Asianet Suvarna News Asianet Suvarna News

ಅಸೆಂಬ್ಲಿಗೆ ಓಕೆ, ಸಂಸತ್ತಿಗೆ ಯಾಕೆ? ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದ ಛತ್ತೀಸ್‌ಗಢ!

ಬಿಜೆಪಿ ಭದ್ರಕೋಟೆಯಾಗಿದ್ದ ಛತ್ತೀಸ್‌ಗಢ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗಿತ್ತು. ಮತದಾರರ ಒಲವಾಂತರ ಬಿಜೆಪಿಗೆ ತಲೆನೋವಾಗಿತ್ತು. ಈ ಬಾರಿಯ ಲೋಕಸಭೆ ಫಲಿತಾಂಶ ಹೇಗಿದೆ ನೋಡೋಣ...  

Loksabha Election Results 2019 Chhattisgarh Voters Favor BJP
Author
Bengaluru, First Published May 23, 2019, 4:55 PM IST

ರಾಯಪುರ:  ಉತ್ತರ ಭಾರತದ ಬಹುತೇಕ ರಾಜ್ಯಗಳ ಮತದಾರರು NDAಗೆ ಎರಡನೇ ಅವಕಾಶ ನೀಡಲು ನಿರ್ಧರಿಸಿದ್ದಾರೆ. ಅವುಗಳಲ್ಲಿ ನಕ್ಸಲ್ ಪೀಡಿತ ಛತ್ತೀಸ್‌ಗಢವೂ ಒಂದು.

ಈಗ ಲಭ್ಯವಿರುವ ಮಾಹಿತಿ ಪ್ರಕಾರ 11 ಲೋಕಸಭೆ ಕ್ಷೇತ್ರಗಳ ಪೈಕಿ, 8ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದರೆ, ಉಳಿದ 3 ಸೀಟುಗಳಲ್ಲಿ ಕಾಂಗ್ರೆಸ್ ಮುಂದಿದೆ.

ಇದನ್ನೂ ಓದಿ | ಗೆದ್ದು ಬೀಗಿದ ಸ್ಮೃತಿ, ಸುಮಲತಾ, ಯುಗಪುರುಷ ನಟಿಗೆ ಸೋಲೇ ಗತಿ!

2014 ಲೋಕಸಭೆ ಚುನಾವಣೆಯಲ್ಲಿ 10 ಮಂದಿ ಬಿಜೆಪಿ ಸಂಸದರನ್ನು ಛತ್ತೀಸ್‌ಗಢ ಮತದಾರರು ಆರಿಸಿ ಕಳುಹಿಸಿದ್ದರು.

ಬಿಜೆಪಿ ಭದ್ರಕೋಟೆಯಾಗಿದ್ದ ಈ ರಾಜ್ಯವು ಕಳೆದ (2018) ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿದಿದೆ. 90 ಸದಸ್ಯಬಲದ ವಿಧಾನಸಭೆಗೆ 68 ಕಾಂಗ್ರೆಸ್ ಸದಸ್ಯರನ್ನು ಇಲ್ಲಿನ ಮತದಾರರು ಆರಿಸಿ ಕಳುಹಿಸಿದ್ದಾರೆ. 

Follow Us:
Download App:
  • android
  • ios