ಪಾಟ್ನಾ(ಮೇ.08): ಲೋಕಸಭೆ ಚುನಾವಣೆ ಅಂತಿಮ ಹಂತಕ್ಕೆ ಬಂದು ತಲುಪಿದ್ದು, ಇನ್ನೂ ಕೇವಲ ಎರಡು ಹಂತಗಳ ಮತದಾನ ಪ್ರಕ್ರಿಯೆ ಮಾತ್ರ ಬಾಕಿ ಇದೆ.

ಈ ಮಧ್ಯೆ ವಿಪಕ್ಷಗಳು ಒಟ್ಟಾಗಿ ಪ್ರಧಾನಿ ಮೋದಿ ಮೇಲೆ ಮುಗಿ ಬಿದ್ದಿದ್ದು, ಮೋದಿ ಅವಹೇಳನಕ್ಕೆ ಸಾಧ್ಯ ಇರುವ ಎಲ್ಲಾ ಮಾರ್ಗಗಳನ್ನು ಅನುಸರಿಸುತ್ತಿವೆ.

ಅದರಂತೆ ಆರ್'ಜೆಡಿ ಕೂಡ ಪ್ರಧಾನಿ ಮೋದಿ ಅವರನ್ನು ಅಣಕಿಸುವಲ್ಲಿ ಹಿಂದೆ ಬಿದ್ದಿಲ್ಲ. ಪ್ರಧಾನಿ ಮೋದಿ ಅವರ ಐದು ವರ್ಷಗಳ ಆಡಳಿತದ ಕುರಿತು ಆರ್’ಜೆಡಿ ಪ್ರಸಿದ್ಧ ನರ್ಸರಿ ರೈಮ್ ‘ಜಾನಿ ಜಾನಿ ಎಸ್ ಪಾಪಾ..’ ಹಾಡನ್ನು ಬಳಸಿಕೊಂಡಿದೆ.

‘ಮೋದಿ ಮೋದಿ ಎಸ್ ಪಾಪಾ..’ ಎಂಬ ಹಾಡನ್ನು ಟ್ವಿಟ್ಟರ್’ನಲ್ಲಿ ಶೇರ್ ಮಾಡಿರುವ ಆರ್’ಜೆಡಿ, ಮೋದಿ ಅವರ ಐದು ವರ್ಷಗಳ ಆಡಳಿತ ವೈಖರಿಯನ್ನು ಅಣಕಿಸಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ