಫಲರಾಗಿದ್ದಾರೆ? ಇಲ್ಲಿದೆ ನೋಡಿ. 

List of leaders who failed in family politics
Author
Bengaluru, First Published Apr 2, 2019, 1:47 PM IST

ಒಂದು ಕಾಲದಲ್ಲಿ ದಿಲ್ಲಿಯಲ್ಲೂ ಆಟ ಆಡುತ್ತಿದ್ದ ಕರ್ನಾಟಕದ ಪವರ್ ಫುಲ್ ನಾಯಕರ ಕುಟುಂಬಗಳು ನೇಪಥ್ಯಕ್ಕೆ ಸರಿದ ಬೇಕಾದಷ್ಟು ಉದಾಹರಣೆಗಳಿವೆ.

ನಿಜಲಿಂಗಪ್ಪ, ದೇವರಾಜ್ ಅರಸ್, ರಾಮಕೃಷ್ಣ ಹೆಗಡೆ ಪ್ರಧಾನಿ ಆಗಬಹುದು ಎಂಬ ಸಾಮರ್ಥ್ಯವಿದ್ದ ನಾಯಕರನ್ನು ತಯಾರು ಮಾಡಿದರೂ ಕೂಡ ಅವರು ಕಾಲವಾದ ನಂತರ ಅವರ ಹಿಂಬಾಲಕರು ಕುಟುಂಬದ ಕುಡಿಗಳನ್ನು ರಾಜಕೀಯಕ್ಕೆ ತರೋದು ಬಿಡಿ, ಮಾತನಾಡಿಸಲೂ ಇಲ್ಲ. ಇನ್ನು ಕರ್ನಾಟಕದ ಮಟ್ಟಿಗೆ ಪವರ್ ಫುಲ್ ಆಗಿದ್ದ ಜೆ.ಎಚ್ ಪಟೇಲ್ ಮಕ್ಕಳು ರಾಜಕೀಯದಲ್ಲಿ ಫೇಲ್ ಆದರೆ ಗುಂಡೂರಾವ್ ಮಗ ದಿನೇಶ್ ಮತ್ತು ಬೊಮ್ಮಾಯಿ ಪುತ್ರ ಬಸವರಾಜ್ ತಂದೆ ತೀರಿಕೊಂಡ ಬಳಿಕ ಸೈಕಲ್ ಹೊಡೆದು ತಮ್ಮದೇ ಒಂದು ಆಸ್ತಿತ್ವ ಈಗ ಕಂಡುಕೊಂಡಿದ್ದಾರೆ. 

ನರೇಂದ್ರ ಮೋದಿ ಉತ್ತರಾಧಿಕಾರಿ ಯಾರು?

ಬಿಜೆಪಿಯಲ್ಲಿ ಪವರ್‌ಫುಲ್ ಆಗಿದ್ದ ಅನಂತ ಕುಮಾರ್ ಕುಟುಂಬದ ಸ್ಥಿತಿ ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ಏನೋ, ಪಕ್ಷದ ಹಿಂಬಾಲಕರಲ್ಲಿ ಅಸಮಾಧಾನ ಇದ್ದರೂ ಕೂಡ ಯಡಿಯೂರಪ್ಪ, ಮಲ್ಲಿಕಾರ್ಜುನ್ ಖರ್ಗೆ ಮತ್ತು ಸಿದ್ದರಾಮಯ್ಯ ತಮ್ಮ ಎದುರೇ ಮಕ್ಕಳಿಗೆ ಅಧಿಕಾರ ಕೊಡಿಸಿದರೆ, ದೇವೇಗೌಡರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮೊಮ್ಮಕ್ಕಳಿಗೂ ಅಧಿಕಾರ ಕೊಡಿಸಲು ಹೆಣಗುತ್ತಿದ್ದಾರೆ. 

ಸಿದ್ದರಾಮಯ್ಯ ಚಾಲೆಂಜ್ ಸ್ವೀಕರಿಸಿದ ಪ್ರತಾಪ್ ಸಿಂಹ

2018 ರಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿಗೆ, ‘ಮಕ್ಕಳ ಟಿಕೆಟ್‌ಗೆ ಇಷ್ಟೊಂದು ಹಟ ಯಾಕೆ’ ಎಂದು ಕೇಳಿದಾಗ ಅವರು ಕೊಟ್ಟ ಉತ್ತರ; ‘ನಾನು ಒಬ್ಬ ನಾಯಕನ ಜೊತೆಗೆ ಒಬ್ಬ ತಂದೆಯೂ ಹೌದಯ್ಯ’ ಎಂದು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ 

 

Follow Us:
Download App:
  • android
  • ios