ಕುರುಕ್ಷೇತ್ರ(ಮೇ.08): ತಮ್ಮ ಮೇಲೆ ಒಟ್ಟಾಗಿ ಮುಗಿ ಬಿದ್ದಿರುವ ವಿಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ಮೋದಿ, ವಿಪಕ್ಷಗಳ ‘ಲವ್ ಡಿಕ್ಷನರಿ’(ಪ್ರೀತಿಯ ನಿಘಂಟು)ಯಲ್ಲಿ ಕೇವಲ ದ್ವೇಷವಷ್ಟೇ ತುಂಬಿದೆ ಎಂದು ಹರಿಹಾಯ್ದಿದ್ದಾರೆ.

ಹರಿಯಾಣದ ಕುರುಕ್ಷೇತ್ರದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತಮ್ಮ ಮೇಲೆ ವಿಪಕ್ಷಗಳು ಯಾವ ಸಂದರ್ಭದಲ್ಲಿ ಎಂತಹ ಪದ ಬಳಕೆ ಮಾಡಿವೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಪ್ರಬುದ್ಧ ರಾಜಕಾರಣದ ಕುರಿತು ಮಾತನಾಡುವ ವಿಪಕ್ಷಗಳು, ನನ್ನ ಕುರಿತು ಆಡಿರುವ ಕೀಳು ಪದಗಳಿಗೂ ಜವಾಬ್ದಾರರು ಎಂದು ಮೋದಿ ಹೇಳಿದರು.

ವಿಪಕ್ಷಗಳು ನನ್ನನ್ನು ಅತ್ಯಂತ ಮೂರ್ಖ ಪಿಎಂ ಎಂದು ಕರೆದವು, ಸೈನಿಕರ ರಕ್ತದ ವ್ಯಾಪಾರಿ ಎಂದವು, ಹಿಟ್ಲರ್, ಮುಸುಲೋನಿ, ಗಡಾಫಿ ಹೀಗೆ ಏನೆಲ್ಲಾ ಕೀಳು ಭಾಷೆ ಬಳಸಿ ನಿಂದಿಸಬೇಕೋ ಅವೆಲ್ಲಾ ಬಳಸಿವೆ ಎಂದು ಮೋದಿ ಖೇದ ವ್ಯಕ್ತಪಡಿಸಿದರು.

"

ಇನ್ನು ಪ್ರಧಾನಿ ಮೋದಿ ವಿಪಕ್ಷಗಳ ದ್ವೇಷದ ಕುರಿತು ಮಾತನಾಡಿರುವ ಮಧ್ಯೆಯೇ, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೋದಿ ಅವರನ್ನು ದುಶ್ಯಾಸನನಿಗೆ ಹೋಲಿಕೆ ಮಾಡಿ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ