ದಿಲ್ಲಿ ಪಕ್ಕದ ಫರೀದಾಬಾದ್ ಸೀಟ್‌ಗೆ ಕಾಂಗ್ರೆಸ್ ಟಿಕೆಟನ್ನು ಮೊದಲಿಗೆ ರಾಬರ್ಟ್ ವಾದ್ರಾ ಅವರು ಭೂಪಿಂದರ್ ಸಿಂಗ್ ಹೂಡಾ ಮೇಲೆ ಒತ್ತಡ ಹಾಕಿ ತನ್ನ ಶಿಷ್ಯ ಲಲಿತ್ ನಾಗರ್‌ಗೆ ಕೊಡಿಸಿದ್ದರು. ಆದರೆ ಯಾವಾಗ ರಾಹುಲ್ ಗಾಂಧಿಗೆ ಇದರ ಹಿಂದಿನ ಆಟದ ಅರಿವಾಯಿತೋ, ಕೂಡಲೇ ಪ್ರಿಯಾಂಕಾಗೆ ಫೋನ್ ಮಾಡಿ ಸಿಟ್ಟಿನಿಂದ ಭಾವನ ಹಸ್ತಕ್ಷೇಪದ ಬಗ್ಗೆ ಹೇಳಿದ್ದಾರೆ.

ಹಿಂದುತ್ವ ಫಾರ್ಮುಲದಿಂದ ಮೋಡಿ ಮಾಡ್ತಾರಾ ಮೋದಿ?

ನಂತರ ರಾಹುಲ್, ಪ್ರಿಯಾಂಕಾ ಸೇರಿಕೊಂಡು ಲಲಿತ್ ಹೆಸರನ್ನು ಬದಲಾಯಿಸಿ, ಅವತಾರ ಸಿಂಗ್ ಭಡಾನಾ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಇದರಿಂದ ಮುನಿಸಿಕೊಂಡ ಅಳಿಯ ದೇವರು 4 ದಿನ ಪ್ರಚಾರಕ್ಕೇ ಹೋಗಲಿಲ್ಲವಂತೆ!

ಉತ್ತರ ಪ್ರದೇಶದಲ್ಲಿ ಮೋದಿ-ಶಾ ತಂತ್ರ ವರ್ಕೌಟ್ ಆಗುತ್ತಾ?

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ