ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಪಕ್ಷಗಳು ಹಾಗೂ ರಾಜಕೀಯ ನಾಯಕರು ಬಿರುಸಿನ ಪ್ರಚಾರ ಆರಂಭಿಸಿದ್ದಾರೆ. ಹೀಗಿರುವಾಗ BSP ನಾಯಕಿ ಮಾಯಾವತಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ತಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲೆಂಬುವುದನ್ನು ಸ್ಪಷ್ಟಪಡಿಸಿದ್ದಾರೆ. ಅವರ ಈ ನಿರ್ಧಾರಕ್ಕೆ ಕಾರಣವೇನು? ಇಲ್ಲಿದೆ ವಿವರ

ಲಕ್ನೋ[ಮಾ.20]: ಬಹುಜನ ಸಮಾಜ ಪಾರ್ಟಿಯ ಪ್ರಮುಖ ನಾಯಕಿ ಮಾಯಾವತಿ ಮುಮಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಬುಧವಾರದಂದು ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ BSP ನಾಯಕಿ ನಾನು ಯಾವಾಗ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸತ್ತಿಗೆ ಪ್ರವೆಶಿಸಬಹುದು. ಆದರೀಗ ಹಿಂದುಳಿದವರಿಗಾಗಿ ಹೋರಾಡುವುದರೊಂದಿಗೇ ಉತ್ತರ ಪ್ರದೇಶದ ಮೇಲೆ ಗಮನ ಕೇಂದ್ರೀಕರಿಸುವ ಅಗತ್ಯವಿದೆ ಎಂದಿದ್ದಾರೆ. 

ಈ ಕುರಿತಾಗಿ ಮತ್ತಷ್ಟು ಮಾತನಾಡಿರುವ ಮಾಯಾವತಿ 'ಸದ್ಯದ ಪರಿಸ್ಥಿತಿಯಲ್ಲಿ ಉತ್ತರ ಪ್ರದೇಶದಲ್ಲಿ ಮೈತ್ರಿಯ ಗೆಲುವು ಅತಿ ಅಗತ್ಯ. ರಾಜಕೀಯದಲ್ಲಿ ಹಲವಾರು ಬಾರಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸದ್ಯ ದೇಶದ ಹಿತಾಸಕ್ತಿ ಹಾಗೂ ಪಕ್ಷದ ಕಾರ್ಯಗತಿಯನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಚುನಾವಣೆಯ ಬಳಿಕ ಅವಕಾಶ ಸಿಕ್ಕರೆ ಈ ಬಗ್ಗೆ ಯೋಚಿಸುತ್ತೇನೆ' ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜಿವಾದಿ ಪಾರ್ಟಿ ಹಾಗೂ ಮಾಯಾತಿಯ BSP ಮೈತ್ರಿಯು ಒಂದಾಗಿ ಚುನಾವಣೆಯನ್ನೆದುರಿಸಲಿದೆ.

Scroll to load tweet…

ಉತ್ತರ ಪ್ರದೇಶದಲ್ಲಿ SP ಹಾಗೂ BSP ಮೈತ್ರಿ ಮಾಡಿಕೊಂಡಿವೆ. ಇದರ ಅನ್ವಯ ಇಲ್ಲಿನ ಒಟ್ಟು 38ರಲ್ಲಿ 37 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಕಣಕ್ಕಿಳಿದರೆ 38 ಕ್ಷೇತ್ರಗಳಲ್ಲಿ BSP ಸ್ಪರ್ಧಿಸಲಿದೆ. ಇನ್ನುಳಿದ 5 ಕ್ಷೇತ್ರಗಳಲ್ಲಿ ಮೂರನ್ನು ಅಜಿತ್ ಸಿಂಗ್ ರವರ ರಾಲೋದ್ ಪಕ್ಷಕ್ಕೆ ನೀಡಿದೆ. ಇನ್ನು ಸೋನಿಯಾ ಗಾಂಧಿ ಕ್ಷೇತ್ರ ರಾಯ್ ಬರೇಲಿ ಹಾಗೂ ರಾಹುಲ್ ಗಾಂಧಿಯವರ ಅಮೇಠಿಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರುವ ನಿರ್ಧಾರ ಕೈಗೊಂಡಿದೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ