Asianet Suvarna News Asianet Suvarna News

ಪಟ್ನಾಯಕ್ ಕೋಟೆಯಲ್ಲಿ ಬಿರುಕು ಮೂಡಿಸಿದ ಮೋದಿ ಅಲೆ!

ಮೋದಿ ಅಲೆಗೆ ಕಂಪಿಸಿದ ಬಿಜೆಡಿ ಭದ್ರಕೋಟೆ; ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಒಂದೂ ಸೀಟು ನೀಡದ ಮತದಾರ; ಈ ಬಾರಿ ಬಿಜೆಪಿ 7 ಸೀಟುಗಳಲ್ಲಿ ಮುನ್ನಡೆ  

Odisha Modi Wave Causes Tremors in Naveen Patnaik Stronghold
Author
Bengaluru, First Published May 23, 2019, 4:24 PM IST

ಭುವನೇಶ್ವರ:  ಶಿವ ದೇವಾಲಯಗಳಿಗೆ ಹೆಸರುವಾಸಿಯಾಗಿರುವ ಒಡಿಶಾ ಬುಡಕಟ್ಟು ಸಮುದಾಯಗಳ ನೆಲೆವೀಡು. ರಾಷ್ಟ್ರೀಯ ಪಕ್ಷಗಳ ಪಾಲಿಗೆ ಕಬ್ಬಿಣದ ಕಡಲೆಯಾಗಿರುವ ಒಡಿಶಾ, ಈ ಬಾರಿ ಮೋದಿ ಅಲೆಗೆ ನಲುಗಿದೆ.

2014ರಲ್ಲಿ, ಪ್ರಬಲ ಮೋದಿ ಅಲೆಯ ಹೊರತಾಗಿಯೂ, ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳವು (BJD)  21 ಲೋಕಸಭಾಗಳ ಪೈಕಿ 20 ಸ್ಥಾನಗಳನ್ನು ಬಾಚಿಕೊಂಡಿತ್ತು.

ಆದರೆ, ಈ ಬಾರಿಯ ಚುನಾವಣೆಯಲ್ಲಿ ಈಗ ಲಭ್ಯವಿರುವ ಮಾಹಿತಿ ಪ್ರಕಾರ BJDಯು 14 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, BJPಯು 7 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಳೆದ ಬಾರಿ 1 ಸ್ಥಾನವನ್ನು ಗಳಿಸಿದ್ದ ಕಾಂಗ್ರೆಸ್ ಈ ಬಾರಿ ಖಾತೆ ತೆರೆಯಲು ಹರಸಾಹಸ ಪಡುತ್ತಿದೆ.

ಇದನ್ನೂ ಓದಿ | ಸೋಲಿನತ್ತ ಮುಖಮಾಡುತ್ತಿದ್ದಂತೆ ಪ್ರಕಾಶ್ ರಾಜ್ ಹೋರಾಟದ ಟ್ವೀಟ್!

ಒಡಿಶಾದಲ್ಲಿ ಲೋಕಸಭೆ ಚುನಾವಣೆಯ ಜೊತೆಗೆ, 147 ಸದಸ್ಯ ಬಲದ ವಿಧಾನಸಭೆಗೂ ಚುನಾವಣೆ ನಡೆದಿದೆ. ರಾಜ್ಯದ ಅಧಿಕಾರ ಪಡೆಯಬೇಕಾದರೆ 74 ಮ್ಯಾಜಿಕ್ ನಂಬರ್ ದಾಟಬೇಕು.  

ಮಹಿಳೆಯರಿಗೆ ಟಿಕೆಟ್ ಹಂಚಿಕೆಯಲ್ಲೂ ಮೀಸಲಾತಿ ಜಾರಿ ಮಾಡುವ ಮೂಲಕ ನವೀನ್ ಪಟ್ನಾಯಕ್ ರಾಜ್ಯದ ಮಹಿಳಾ ಮತದಾರರ ಪ್ರಶಂಸೆಗೆ ಪಾತ್ರರಾಗಿದ್ದರು. 

ವಿಧಾನಸಭೆಯಲ್ಲೂ BJDಯದ್ದೇ ಪಾರುಪತ್ಯ. 147 ಬಲಾಬಲದ ವಿಧಾನಸಭೆಯಲ್ಲಿ, ಕಳೆದ (2014) ಚುನಾವಣೆಯಲ್ಲಿ BJD ಪಕ್ಷವು 117 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 16, BJPಯು 10 ಸ್ಥಾನಗಳನ್ನು ಮಾತ್ರ ಪಡೆದಿತ್ತು.

ವಿಧಾನಸಭಾ ಚುನಾವಣೆಯ ಮತ ಎಣಿಕೆಯೂ ನಡೆಯುತ್ತಿದ್ದು, ಲೇಟೆಸ್ಟ್ ಮಾಹಿತಿ ಪ್ರಕಾರ BJDಯು 104 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. BJP 29 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡರೆ, ಕಾಂಗ್ರೆಸ್ 13 ಸ್ಥಾನಗಳಲ್ಲಿ ಮುಂದಿದೆ.
 

Follow Us:
Download App:
  • android
  • ios