ಚೆನ್ನೈ: ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟು ಬೇರಾವ ರಾಜ್ಯವು ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಬಿಜೆಪಿ ನಾಯಕರಿಗೆ ತಮಿಳುನಾಡು ಈ ಬಾರಿ ಭ್ರಮನಿರಸನ ಉಂಟು ಮಾಡಿದೆ.

ಮತದಾನ ನಡೆದ 38 ಲೋಕಸಭಾ ಕ್ಷೇತ್ರಗಳ ಪೈಕಿ ಸುಮಾರು 35ರಲ್ಲಿ ಕಾಂಗ್ರೆಸ್-ಡಿಎಂಕೆ [ಯುಪಿಎ] ಮೈತ್ರಿಕೂಟವು ಮುನ್ನಡೆ ಕಾಯ್ದುಕೊಂಡಿದ್ದರೆ, ಉಳಿದ ಮೂರರಲ್ಲಿ, ಎಐಡಿಎಂಕೆ-ಬಿಜೆಪಿ ಮೈತ್ರಿಕೂಟ [ಎನ್ ಡಿಎ] ಮುಂದಿದೆ.

ಇದನ್ನೂ ಓದಿ | ಪಟ್ನಾಯಕ್ ಕೋಟೆಯಲ್ಲಿ ಬಿರುಕು ಮೂಡಿಸಿದ ಮೋದಿ ಅಲೆ! | ಅಸೆಂಬ್ಲಿಗೆ ಓಕೆ, ಸಂಸತ್ತಿಗೆ ಯಾಕೆ? ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದ ಛತ್ತೀಸ್‌ಗಢ! | ದೆಹಲಿಯ 7 ಕ್ಷೇತ್ರದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್- AAP,ಕಾಂಗ್ರೆಸ್‌ಗೆ ಮುಖಭಂಗ!

2014ರಲ್ಲಿ ಜಯಲಲಿತಾ ನೇತೃತ್ವದ ಎಐಡಿಎಂಕೆ 37 ಸ್ಥಾನಗಳನ್ನು ಬಾಚಿಕೊಂಡಿತ್ತು. ಆದರೆ ಈ ಬಾರಿ ತಮಿಳರು, ಬಿಜೆಪಿ ಜೊತೆ ಸಖ್ಯ ಮಾಡಿಕೊಂಡಿದ್ದ ಇ. ಪಳನಿಸ್ವಾಮಿಗೆ  ಆಘಾತ ನೀಡಿದ್ದಾರೆ.

ರಾಜಕೀಯಕ್ಕೆ ಎಂಟ್ರಿ ನೀಡಿರುವ ಕಮಲ್ ಹಾಸನ್ ಪಕ್ಷ ಮಕ್ಕಳ್ ನೀತಿ ಮಯ್ಯಂ ಕೂಡಾ ಸ್ಪರ್ಧಿಸಿದೆ. ಎಐಡಿಎಂಕೆಯಿಂದ ಬೇರ್ಪಟ್ಟು ದಿನಕರನ್ ಹುಟ್ಟುಹಾಕಿದ್ದ ಅಮ್ಮ ಮಕ್ಕಳ್ ಮುನ್ನೇತ್ರ ಕಾಳಗಂ ಕೂಡಾ ಕಣದಲ್ಲಿದೆ.