ರಾಜ್ಯ ಸರ್ಕಾರದ ಅಧೀನ ಇಲಾಖೆಯ ಸಿಬ್ಬಂದಿಗೆ ಕಟ್ಟುನಿಟ್ಟಾಗಿ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾಗಲು ಆದೇಶಿಸಿದೆ. ಆದರೆ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರ ಇಲ್ಲದೇ ಪರೀಕ್ಷಾರ್ಥಿಗಳು ಪರದಾಡುವಂತಾಗಿದೆ

ಜಿ.ಡಿ.ಹೆಗಡೆ

ಕಾರವಾರ (ಸೆ.20) ;\ ರಾಜ್ಯ ಸರ್ಕಾರದ ಅಧೀನ ಇಲಾಖೆಯ ಸಿಬ್ಬಂದಿಗೆ ಕಟ್ಟುನಿಟ್ಟಾಗಿ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾಗಲು ಆದೇಶಿಸಿದೆ. ಆದರೆ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರ ಇಲ್ಲದೇ ಪರೀಕ್ಷಾರ್ಥಿಗಳು ಪರದಾಡುವಂತಾಗಿದೆ. ಕರ್ನಾಟಕ ಸಿವಿಲ್‌ ಸೇವಾ ನಿಯಮಗಳು 2012ರ ನಿಯಮ 1(3) ನಿರ್ದಿಷ್ಟಪಡಿಸಿದ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಸರ್ಕಾರಿ ಇಲಾಖೆಗಳ ಸಿಬ್ಬಂದಿ ಸಾಕ್ಷರತಾ ಪರೀಕ್ಷೆ ಪಾಸಾಗುವುದು ಕಡ್ಡಾಯವಾಗಿದೆ. ಈ ಪರೀಕ್ಷೆ ಬರೆಯದೇ ಇದ್ದರೆ ಮುಂಬಡ್ತಿ, ವೇತನ ಬಡ್ತಿ ಒಳಗೊಂಡು ಕೆಲವು ಸರ್ಕಾರಿ ಸೌಲಭ್ಯಗಳನ್ನು ತಡೆಹಿಡಿಯುವುದಾಗಿ ಆದೇಶಿಸಿದೆ.

ಸರ್ಕಾರಿ ನೌಕರರ ಕಂಪ್ಯೂಟರ್‌ ಸಾಕ್ಷರತೆಗೆ ಗಡುವು..!

ಆದರೆ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರ ಇಲ್ಲದೇ ತೊಂದರೆಯಾಗಿದೆ. ನೂರಾರು ಕಿ.ಮೀ. ದೂರದಲ್ಲಿ ಇರುವ ನೆರೆಯ ಜಿಲ್ಲೆ ಉಡುಪಿ, ಮಂಗಳೂರು ಅಥವಾ ಹುಬ್ಬಳ್ಳಿಗೆ ಪರೀಕ್ಷೆಗೆ ತೆರಳಬೇಕಾಗಿದೆ. ಉಡುಪಿ, ಮಂಗಳೂರು, ಹುಬ್ಬಳ್ಳಿ ಪರೀಕ್ಷಾ ಕೇಂದ್ರಕ್ಕೆ ಹೋಗಲು, ಪರೀಕ್ಷೆ ಬರೆಯಲು, ಪುನಃ ಅಲ್ಲಿಂದ ವಾಪಸ್‌ ಆಗಲು ಹೀಗೆ ಅನಗತ್ಯವಾಗಿ 2-3 ದಿನ ಹಾಳಾಗುತ್ತಿದೆ. ಕಾರಣ ಪರೀಕ್ಷೆಗೆ ಕಟ್ಟಿದವರು ತೊಂದರೆ ಅನುಭವಿಸುತ್ತಿದ್ದಾರೆ.

ಹಲವಾರು ಇಲ್ಲಗಳ ನಡುವೆ ಉತ್ತರ ಕನ್ನಡ ಕರಾವಳಿ, ಮಲೆನಾಡು, ಅರೆಬಯಲು ಸೀಮೆಯನ್ನು ಹೊಂದಿದ ವಿಶಾಲವಾದ ಜಿಲ್ಲೆಯಾಗಿದೆ. ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷಾ ಕೇಂದ್ರ ತೆರೆಯುವುದು ಅತ್ಯವಶ್ಯಕವಾಗಿದೆ. ಸರ್ಕಾರಿ ನೌಕರರಿಗೆ ಅನಗತ್ಯವಾಗಿ ಬೇರೆ ಜಿಲ್ಲೆಗಳಿಗೆ ಸಮಯ ಹಾಳುಮಾಡಿಕೊಂಡು ನೂರಾರು ಕಿ.ಮೀ. ತಿರುಗಾಡುವುದನ್ನು ತಪ್ಪಿಸಬೇಕಿದೆ.

ಪೊಲೀಸರಿಗೂ ಕಡ್ಡಾಯ:

ಕಂದಾಯ ಒಳಗೊಂಡು ಇತರೆ ಸರ್ಕಾರಿ ಇಲಾಖೆಗಳ ಸಿಬ್ಬಂದಿಗೆ ಕಂಪ್ಯೂಟರ್‌ ಸಾಕ್ಷರತೆ ಕಡ್ಡಾಯ ಮಾಡಿರುವುದರ ಜತೆಗೆ ಪೊಲೀಸರೂ ಪರೀಕ್ಷೆ ಬರೆದು ಪಾಸಾಗಬೇಕಿದೆ. ಸಿವಿಲ್‌ (ನಾಗರಿಕ) ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್‌) ಹೆಡ್‌ ಕಾನ್‌ಸ್ಟೇಬಲ್‌ (ಎಚ್‌ಸಿ) ಹಾಗೂ ಅಸಿಸ್ಟೆಂಟ್‌ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ಹುದ್ದೆಯಲ್ಲಿ ಇರುವವರಿಗೂ ಕಡ್ಡಾಯವಾಗಿ ಆದೇಶ ಮಾಡಲಾಗಿದೆ. ಸದಾ ಬಂದೋಬಸ್‌್ತನಲ್ಲಿ ಇರುವ ಈ ಹುದ್ದೆಯ ಸಿಬ್ಬಂದಿಗೆ ಕಡ್ಡಾಯಗೊಳಿಸಿರುವುದು ನಗೆಪಾಟಲಿಗೀಡಾಗಿದೆ.

ಕೂತಲ್ಲೇ ಕೂತು ಕೆಲಸ ಮಾಡೋರು ಗಮನಿಸಲೇ ಬೇಕಾದ ವಿಷ್ಯಗಳಿವು!

ಪೊಲೀಸ್‌ ಇಲಾಖೆಯಲ್ಲಿ ಟೈಪಿಸ್ಟ್‌ ಹುದ್ದೆ ಪ್ರತ್ಯೇಕವಾಗಿದ್ದು, ಅಪರಾಧಗಳ ಬರವಣಿಗೆಯನ್ನು ಇವರೇ ಮಾಡುತ್ತಾರೆ. ಆದರೆ ಇತರ ಸಿಬ್ಬಂದಿಗೂ ಕಡ್ಡಾಯ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲೆಯ ಘಟ್ಟದ ಮೇಲೆ, ಕರಾವಳಿ ಭಾಗದಲ್ಲಿ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷಾ ಕೇಂದ್ರ ತೆರೆಯಲು ಅಗತ್ಯ ಕ್ರಮ ವಹಿಸುತ್ತೇವೆ. ಅಭ್ಯರ್ಥಿಗಳು ಕಡಿಮೆ ಇರುವ ಕಾರಣ ಈ ಹಿಂದೆ ಇದ್ದ ಪರೀಕ್ಷಾ ಕೇಂದ್ರ ಸ್ಥಗಿತ ಮಾಡಿರಬಹುದು. ಅಭ್ಯರ್ಥಿಗಳ ಮಾಹಿತಿ ಪಡೆದು ಪರಿಶೀಲಿಸಿ ಕ್ರಮ ವಹಿಸುತ್ತೇವೆ.

ಮುಲ್ಲೈ ಮುಗಿಲನ್‌, ಜಿಲ್ಲಾಧಿಕಾರಿ