ಕೂತಲ್ಲೇ ಕೂತು ಕೆಲಸ ಮಾಡೋರು ಗಮನಿಸಲೇ ಬೇಕಾದ ವಿಷ್ಯಗಳಿವು!
ಕಂಪ್ಯೂಟರ್ ಕೆಲಸ ಈಗ ಅನಿವಾರ್ಯ. ಬಹುತೇಕ ಎಲ್ಲ ಕಚೇರಿಗಳಲ್ಲಿ ಇಡೀ ದಿನ ಸಿಬ್ಬಂದಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡ್ತಾರೆ. ಕಂಪ್ಯೂಟರ್ ಮುಂದೆ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದೆ ಅನೇಕ ಸಮಸ್ಯೆ ಎದುರಿಸ್ತಾರೆ. ಇಂದು ಕಂಪ್ಯೂಟರ್ ಮುಂದೆ ಹೇಗೆ ಕುಳಿತುಕೊಳ್ಬೇಕು ಎಂಬುದನ್ನು ನಾವು ಹೇಳ್ತೇವೆ.
ಆಫೀಸ್ (Office) ಕೆಲಸವಿರಲಿ ಇಲ್ಲ ಓದೋದಿರಲಿ, ಅನೇಕರು ಕಂಪ್ಯೂಟರ್ (Computers) ಮುಂದೆ ಗಂಟೆಗಟ್ಟಲೆ ಕುಳಿತಿರ್ತಾರೆ. ಕೆಲಸದ ಒತ್ತಡದಿಂದಾಗಿ ಒಂದೇ ಭಂಗಿಯಲ್ಲಿ ದೀರ್ಘ ಸಮಯ ಕುಳಿತುಕೊಳ್ಳುವವರಿದ್ದಾರೆ. ಮುಂದೆ ಏನಾಗ್ತಿದೆ ಎಂಬ ಅರಿವು ಅವರಿಗೆ ಇರೋದಿಲ್ಲ. ಇದ್ರಿಂದ ಅನೇಕ ಆರೋಗ್ಯ (Health) ಸಮಸ್ಯೆಗಳು ಎದುರಾಗುತ್ತವೆ. ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟಿಸಲಾದ ವರದಿಯೊಂದರ ಪ್ರಕಾರ, ದಿನದಲ್ಲಿ 9. 5 ಗಂಟೆಗಿಂತ ಹೆಚ್ಚು ಸಮಯ ಕುಳಿತುಕೊಳ್ಳುವವರ ಆಯಸ್ಸು ಕಡಿಮೆಯಾಗುತ್ತದೆಯಂತೆ. ಅವರಿಗೆ ಬಹು ಬೇಗ ಸಾವು ಬರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಒಂದೇ ಭಂಗಿಯಲ್ಲಿ ದೀರ್ಘ ಕಾಲ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವ ಜನರಿಗೆ ಭಂಗಿ ಸಂಬಂಧಿತ ಸಮಸ್ಯೆ ಕಾಡುತ್ತದೆ. ಕುತ್ತಿಗೆ, ಬೆನ್ನು, ಮೊಣಕಾಲು, ಭುಜ, ಸೊಂಟ, ಬೆನ್ನಿನ ಕೆಳಭಾಗದಲ್ಲಿ ನೋವು ಮತ್ತು ಬಿಗಿತ ಪ್ರಾರಂಭವಾಗುತ್ತದೆ.
ಒಂದೇ ಕಡೆ ತುಂಬಾ ಸಮಯ ಕುಳಿತುಕೊಳ್ಳುವುದು ಅನೇಕರಿಗೆ ಅನಿವಾರ್ಯ. ಹಾಗಾಗಿ ಅವರು ಕಂಫರ್ಟೇಬಲ್ ಚೇರ್ ಹಾಗೂ ಡೆಸ್ಕ್ ಬಳಸಿದ್ರೆ ಮತ್ತೆ ಕೆಲವರು ಸ್ಟ್ರಚ್ಚಿಂಗ್ ವ್ಯಾಯಾಮಗಳನ್ನು ಮಾಡ್ತಿರುತ್ತಾರೆ. ಒಂದ್ವೇಳೆ ಸರಿಯಾದ ಭಂಗಿ ಹಾಗೂ ವ್ಯಾಯಾಮಗಳನ್ನು ಮಾಡ್ತಿದ್ದರೆ ಸಾವಿನಿಂದ ದೂರವಿರಬಹುದು. ಹಾಗೆ ಭಂಗಿ ಸಂಬಂಧಿ ಸಮಸ್ಯೆಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಕಂಪ್ಯೂಟರ್ ಮುಂದೆ ಹೇಗೆ ಕುಳಿತುಕೊಳ್ಳಬೇಕು ಎಂಬುದನ್ನು ತಿಳಿದುಕೊಂಡ್ರೆ ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಬಹುದು.
ಸರಿಯಾಗಿ ಕುಳಿತುಕೊಳ್ಳುವ ಭಂಗಿ (Proper Sitting Posture) : ಇಳಿಜಾರಾದ ಭುಜಗಳು, ಇಳಿಜಾರಾದ ಕುತ್ತಿಗೆ ಮತ್ತು ಬಾಗಿದ ಬೆನ್ನೆಲುಬು ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವ ಸರಿಯಾದ ಭಂಗಿಯಲ್ಲ. ದೀರ್ಘ ಸಮಯದವರೆಗೆ ಹೀಗೆ ಕುಳಿತುಕೊಂಡ್ರೆ ನೋವು ಕಾಡಲು ಶುರುವಾಗುತ್ತದೆ. ದೇಹ ಆಕಾರ ಕಳೆದುಕೊಳ್ಳುತ್ತದೆ. ಬೆನ್ನುಹುರಿಯಲ್ಲಿ ನೋವು ಕಾಡುತ್ತದೆ. ಈ ಎಲ್ಲ ಸಮಸ್ಯೆಯಿಂದ ನೀವು ರಕ್ಷಣೆ ಪಡೆಯಬೇಕೆಂದ್ರೆ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಬೇಕು. ಕಂಪ್ಯೂಟರ್ ಮುಂದೆ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಲು ಡೆಸ್ಕ್ ಹಾಗೂ ಕುರ್ಚಿಯ ಎತ್ತರದ ಬಗ್ಗೆ ನೀವು ಗಮನ ನೀಡಬೇಕಾಗುತ್ತದೆ.ನಿಮ್ಮ ಪಾದಗಳು ನೆಲವನ್ನು ಸ್ಪರ್ಶಿಸುವಂತೆ ಕುರ್ಚಿಯ ಎತ್ತರ ಇರಬೇಕು. ಮೊಣಕಾಲಿನ ಹಿಂಭಾಗದಲ್ಲಿ 90 ಡಿಗ್ರಿ ಕೋನ ಮಾಡುವಂತೆ ಇರಬೇಕು. ಕುತ್ತಿಗೆ ಹಾಗೂ ಬೆನ್ನು ಒಂದೇ ನೇರದಲ್ಲಿರಬೇಕು. ಕುತ್ತಿಗೆಯನ್ನು ಬಗ್ಗಿಸಬಾರದು. ಸೊಂಟ ಯಾವಾಗಲೂ ಕುರ್ಚಿಯ ಹಿಂಭಾಗಕ್ಕೆ ಅಂಟಿಕೊಂಡಿರಬೇಕು. ಯಾವಾಗಲೂ ಕಂಪ್ಯೂಟರ್ ಪರದೆಯಿಂದ ಕನಿಷ್ಠ 20 ಇಂಚುಗಳಷ್ಟು ದೂರದಲ್ಲಿ ಕುಳಿತುಕೊಳ್ಳಿ. ಭುಜವನ್ನು ಹೆಚ್ಚು ಹಿಂದೆ ಅಥವಾ ಹೆಚ್ಚು ಮುಂದೆ ಎಳೆಯಬೇಡಿ.
ಈ ಆಹಾರಗಳನ್ನು ಸೇವಿಸಿ ಬಿಳಿ ಕೂದಲು ಸಮಸ್ಯೆ ನಿವಾರಿಸಿ
ನಿರಂತರ ಕುಳಿತುಕೊಳ್ಳುವುದು (Dont Sit Constantly) : ತಜ್ಞರ ಪ್ರಕಾರ, 30 ನಿಮಿಷಕ್ಕಿಂತ ಹೆಚ್ಚು ಸಮಯ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳಬಾರದು. 30 ನಿಮಿಷದ ನಂತ್ರ ಕೆಲ ಸಮಯದ ಮಟ್ಟಿಗಾದ್ರೂ ನೀವು ಸ್ಕ್ರೀನ್ ನಿಂದ ದೂರ ಸರಿಯಬೇಕು. ಇದ್ರಿಂದ ಸ್ನಾಯುಗಳಲ್ಲಿ ಬಿಗಿತ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ ಯಾವುದೇ ಆಯಾಸ ನಿಮ್ಮನ್ನು ಕಾಡುವುದಿಲ್ಲ. ಒಂದೇ ಕಡೆ ಕುಳಿತುಕೊಂಡಿದ್ದರೆ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಆಗಾಗ ಎದ್ದು ಓಡಾಡ್ತಿದ್ದರೆ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ಆರೋಗ್ಯಕರ ಜೀವನಕ್ಕೆ ಇದು ಬಹಳ ಮುಖ್ಯ.
ಆರಾಮದಾಯಕವಾದ ಕುರ್ಚಿಯ ಮೇಲೆ ಕುಳಿತುಕೊಳ್ಳಿ (Sit On A Comfy Chair) : ಆರಾಮದಾಯಕ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಕುರ್ಚಿಯಲ್ಲಿ ತಲೆಗೆ ಸಪೋರ್ಟ್ ಇರಬೇಕು. ಕುರ್ಚಿಯಲ್ಲಿ ಆರಾಮದಾಯಕವಾದ ಪ್ಯಾಡಿಂಗ್ ಇರಬೇಕು.
Esophagus Cancer: ಪದೆ ಪದೇ ತೇಗುವಂತಾದರೆ ನಿರ್ಲಕ್ಷ್ಯ ಬೇಡ!
ವ್ಯಾಯಾಮ ಮತ್ತು ಸ್ಟ್ರೆಚಿಂಗ್ (Exercise And Stretching) : ಕೆಲ ಸಮಯ ಕುಳಿತು ಕೆಲಸ ಮಾಡಿದ ನಂತ್ರ ಬೆನ್ನು, ಭುಜ ಕುತ್ತಿಗೆ ಭಾಗದಲ್ಲಿ ಬಿಗಿತವುಂಟಾಗುತ್ತದೆ. ಅವುಗಳನ್ನು ರಿಲ್ಯಾಕ್ಸ್ ಮಾಡ್ಬೇಕು. ಹಾಗಾಗಿ ನೀವು ಕುಳಿತಲ್ಲಿಯೇ ಮಾಡಬಲ್ಲ ಅಥವಾ ನಿಂತು ಮಾಡಬಲ್ಲ ಸಣ್ಣಪುಟ್ಟ ವ್ಯಾಯಾಮವನ್ನು ಮಾಡ್ಬೇಕು. ಕಣ್ಣುಗಳಿಗೆ ಕೂಡ ವಿಶ್ರಾಂತಿ ನೀಡ್ಬೇಕು.
ಮೌಸನ್ನು ದೂರವಿಡಬೇಡಿ : ನಿಮ್ಮ ಕೈಗೆ ಸಿಗುವಷ್ಟು ಹತ್ತಿರಲ್ಲಿ ಮೌಸ್ ಇಟ್ಟುಕೊಳ್ಳಿ. ಮೌಸ್ ದೂರವಿದ್ರೆ ನೀವು ಆರಾಮವಾಗಿ ಕುಳಿತುಕೊಳ್ಳುವುದಿಲ್ಲ. ಬೆನ್ನು ಹಾಗೂ ಭುಜವನ್ನು ಮುಂದೆ ಬಾಗಿಸಬೇಕಾಗುತ್ತದೆ.