ಸಿಎ ಪಾಸ್ ಮಾಡಿದ ತರಕಾರಿ ಮಾರೋ ಮಹಿಳೆ ಮಗ: ಖುಷಿಯಿಂದ ಹಿರಿಹಿರಿ ಹಿಗ್ಗಿದ ಅಮ್ಮ

 ಹೀಗಿರುವಾಗ ತರಕಾರಿ ಮಾರುವ ಮಹಿಳೆಯೊಬ್ಬರ ಮಗ ಏನು ವಿಶೇಷ ಸೌಲಭ್ಯವಿಲ್ಲದಿದ್ದರೂ, ಕಠಿಣ ಪರಿಶ್ರಮ, ಮನೋಸಂಕಲ್ಪದಿಂದ ಅತ್ಯಂತ ಕಠಿಣವೆನಿಸುವ ಈ ಪರೀಕ್ಷೆಯನ್ನು ಪಾಸು ಮಾಡಿ ಅಮ್ಮ ಹೆಮ್ಮೆ ಪಡುವಂತೆ ಮಾಡಿದ್ದಾನೆ.

vegetable seller woman's son passed CA exam Netizens praising his determination and merit akb

ಸಿಎ ಜಗತ್ತಿನಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು. ಸಿಎ ಪಾಸು ಮಾಡುವುದಕ್ಕಾಗಿ ಪರೀಕ್ಷಾರ್ಥಿಗಳು ಕೋಚಿಂಗ್ ಪಡೆಯುವುದರ ಜೊತೆ ಜೊತೆಗೆ ಹಲವು ವರ್ಷಗಳ ಕಾಲ ಪಾರ್ಟಿ, ಕುಟುಂಬದ ಕಾರ್ಯಕ್ರಮ ಸಿನಿಮಾ, ಸೋಶಿಯಲ್ ಮೀಡಿಯಾ ಹೀಗೆ ಖುಷಿ ನೀಡುವ ಎಲ್ಲಾ ಎಂಜಾಯ್‌ಮೆಂಟ್‌ಗಳನ್ನು ಬಿಟ್ಟು ಕಷ್ಟಪಟ್ಟು ಓದುತ್ತಾರೆ, ನಿರಂತ ಕೋಚಿಂಗ್ ಪಡೆದವರಿಗೂ ಇದನ್ನು ಪಾಸು ಮಾಡುವುದು ಬಲು ಕಷ್ಟ ಹೀಗಿರುವಾಗ ತರಕಾರಿ ಮಾರುವ ಮಹಿಳೆಯೊಬ್ಬರ ಮಗ ಸಿಎ ಪರೀಕ್ಷೆ ಪಾಸ್ ಮಾಡಿದ್ದು, ಅಮ್ಮನ ಖುಷಿಗೆ ಪಾರವೇ ಇಲ್ಲದಂತಾಗಿದೆ. 

ಕೆಲವು ಕುಟುಂಬಗಳಲ್ಲಿ ಓದುವ ಮಕ್ಕಳಿಗೆ ಯಾವುದೇ ಕಷ್ಟ ಆಗಬಾರದು ಎಂದು ಪೋಷಕರು ತಮ್ಮಗಿಲ್ಲದ ಸವಲತ್ತುಗಳನ್ನು ಮಕ್ಕಳಿಗೆ ನೀಡಿ ಪೋಷಣೆ ಮಾಡುತ್ತಾರೆ. ಮಕ್ಕಳ ಯಶಸ್ಸಿಗಾಗಿ ಇನ್ನಿಲ್ಲದ ಶ್ರಮ ಪಡುತ್ತಾರೆ. ಆದರೂ ಮಕ್ಕಳು ಮಾತ್ರ ಪೋಷಕರ ನಿರೀಕ್ಷೆಯನ್ನು ಪೂರೈಸುವುದಿರಲಿ ಕನಿಷ್ಠ ತಮ್ಮ ಜೀವನ ರೂಪಿಸಿಕೊಳ್ಳುವುದಕ್ಕೂ ಮುಂದಾಗುವುದಿಲ್ಲ, ಹೀಗಿರುವಾಗ ತರಕಾರಿ ಮಾರುವ ಮಹಿಳೆಯೊಬ್ಬರ ಮಗ ಏನು ವಿಶೇಷ ಸೌಲಭ್ಯವಿಲ್ಲದಿದ್ದರೂ, ಕಠಿಣ ಪರಿಶ್ರಮ, ಮನೋಸಂಕಲ್ಪದಿಂದ ಅತ್ಯಂತ ಕಠಿಣವೆನಿಸುವ ಈ ಪರೀಕ್ಷೆಯನ್ನು ಪಾಸು ಮಾಡಿ ಅಮ್ಮ ಹೆಮ್ಮೆ ಪಡುವಂತೆ ಮಾಡಿದ್ದಾನೆ.

ಸಿಎ ಪರೀಕ್ಷೆ: ಮಂಗಳೂರಿನ ರಮ್ಯಶ್ರೀ ದೇಶಕ್ಕೇ ನಂ.2..!

ಅಂದಹಾಗೆ ಹೀಗೆ ಸಿಎ ಪರೀಕ್ಷೆ ಮಾಡಿದ ತರುಣನ  ಹೆಸರು ಯೋಗೇಶ್, ಈತನ ತಾಯಿ ಥೋಂಬರೆ ಮವಶಿ ಎಂಬುವವರು ಮುಂಬೈನ ಡೊಂಬಿವ್ಲಿ ಪೂರ್ವದ ಗಾಂಧಿನಗರದಲ್ಲಿರುವ ಗಿರ್ನಾರ್ ಮಿಠಾಯಿ ಶಾಪ್ ಬಳಿ ತರಕಾರಿ ಮಾರುವ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಇತ್ತ ಮಗ ತಾನು ಸಿಎ ಪಾಸ್‌ ಮಾಡಿದೆ ಎಂದು ಅಮ್ಮನ ಬಳಿ ಬಂದು ಹೇಳುತ್ತಿದ್ದಂತೆ ತಾಯಿ ಥೋಂಬರೆ ಮವಶಿ ಅವರಿಗೆ ಖುಷಿ ತಡೆಯಲಾಗದೇ ಭಾವುಕರಾಗಿದ್ದಾರೆ. ಅವರ ಕಣ್ಣುಗಳು ತುಂಬಿ ಬಂದಿದ್ದು ಆನಂದಭಾಷ್ಟ ಹರಿದಿದೆ. 

ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ರವಿದಾದಾಚವಾನ್ ಎಂಬುವವರು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ತನ್ನ ದೈನಂದಿನ ತರಕಾರಿ ಮಾರಾಟದ ಕೆಲಸದಲ್ಲಿ ತೊಡಗಿರುವ ಅಮ್ಮನ ಬಳಿ ಬಂದು ಯೋಗೇಶ್ ತಾನು ಸಿಎ ಪಾಸು ಮಾಡಿರುವ ಬಗ್ಗೆ ಹೇಳಿಕೊಂಡಿದ್ದು, ಇದರಿಂದ ಖುಷಿಯಾದ ಅಮ್ಮ ಮಗನನ್ನು ಗಟ್ಟಿಯಾಗಿ ತಬ್ಬಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ. \

ಸಿಎ ಪರೀಕ್ಷೆ: ಮಂಗಳೂರಿನ ರುಥ್‌ ಕ್ಲೇರ್‌ ದೇಶದಲ್ಲೇ ಪ್ರಥಮ

ಯೋಗೇಶ್ ಚಾರ್ಟೆಡ್‌ ಅಕೌಂಡೆಂಟ್ ಆಗಿದ್ದಾನೆ. ಆತ ಗಾಂಧಿನಗರದ ಗಿರ್ನಾರ್ ಮಿಠಾಯಿ ಶಾಪ್‌ನ ಬಳಿ ತರಕಾರಿ ಮಾರುವ ಥೋಂಬರೆ ಮವಶಿ ಎಂಬುವವರ ಮಗ, ಕಠಿಣ ಪರಿಶ್ರಮ, ಮನೋಸಂಕಲ್ಪದಿಂದ ಯೋಗೇಶ್ ಕಠಿಣ ಸ್ಥಿತಿಯಲ್ಲೂ ಈ ಅದ್ಭುತವಾದ ಸಾಧನೆ ಮಾಡಿದ್ದಾನೆ. ಆತನ ತಾಯಿಯ ಕಣ್ಣೀರು ಮಿಲಿಯನ್‌ಗೂ ಹೆಚ್ಚು ಮೌಲ್ಯದ್ದಾಗಿದೆ. ಡೊಂಬಿವ್ಲಿ ನಿವಾಸಿಯಾಗಿ ಇದು ನನಗೂ ಹೆಮ್ಮೆಯ ವಿಚಾರ ಕಂಗ್ರಾಜ್ಯುಲೇಷನ್ ಯೋಗೇಶ್ ಎಂದು ವೀಡಿಯೋ ಪೋಸ್ಟ್ ಮಾಡಿ ರವಿದಾದ ಎಂಬುವವರು ಬರೆದುಕೊಂಡಿದ್ದಾರೆ. 

ಈ ವೀಡಿಯೋ ನೋಡಿದ ನೆಟ್ಟಿಗರು ಕೂಡ ಭಾವುಕರಾಗಿದ್ದು, ಯೋಗೇಶ್‌ಗೆ ಶುಭಹಾರೈಸಿದ್ದಾರೆ. ನಿಮ್ಮ ಪೋಷಕರು ಹಾಗೂ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ನಿಮ್ಮ ಭವಿಷ್ಯಕ್ಕೆ ಶುಭಹಾರೈಕೆಗಳು ಎಂದು ಕಾಮೆಂಟ್ ಮಾಡಿದ್ದಾರೆ. ಯಾವುದೇ ಮೀಸಲಾತಿ ಲೆಕ್ಕಕ್ಕೆ ತೆಗೆದುಕೊಳ್ಳದೇ ಕೇವಲ ನಿಮ್ಮ ಬುದ್ಧಿವಂತಿಕೆ ಹಾಗೂ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಪಡೆಯುವ ಏಕೈಕ ಪರೀಕ್ಷೆ ಎಂದರೆ ಸಿಎ. ಶ್ರೀಮಂತರೇ ಇರಲಿ, ಬಡವರೇ ಇರಲಿ, ಮೇಲ್ವರ್ಗದವರೇ ಇರಲಿ, ಕೆಳವರ್ಗದವರೇ ಇರಲಿ, ಕೇವಲ ಮೆರಿಟ್ ಇದ್ದರಷ್ಟೇ ಸಿಎ ಪಾಸು ಮಾಡಲು ಸಾಧ್ಯ . ಹೀಗಾಗಿ ಯೋಗೇಶ್‌ಗೆ  ಒಳ್ಳೆಯದಾಗಲಿ ಎಂದು ಮತ್ತೊಬ್ಬರು ಶುಭ ಹಾರೈಸಿದ್ದಾರೆ. 

 

Latest Videos
Follow Us:
Download App:
  • android
  • ios