ನವದೆಹಲಿ[ಮಾ.24]: ಸತತ 5 ಅಥವಾ ಅದಕ್ಕಿಂತ ಹೆಚ್ಚು ಬಾರಿ ಜಯಭೇರಿ ಬಾರಿಸಿ ಲೋಕಸಭೆಗೆ ಆಯ್ಕೆಯಾದ 13 ಸಂಸದರು 16ನೇ ಲೋಕಸಭೆಯಲ್ಲಿದ್ದರು. ಆ ಪೈಕಿ ಕನಿಷ್ಠ 4 ಮಂದಿ ಲೋಕಸಭೆ ಚುನಾವಣೆಯಿಂದ ದೂರ ಉಳಿದಿದ್ದಾರೆ.

ಸತತ 9 ಸಲ ಆಯ್ಕೆಯಾಗಿದ್ದ ಕಾಂಗ್ರೆಸ್ಸಿನ ಕಮಲನಾಥ್‌ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿರುವುದರಿಂದ ಲೋಕಸಭೆ ಚುನಾವಣೆ ಅಖಾಡಕ್ಕೆ ಇಳಿಯುತ್ತಿಲ್ಲ. ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಗುಜರಾತಿನ ಗಾಂಧಿನಗರದಿಂದ ಸತತ 5 ಬಾರಿ ಗೆದ್ದುಬಂದಿದ್ದರು. ಅವರಿಗೆ ಈ ಸಲ ಬಿಜೆಪಿ ಟಿಕೆಟ್‌ ಸಿಕ್ಕಿಲ್ಲ. ಇನ್ನು ಗೋರಕ್‌ಪುರದಿಂದ ಸತತ 5 ಬಾರಿ ಬಿಜೆಪಿ ಸಂಸದರಾಗಿದ್ದ ಯೋಗಿ ಆದಿತ್ಯನಾಥ ಉತ್ತರಪ್ರದೇಶ ಮುಖ್ಯಮಂತ್ರಿ. ಅವರೂ ಸ್ಪರ್ಧೆ ಮಾಡುತ್ತಿಲ್ಲ. ಬೆಂಗಳೂರು ದಕ್ಷಿಣವನ್ನು 6 ಬಾರಿ ಪ್ರತಿನಿಧಿಸಿದ್ದ ಅನಂತ ಕುಮಾರ್‌ ಅವರು ಬದುಕಿಲ್ಲ. ಹೀಗಾಗಿ ಈ ನಾಲ್ಕು ಸಂಸದರು ಪುನಾರಾಯ್ಕೆಯಾಗುತ್ತಿಲ್ಲ.

ಚುನಾವಣಾ ರಾಜಕೀಯಕ್ಕೆ ಅಡ್ವಾಣಿ ಗುಡ್‌ಬೈ

ಲೋಕಸಭೆಯ ಸ್ಪೀಕರ್‌ ಸುಮಿತ್ರಾ ಮಹಾಜನ್‌ 8 ಬಾರಿ ಗೆದ್ದು ಬಂದಿದ್ದಾರೆ. ಅವರಿಗೆ 75 ವರ್ಷವಾಗಿದೆ. ಬಿಜೆಪಿ ಅವರಿಗೇನಾದರೂ ಟಿಕೆಟ್‌ ನಿರಾಕರಿಸಿದರೆ ಈ ಲೋಕಸಭೆಯಿಂದ ದೂರ ಉಳಿವ ಸಂಸದರ ಸಂಖ್ಯೆ 5ಕ್ಕೇರಲಿದೆ.

ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದ BSP ನಾಯಕಿ ಮಾಯಾ!

ಮಿಕ್ಕಂತೆ, ಬಿಜೆಪಿಯ ಛತ್ತೀಸ್‌ಗಢ ಸಂಸದ ರಮೇಶ್‌ ಬಯಾಸ್‌, ಬಿಜೆಡಿಯ ಭ್ರಾತೃಹರಿ ಮಹ್ತಾಬ್‌, ಅರ್ಜುನ್‌ ಚರಣ್‌ ಸೇಠಿ, ಪ್ರಸನ್ನ ಪಟಸಾನಿ, ಕಾಂಗ್ರೆಸ್ಸಿನ ಕೋಲಾರ ಸಂಸದ ಕೆ.ಎಚ್‌. ಮುನಿಯಪ್ಪ, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್‌ ಯಾದವ್‌, ಕೇಂದ್ರ ಸಚಿವ ಹಾಗೂ ಶಿವಸೇನೆ ಸಂಸದ ಅನಂತ ಗೀತೆ ಸತತ 5ಕ್ಕಿಂತ ಹೆಚ್ಚು ಬಾರಿ ಗೆದ್ದಿದ್ದಾರೆ ಎಂದು ದೆಹಲಿ ಮೂಲದ ದೈನಿಕವೊಂದು ವರದಿ ಮಾಡಿದೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ