ಬೆಂಗಳೂರು(ಏ.02): ಲೋಕಸಭೆ ಚುನಾವಣೆಗೆ ಇಡೀ ದೇಶವೇ ಸಜ್ಜಾಗಿದೆ. ಅದರಂತೆ ರಾಜ್ಯ ರಾಜಧಾನಿ ಬೆಂಗಳೂರು ಕೂಡ ಮತದಾನಕ್ಕೆ ಕಾತರದಿಂದ ಕಾದು ಕುಳಿತಿದೆ.

ಬೆಂಗಳೂರಿನಲ್ಲಿ ಒಟ್ಟು ಮೂರು ಲೋಕಸಭಾ ಕ್ಷೇತ್ರಗಳಿದ್ದು, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಉತ್ತರ ಎಂಬ ಮೂರು ಲೋಕಸಭಾ ಕ್ಷೇತ್ರಗಳಿದ್ದು, ನಗರದ ಒಟ್ಟು 24 ವಿಧಾನಸಭಾ ಕ್ಷೇತ್ರಗಳು ಇವುಗಳ ವ್ಯಾಪ್ತಿಗೆ ಒಳಪಡುತ್ತವೆ.

ಅಷ್ಟೇ ಅಲ್ಲದೇ ಬಿಬಿಎಂಪಿಯ ವ್ಯಾಪ್ತಿಯಲ್ಲಿ ಒಟ್ಟು 198 ವಾರ್ಡ್ ಗಳು ಬರುತ್ತವೆ. ಈ ಎಲ್ಲಾ ವಾರ್ಡ್ ಗಳು ವಿಧಾನಸಭಾ ಕ್ಷೇತ್ರ ಮತ್ತು ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿಕೆಯಾಗಿವೆ.

ಅದರಂತೆ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 198 ವಾರ್ಡ್ ಗಳು ಮತ್ತು ಅವು ಒಳಪಡುವ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ವಾರ್ಡ್ ವಾರು ಮಾಹಿತಿ ಪಡೆದು ಸರಿಯಾದ ಮತಗಟ್ಟೆಯಲ್ಲಿ ಮತ ಚಲಾಯಿಸುವಂತೆ ನಿಮ್ಮ ಸುವರ್ಣನ್ಯೂಸ್.ಕಾಂ ಮನವಿ ಮಾಡುತ್ತದೆ.

ಬೆಂಗಳೂರು ದಕ್ಷಿಣ:

ನಗರದ ಪ್ರಮುಖ ಲೋಕಸಭಾ ಕ್ಷೇತ್ರವಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ.

1. ಗೋವಿಂದರಾಜ್ ನಗರ-166

2. ವಿಜಯನಗರ-167

3. ಚಿಕ್ಕಪೇಟೆ-169

4. ಬಸವನಗುಡಿ-170

5. ಪದ್ಮನಾಭನಗರ-171

6. ಬಿಟಿಎಂ ಲೇಔಟ್-172

7. ಜಯನಗರ-173

8.ಬೊಮ್ಮನಹಳ್ಳಿ-175-

 

ಅದರಂತೆ ಬೆಂಗಳಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 61 ಬಿಬಿಎಂಪಿ ವಾರ್ಡ್ ಬರುತ್ತವೆ.

ಬಸವನಗುಡಿ-170:

154-ಬಸವನಗುಡಿ

155-ಹನುಮಂತನಗರ

156-ಶ್ರೀನಗರ

162-ಗಿರಿನಗರ

163-ಕತ್ರಿಗುಪ್ಪೆ

164-ವಿದ್ಯಾಪೀಠ

ಬೊಮ್ಮನಹಳ್ಳಿ-175:

174-ಹೆಚ್.ಎಸ್.ಆರ್ ಲೇಔಟ್

175-ಬೊಮ್ಮನಹಳ್ಳಿ

186-ಜರಗನಹಳ್ಳಿ

187-ಪುಟ್ಟೇನಹಳ್ಳಿ

188-ಬಿಲೆಕ್ ಹಳ್ಳಿ

189-ಹೊಂಗಸಂದ್ರ

190-ಮಂಗನಮ್ಮಪಾಳ್ಯ

193-ಅರಕೆರೆ

ಬಿಟಿಎಂ ಲೇಔಟ್-172:

146-ಲಕ್ಕಸಂದ್ರ

147-ಆಡುಗೋಡಿ

148-ಈಜಿಪುರ

151-ಕೋರಮಂಗಲ

152-ಸುದ್ದುಗುಂಟೆಪಾಳ್ಯ

172-ಮಡಿವಾಳ

173-ಜಕ್ಕಸಂದ್ರ

176-ಬಿಟಿಎಂ ಲೇಔಟ್

ಚಿಕ್ಕಪೇಟೆ-169:

118-ಸುಧಾನಮನಗರ

119-ಧರ್ಮಸ್ವಾಮಿ ದೇವಸ್ಥಾನ

142-ಸುಖೇನಹಳ್ಳಿ

143-ವಿಶ್ವೇಶ್ವರಪುರಂ

144-ಸಿದ್ದಾಪೂರ

145-ಹೊಂಬೆಗೌಡನಗರ

153-ಜಯನಗರ

ಗೋವಿಂದರಾಜ್ ನಗರ-166:

103-ಕಾವೇರಿಪುರ ಗೋವಿಂದರಾಜ್ ನಗರ

104-ಗೋವಿಂದರಾಜ್ ನಗರ

105-ಅಗ್ರಹಾರ ದಾಸರಹಳ್ಳಿ

106-ಡಾ. ರಾಜಕುಮಾರ್ ವಾರ್ಡ್

125-ಮಾರೇನಹಳ್ಳಿ

126-ಮಾರುತಿ ಮಂದಿರ

127-ಮೂಡಲಪಾಳ್ಯ

128-ನಾಗರಬಾವಿ

131-ನಾಯಂಡಹಳ್ಳಿ

ಜಯನಗರ-173:

168-ಪಟ್ಟಾಭಿರಾಮನಗರ

169-ಬ್ಯಾರಸಂದ್ರ

170-ಜಯನಗರ ಪೂರ್ವ

171-ಗುರಪ್ಪನಪಾಳ್ಯ

177-ಜೆ.ಪಿ. ನಗರ

178-ಸಾರಕ್ಕಿ

179-ಶಾಖಂಬರಿನಗರ

ಪದ್ಮನಾಭನಗರ-171:

161-ಹೊಸಕೆರೆಹಳ್ಳಿ

165-ಗಣೇಶ ದೇವಸ್ಥಾನ

166-ಕರಿಸಂದ್ರ

167-ಯಡಿಯೂರು

180-ಬನಶಂಕರಿ ದೇವಸ್ಥಾನ

181-ಕುಮಾರಸ್ವಾಮಿ ಲೇಔಟ್

182-ಪದ್ಮನಾಭನಗರ

183-ಚಿಕ್ಕಲಸಂದ್ರ

ವಿಜಯನಗರ-167:

122-ಕೆಂಪಾಪುರ

123-ವಿಜಯನಗರ

124-ಹೊಸಹಳ್ಳಿ

132-ಅತಿಗುಪ್ಪೆ

133-ಹಂಪಿನಗರ

134-ಬಾಪೂಜಿನಗರ

157-ಗಾಳಿ ಆಂಜನೇಯ ದೇವಸ್ಥಾನ

158-ದೀಪಾಂಜಲಿನಗರ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವಿಧಾನಸಭೆ ಕ್ಷೇತ್ರ ಮತ್ತು ಜನಪ್ರತಿನಿಧಿಗಳು:

1. ಗೋವಿಂದರಾಜ್ ನಗರ-166-ಬಿಜೆಪಿ-ವಿ. ಸೋಮಣ್ಣ

2. ವಿಜಯನಗರ-167-ಕಾಂಗ್ರೆಸ್-ಎಂ. ಕೃಷ್ಣಪ್ಪ

3. ಚಿಕ್ಕಪೇಟೆ-169-ಬಿಜೆಪಿ-ಉದಯ್ ಗರುಡಾಚಾರ್

4. ಬಸವನಗುಡಿ-170-ಬಿಜೆಪಿ- ರವಿ ಸುಬ್ರಮಣ್ಯ

5. ಪದ್ಮನಾಭನಗರ-171-ಬಿಜೆಪಿ-ಆರ್. ಅಶೋಕ್

6. ಬಿಟಿಎಂ ಲೇಔಟ್-172-ಕಾಂಗ್ರೆಸ್-ರಾಮಲಿಂಗಾರೆಡ್ಡಿ

7. ಜಯನಗರ-173-ಕಾಂಗ್ರೆಸ್-ಸೌಮ್ಯ ರೆಡ್ಡಿ

8.ಬೊಮ್ಮನಹಳ್ಳಿ-175-ಬಿಜೆಪಿ-ಸತೀಶ್ ರೆಡ್ಡಿ

2019ರ ಲೋಕಸಭೆ ಚುನಾವಣೆಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಬಿ.ಕೆ. ಹರಿಪ್ರಸಾದ್ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಕಣಕ್ಕಿಳಿದಿದ್ದಾರೆ.