Search results - 162 Results
 • INDIA17, Feb 2019, 9:20 AM IST

  ಚುನಾವಣಾಧಿಕಾರಿ ಖಡಕ್ ಎಚ್ಚರಿಕೆ : ದಾಖಲಾಗುತ್ತೆ ಕೇಸ್

  ಚುನಾವಣಾ ಆಯೋಗದಿಂದ ನೀಡಲಾಗಿರುವ ಮತದಾರರ ಗುರುತಿನ ಚೀಟಿಯನ್ನು ಕುಟುಂಬಸ್ಥರಲ್ಲದವರಿಗೆ ನೀಡುವುದು ಮತ್ತು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಈ ರೀತಿ ಚುನಾವಣಾ ಅಪರಾಧ ಎಸಗಿದರೆ ಕೇಸ್ ದಾಖಲಿಸಲಾಗುವುದು ಎಂದು ಚುನಾವಣಾ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

 • BNG Rural

  POLITICS15, Feb 2019, 5:06 PM IST

  ಟಿಕೆಟ್ ಫೈಟ್: ಡಿಕೆ+ಎಚ್‌ಡಿಕೆ ವರ್ಸಸ್‌ ಯೋಗಿ?

  ಕಾಂಗ್ರೆಸ್- ಜೆಡಿಎಸ್ ಜಿದ್ದಾಜಿದ್ದಿ ಅಖಾಡವಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಮಿತ್ರಕೂಟದ ಅಭ್ಯರ್ಥಿಯಾಗಿ ಹಾಲಿ ಸಂಸದ ಡಿ.ಕೆ. ಸುರೇಶ್ ಅವರೇ ಅಭ್ಯರ್ಥಿಯಾಗುವುದು ನಿಶ್ಚಿತವೂ ಆಗಿದೆ. ಆದರೆ ಈ ದೋಸ್ತಿಗಳನ್ನು ಸದೆಬಡಿಯಲು ಬಿಜೆಪಿ ಯಾರನ್ನು ಕಣಕ್ಕಿಳಿಸುತ್ತದೆ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಚನ್ನಪಟ್ಟಣದಲ್ಲಿ ತಮ್ಮನ್ನು ಮಣಿಸಿರುವ ಕುಮಾರಸ್ವಾಮಿ ಹಾಗೂ ಡಿಕೆ ಬ್ರದರ್ಸ್‌ಗಳನ್ನು ಮಣಿಸಲು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಕಣಕ್ಕಿಳಿಯುತ್ತಾರಾ ಎಂಬ ಕುತೂಹಲವಿದೆ

 • Vijayapura

  POLITICS14, Feb 2019, 5:19 PM IST

  ಟಿಕೆಟ್ ಫೈಟ್: ವಿಜಯಪುರದಲ್ಲಿ ಜಿಗಜಿಣಗಿ V/S ಅಲಗೂರ?

  4 ಲಕ್ಷ ದಲಿತ ಮತದಾರರು ಇರುವ ಈ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ದಲಿತರಿಗೆ ಟಿಕೆಟ್ ನೀಡದೆ ಸತತ ಮೂರು ಬಾರಿ ಬಂಜಾರಾ ಸಮಾಜದ ಪ್ರಕಾಶ ರಾಠೋಡಗೆ ಟಿಕೆಟ್ ನೀಡುತ್ತ ಬಂದಿದೆ. ಇದರಿಂದಾಗಿ ದಲಿತರು ಅನಿವಾರ್ಯವಾಗಿ ಬಿಜೆಪಿಗೆ ವೋಟ್ ಹಾಕಿ ರಮೇಶ ಜಿಗಜಿಣಗಿ ಅವರನ್ನು ಗೆಲ್ಲಿಸುತ್ತ ಬಂದಿದ್ದಾರೆ. ಪ್ರಕಾಶ ರಾಠೋಡ ಸೋಲುತ್ತಲೇ ಬಂದಿದ್ದಾರೆ. ಈ ಸತ್ಯವನ್ನು ಅರಿತ ಕಾಂಗ್ರೆಸ್ ನಾಯಕರು ಈ ಬಾರಿ ದಲಿತರಿಗೆ ಟಿಕೆಟ್ ನೀಡಲು ಆಲೋಚನೆಯಲ್ಲಿ ತೊಡಗಿದ್ದಾರೆ. ಏಕೆಂದರೆ ಪ್ರಕಾಶ ರಾಠೋಡ ಅವರು ಈಗಾಗಲೇ ಕ್ರೀಡಾ ಕೋಟಾದಲ್ಲಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ನಾಮಕರಣಗೊಂಡಿದ್ದಾರೆ.

 • Shivpal Yadav

  INDIA14, Feb 2019, 4:46 PM IST

  ಯುಪಿ ರಾಜಕೀಯಕ್ಕೆ ಮತ್ತೊಂದು ಟ್ವಿಸ್ಟ್!: ಪ್ರಿಯಾಂಕಾ Appointment ಕೇಳಿದ ಯಾದವ್!

  ಉತ್ತರ ಪ್ರದೇಶದ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಧುಮುಕುತ್ತಿದ್ದಂತೆಯೇ ಮಹತ್ವದ ಬೆಳವಣಿಗೆಗಳು ನಡೆಯಲಾರಂಭಿಸಿವೆ. ಪ್ರಿಯಾಂಕಾ ಗಾಂಧಿ ಎಂಟ್ರಿ ಪ್ರಿ ಪಕ್ಷಗಳಿಗೂ ತಲೆನೋವಾಗಿದೆ. ಸದ್ಯ ಯಾದವ್ ಪ್ರಿಯಾಂಕಾರನ್ನು ಭೇಟಿಯಾಗಲು ಸಮಯಾವಕಾಶ ಕೇಳಿರುವುದು ಭಾರೀ ಸದ್ದು ಮಾಡುತ್ತಿದೆ.

 • priyanka is danger for bjp

  INDIA14, Feb 2019, 1:27 PM IST

  ಸತತ 15 ಗಂಟೆ ಕಾರ್ಯಕರ್ತರೊಂದಿಗೆ ಪ್ರಿಯಾಂಕ ಗಾಂಧಿ ಅಭ್ಯರ್ಥಿಗಳ ಆಯ್ಕೆ ಸಭೆ

  ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ವಿವಿಧ ಪಕ್ಷಗಳು ಚುನಾವಣಾ ಗೆಲುವಿಗಾಗಿ ಕಸರತ್ತು ನಡೆಸುತ್ತಿವೆ. ಇದೇ ವೇಳೆ ಕೆಲ ದಿನಗಳ ಹಿಂದಷ್ಟೇ ರಾಜಕೀಯ ಪ್ರವೇಶಿಸಿದ ಪ್ರಿಯಾಂಕ ಗಾಂಧಿ ಮುಂಬರುವ ಚುನಾವಣಾ ಗೆಲುವಿನ ತಂತ್ರಗಳ ಬಗ್ಗೆ ಕಾರ್ಯಕರ್ತರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. 

 • Parliament

  state14, Feb 2019, 9:09 AM IST

  ಲೋಕಸಭಾ ಚುನಾವಣೆ : ಈ ಪಕ್ಷದಿಂದ ಐವರಿಗೆ ಟಿಕೆಟ್

  ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ವಿವಿಧ ಪಕ್ಷಗಳು ಸಕಲ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಇದೇ ವೇಳೆ ರಾಷ್ಟ್ರೀಯ ಲೋಕದಳವು ರಾಜ್ಯದಲ್ಲಿ ಐವರನ್ನು ಕಳಕ್ಕೆ ಇಳಿಸಲು ಸಿದ್ಧವಾಗಿದೆ. 

 • Chikkodi

  POLITICS13, Feb 2019, 2:22 PM IST

  ಟಿಕೆಟ್ ಫೈಟ್: ಬಿಜೆಪಿ ಟಿಕೆಟ್‌ಗೆ ಸವದಿ, ಕತ್ತಿ, ಕೋರೆ ಫೈಟ್‌

  ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಕ್ಕರೆ ಲಾಬಿಯದ್ದೇ ಪ್ರಾಬಲ್ಯ. ಟಿಕೆಟ್‌ಗಾಗಿ ಪ್ರಯತ್ನಿಸುತ್ತಿರುವ ಬಹುತೇಕ ನಾಯಕರು ಕೂಡ ಸಕ್ಕರೆ ಕಾರ್ಖಾನೆಗಳ ಜತೆಗೆ ನಂಟು ಹೊಂದಿದವರೇ ಆಗಿದ್ದಾರೆ. ಲಿಂಗಾಯತ ಸಮುದಾಯದ ನಾಯಕರಾಗಿದ್ದು, ವಿವಿಧ ಸಮುದಾಯಗಳ ಜತೆಗೂ ಒಡನಾಟ ಹೊಂದಿರುವ ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ಎರಡು ಕ್ಷೇತ್ರಗಳಿಗೆ ಸೀಮಿತ ಎಂಬ ವಾದವಿದೆ. ಅವರನ್ನು ಮಣಿಸುವ ಉತ್ಸಾಹದಲ್ಲಿರುವ ಬಿಜೆಪಿಯಲ್ಲಿ ಟಿಕೆಟ್‌ಗೆ ಭರ್ಜರಿ ಪೈಪೋಟಿ ನಡೆಯುತ್ತಿದೆ. ಈ ಕುರಿತು ಚಿತ್ರಣ ಇಲ್ಲಿದೆ.

 • tumkur

  POLITICS13, Feb 2019, 2:07 PM IST

  ಟಿಕೆಟ್ ಫೈಟ್: ಕಾಂಗ್ರೆಸ್‌ ಸಂಸದ ಜೆಡಿಎಸ್‌ ಅಭ್ಯರ್ಥಿ ಆಗ್ತಾರಾ?

  ಒಕ್ಕಲಿಗರು, ವೀರಶೈವರು ಸಮಪ್ರಮಾಣದಲ್ಲಿರುವ ಹಾಗೂ ಅಹಿಂದ ವರ್ಗಗಳು ತುಸು ಹೆಚ್ಚಿನ ಸಂಖ್ಯೆಯಲ್ಲಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳ ಪ್ರಾಬಲ್ಯವಿದೆ. ಈ ಬಾರಿ ಕಾಂಗ್ರೆಸ್- ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟು, ಕ್ಷೇತ್ರ ಜೆಡಿಎಸ್ ಪಾಲಾಗುವ ಎಲ್ಲ ಸಾಧ್ಯತೆಗಳಿವೆ. ಹೀಗಾಗಿ ಹಾಲಿ ಸಂಸದ ಮುದ್ದಹನುಮೇಗೌಡ ಜೆಡಿಎಸ್‌ಗೆ ಸೇರಿ ಅಲ್ಲಿಂದ ಅಭ್ಯರ್ಥಿಯಾಗುತ್ತಾರೆ ಎನ್ನಲಾಗುತ್ತಿದೆ. ಈ ನಡುವೆ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿರುವ ನಾಯಕರು ಕಾಂಗ್ರೆಸ್ ಹಾಗೂ ಬಿಜೆಪಿ ಎರಡರಲ್ಲೂ ಟಿಕೆಟ್‌ಗೆ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

 • budet-2019

  state13, Feb 2019, 1:16 PM IST

  ‘2019ರಲ್ಲಿ ಬಿಜೆಪಿಗೆ 300 ಸ್ಥಾನ ಖಚಿತ : ಮತ್ತೆ ಮೋದಿಯೇ ಪ್ರಧಾನಿ’

  ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು,  ಇದೇ ವೇಳೆ ವಿವಿಧ ಪಕ್ಷಗಳು ಗೆಲುವಿಗಾಗಿ ಸಿದ್ಧತೆ ನಡೆಸುತ್ತಿವೆ. ಇನ್ನು ಮಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಮತ್ತೆ ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ. 

 • Tejaswini Ananthkumar

  POLITICS13, Feb 2019, 1:09 PM IST

  ತೇಜಸ್ವಿನಿಗೆ ಟಿಕೆಟ್ ತಪ್ಪಿಸಲು BJP ಮುಖಂಡ ಕಸರತ್ತು

  ತೇಜಸ್ವಿನಿ ಅನಂತ್‌ಕುಮಾರ್ ಅವರು ಹಲವಾರು ಸಾಮಾಜಿಕ ಕಾರ್ಯಗಳ ಮೂಲಕವೇ ಗುರುತಿಸಿಕೊಂಡವರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿ ಎಂಬುವುದು ಬಿ.ಎಸ್.ಯಡಿಯೂರಪ್ಪ ಹಾಗೂ ಆರ್‌ಎಸ್‌ಎಸ್ ನಾಯಕರು ಒಪ್ಪಿಕೊಂಡಿದ್ದು, ಅವರಿಗೆ ಟಿಕೆಟ್ ನೀಡಲು ಅಸ್ತು ಎಂದಿದ್ದಾರೆ. ಆದರೆ, ಇದಕ್ಕೂ ಕೊಕ್ಕೆ ಇಡುತ್ತಿದ್ದಾರೆ ಈ ಬಿಜೆಪಿ ಮುಖಂಡರು.

 • Mamata Banerjee

  INDIA13, Feb 2019, 12:37 PM IST

  ಪ್ರಜಾಪ್ರಭುತ್ವ ಬದುಕಿದೆ ಎಂದು ದೀದಿ ಕಾಲೆಳೆದ ಪೋಸ್ಟರ್

  ವಿಪಕ್ಷಗಳ ರ‍್ಯಾಲಿಗೆ ರಾಷ್ಟ್ರ ರಾಜಧಾನಿ ದಿಲ್ಲಿಗೆ ಆಗಮಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಪೋಸ್ಟರ್ ಗಳ ಮೂಲಕ ಕಾಲೆಳೆಯಲಾಗಿದೆ. 

 • No politics told Mohan Lal

  state13, Feb 2019, 9:23 AM IST

  ಲೋಕಸಭಾ ಚುನಾವಣೆ : ಬಿಜೆಪಿ ಕೈ ಬಿಡಲಿವೆ ಕರ್ನಾಟಕದ 6 ಕ್ಷೇತ್ರಗಳು?

  ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ವಿವಿಧ ಪಕ್ಷಗಳು ಗೆಲುವಿಗಾಗಿ ಕಸರತ್ತು ನಡೆಸುತ್ತಿವೆ. ಇನ್ನು ಬಿಜೆಪಿಯಲ್ಲಿ ಇದೇ ವೇಳೆ ಆತಂಕವೊಂದು ಮನೆ ಮಾಡಿದೆ. 

 • UP politics

  POLITICS12, Feb 2019, 5:15 PM IST

  ಯುಪಿ ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ಪ್ರಿಯಾಂಕಾ ಕಣಕ್ಕಿಳಿದಿದ್ದೆ ನಡೆಯಿತು ಭಾರೀ ಬದಲಾವಣೆ!

  ಪ್ರಿಯಾಂಕಾ ಗಾಂಧಿಯನ್ನು ಚುನಾವಣಾ ಕಣಕ್ಕೆ ತರುವ ಮೂಲಕ ಕಾಂಗ್ರೆಸ್ ಪಕ್ಷವು ಬಹುದೊಡ್ಡ ಅಸ್ತ್ರವನ್ನು ಪ್ರಯೋಗಿಸಿದೆ. ಸದ್ಯ ಈ ವಿಚಾರ ಉತ್ತರ ಪ್ರದೇಶದ ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ಈವರೆಗೂ ಕಾಂಗ್ರೆಸ್‌ನ್ನು ಮಹಾಮೈತ್ರಿಯಿಂದ ದೂರವಿಟ್ಟಿದ್ದ ಪಕ್ಷಗಳು ಕೂಡಾ ಪ್ರಿಯಾಂಕಾ ಎಂಟ್ರಿಯಿಂದ ಕಾಂಗ್ರೆಸ್‌ನೆಡೆ ಕೈಚಾಚಲಾರಂಭಿಸಿವೆ.

 • Koppala

  POLITICS12, Feb 2019, 5:10 PM IST

  ಟಿಕೆಟ್ ಫೈಟ್: ಸಿದ್ದು ಸ್ಪರ್ಧೆ ವದಂತಿಯಿಂದ ಕೊಪ್ಪಳ ಕ್ಷೇತ್ರದಲ್ಲಿ ಸಂಚಲನ

  2013ರ ವಿಧಾನಸಭೆ ಚುನಾವಣೆಯಲ್ಲಿ ಅನುಭವಿಸಿದ್ದ ಸೋಲಿನ ಹಿನ್ನೆಲೆಯಲ್ಲಿ ಸೃಷ್ಟಿಯಾಗಿದ್ದ ಅನುಕಂಪ ಹಾಗೂ ನರೇಂದ್ರ ಮೋದಿ ಅವರ ಅಲೆಯಿಂದಾಗಿ ಸಂಗಣ್ಣ ಕರಡಿ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಸುಲಭವಾಗಿ ಗೆದ್ದುಬಂದಿದ್ದರು. ಆದರೆ ಈ ಬಾರಿ ಅವರಿಗೆ ಸಿದ್ದರಾಮಯ್ಯ ‘ಗುಮ್ಮ’ ಕಾಡುತ್ತಿದೆ. ಜತೆಗೆ ಕಾಂಗ್ರೆಸ್- ಜೆಡಿಎಸ್ ದೋಸ್ತಿಯೂ ಏರ್ಪಡುವ ಸಾಧ್ಯತೆ ಇದೆ. ಬಿಜೆಪಿ ಪ್ರಬಲವಾಗಿರುವುದು ಸಂಗಣ್ಣ ಅವರಿಗೆ ಪ್ಲಸ್. ಸಂಗಣ್ಣ ಅವರೇ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದ್ದರೂ, ಆಕಾಂಕ್ಷಿಗಳು ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲೂ ಲಾಬಿ ನಡೆಯುತ್ತಿದೆ.

 • Robert Vadra

  INDIA12, Feb 2019, 1:05 PM IST

  'ದೇಶಕ್ಕಾಗಿ ನಾನು ಪ್ರಿಯಾಂಕಾಳನ್ನು ಬಿಟ್ಟುಕೊಟ್ಟಿದ್ದೇನೆ, ಹುಷಾರಾಗಿ ನೋಡಿಕೊಳ್ಳಿ'

  ಪ್ರಿಯಾಂಕಾಳನ್ನು ಸುರಕ್ಷಿತವಾಗಿ ನೋಡಿಕೊಳ್ಳಿ!| ಪತ್ನಿಯ ರಾಜಕೀಯ ಯಾತ್ರೆಗೆ ವಾದ್ರಾ ಭಾವನಾತ್ಮಕ ಫೇಸ್‌ಬುಕ್‌ ಪೋಸ್ಟ್‌