Asianet Suvarna News Asianet Suvarna News

ಸರ್ಕಾರಿ ನೌಕರರ ಕಂಪ್ಯೂಟರ್‌ ಸಾಕ್ಷರತೆಗೆ ಗಡುವು..!

*  ಇನ್ನೂ ಪಾಸಾಗಬೇಕಾಗಿದೆ 350000 ನೌಕರರು
*  ಇದುವರೆಗೆ ಕೇವಲ 173500 ನೌಕರರು ಉತ್ತೀರ್ಣ
*  ಕಂಪ್ಯೂಟರ್‌ ಸಾಕ್ಷರತೆ ಹೊಂದದ ನೌಕರರ ಮುಂಬಡ್ತಿ, ವೇತನ ಬಡ್ತಿಗೆ ಬ್ರೇಕ್‌
 

Deadline for Computer Literacy of Government Employees in Karnataka grg
Author
Bengaluru, First Published Jun 11, 2022, 9:42 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜೂ.11): ಪ್ರತಿ ಇಲಾಖೆಯಲ್ಲಿಯೂ ತಂತ್ರಜ್ಞಾನವನ್ನು ಕಡ್ಡಾಯವಾಗಿ ಬಳಕೆ ಮಾಡುತ್ತಿರುವುದರಿಂದ ರಾಜ್ಯ ಸರ್ಕಾರ ಸರ್ಕಾರಿ ನೌಕರರು ‘ಕಂಪ್ಯೂಟರ್‌ ಸಾಕ್ಷರ’ ಆಗುವುದು ಅನಿವಾರ್ಯ. ಇದಕ್ಕಾಗಿ ಡಿ. 31ರೊಳಗಾಗಿ ‘ಕಂಪ್ಯೂಟರ್‌ ಪರೀಕ್ಷೆ’ ಪಾಸಾಗುವುದಕ್ಕೆ ಗಡುವು ನಿಗದಿ ಮಾಡಲಾಗಿದೆ.

ಹಲವು ವರ್ಷಗಳ ಹಿಂದೆಯೇ ಇದನ್ನು ಜಾರಿ ಮಾಡಿದ್ದರೂ ಅನುಷ್ಠಾನದಲ್ಲಿ ಆಗುತ್ತಿರುವ ವ್ಯತ್ಯಯದಿಂದ ಪದೇ ಪದೇ ಮುಂದೂಡಲಾಗುತ್ತಿದೆ. ಕೋವಿಡ್‌ನಿಂದಾಗಿ ಎರಡು ವರ್ಷಗಳ ಕಂಪ್ಯೂಟರ್‌ ಪರೀಕ್ಷೆಯನ್ನು ನಡೆಸಲು ಆಗಿಲ್ಲ. ಹೀಗಾಗಿ ಈ ಬಾರಿ ಮತ್ತೊಂದು ಆದೇಶವನ್ನು ಜೂ. 8ರಂದು ಇ-ಆಡಳಿತ ವಿಭಾಗದ ಯೋಜನಾ ನಿರ್ದೇಶಕರು ಹೊರಡಿಸಿ ಗಡುವು ನೀಡಿದ್ದಾರೆ.

Koppal: ಸೋಲಾರ್‌ ಕಂಪನಿಗೆ 400 ಎಕರೆ ರೈತರ ಭೂಮಿ

2022ರ ಡಿ. 31ರೊಳಗಾಗಿ ನೌಕರರು ಕಂಪ್ಯೂಟರ್‌ ಪರೀಕ್ಷೆ ತೇರ್ಗಡೆಯಾಗದಿದ್ದರೆ ಮುಂಬಡ್ತಿ ಮತ್ತು ವೇತನ ಬಡ್ತಿಯನ್ನು ತಡೆಹಿಡಿಯುವುದಾಗಿ ಆದೇಶದಲ್ಲಿ ಸ್ಪಷ್ಟವಾಗಿ ಎಚ್ಚರಿಸಿದೆ. ಕಂಪ್ಯೂಟರ್‌ ಪರೀಕ್ಷೆಯ ಹತ್ತು ವರ್ಷಗಳೊಳಗಾಗಿ ಎನ್ನುವ ಬದಲಾಗಿ 2022ರ ಡಿ. 31 ಎಂದು ಪ್ರಥಮ ಆದೇಶವನ್ನು ಅರ್ಥೈಸಿಕೊಳ್ಳುವಂತೆ ಸೂಚಿಸಲಾಗಿದೆ.

350000 ಸಾವಿರ ನೌಕರರು:

50 ವರ್ಷ ಮೇಲ್ಪಟ್ಟವರಿಗೆ ಕಂಪ್ಯೂಟರ್‌ ಸಾಕ್ಷರತೆಯಿಂದ ವಿನಾಯಿತಿ ನೀಡಲಾಗಿದ್ದು, ಈಗ ಸುಮಾರು 5.40 ಲಕ್ಷ ಸರ್ಕಾರಿ ನೌಕರರು ‘ಕಂಪ್ಯೂಟರ್‌ ಸಾಕ್ಷರ’ರಾಗಬೇಕಾಗಿದೆ. ಈ ಪೈಕಿ ಇದುವರೆಗೂ 260000 ಸರ್ಕಾರಿ ನೌಕರರು ‘ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ’ಯನ್ನು ಬರೆದಿದ್ದು, ಇದರಲ್ಲಿ ಸುಮಾರು 173000 ನೌಕರರು ಪಾಸಾಗಿದ್ದಾರೆ. ಇನ್ನು ಸುಮಾರು 350000 ಸರ್ಕಾರಿ ನೌಕರರು ಕಂಪ್ಯೂಟರ್‌ ಪರೀಕ್ಷೆ ಪಾಸಾಗಬೇಕಾಗಿದೆ.

ಈ ಕುರಿತು ಸಂಬಂಧಪಟ್ಟಅಧಿಕಾರಿಗಳು ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಹಂತ​- ಹಂತವಾಗಿ ನಡೆಯುವ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಗೆ ಹಾಜರಾಗಿ, ಡಿ. 31ರೊಳಗಾಗಿ ಪಾಸಾಗಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Follow Us:
Download App:
  • android
  • ios