ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಅಂಕವನ್ನು 35% ರಿಂದ 33%ಕ್ಕೆ ಇಳಿಸಲಾಗಿದೆ. ಈ ನಿರ್ಧಾರವು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣ ಅಂಕವನ್ನು 35%ರಿಂದ 33%ಕ್ಕೆ ಇಳಿಸುವ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಈ ನಿರ್ಧಾರವು “ರಾಜ್ಯದ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗುವ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ” ಎಂದು ಸಚಿವರು ಹೇಳಿದ್ದಾರೆ.
“ಬೇರೆ ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳು 30% ಅಂಕದಲ್ಲೇ ಉತ್ತೀರ್ಣರಾಗುತ್ತಾರೆ. ಆ ರಾಜ್ಯದ ವಿದ್ಯಾರ್ಥಿಗಳು ಆಸ್ಪತ್ರೆಗಳಲ್ಲಿ, ಇತರ ಪ್ರಮುಖ ಕ್ಷೇತ್ರಗಳಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಈ ಮಾನದಂಡ ಯಾವುದೇ ಅಡಚಣೆಯಾಗಿಲ್ಲ. ನಮ್ಮ ವಿದ್ಯಾರ್ಥಿಗಳಿಗೆ ಮಾತ್ರ ನಾವು ಪಾಸ್ ಅಂಕ ಹೆಚ್ಚಾಗಿ ಇಟ್ಟುಕೊಂಡಿದ್ದರಿಂದ ತೊಂದರೆ ಆಗುತಿತ್ತು,” ಎಂದರು.
“ಪಾಸ್ ಅಂಕ ಇಳಿಕೆ, ವಿದ್ಯಾರ್ಥಿಗಳಿಗೆ ಅನುಕೂಲ”
“ನಾವು ಮಾಡಿದದ್ದು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ. 33% ಪಾಸ್ ಮಾನದಂಡಕ್ಕೆ ಇಳಿಕೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಅಡ್ಡಿಯಾಗಿದ್ದ ಒಂದು ದೊಡ್ಡ ಅಂತರದ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಅನುಕೂಲವೇ ಹೊರತು ಹಾನಿ ಅಲ್ಲ,” ಎಂದು ಹೇಳಿದರು.
“ಹಿಂದೆ 7ನೇ ತರಗತಿ ಇದ್ದರೆ ಡ್ರೈವರ್ ಕೆಲಸ; ಈಗ ಎಸ್‌ಎಸ್‌ಎಲ್‌ಸಿ ಅಗತ್ಯ”
ಸಚಿವರು ಉದ್ಯೋಗ ಅರ್ಹತೆಗಳ ಕುರಿತು ಮಾತನಾಡಿ, “ಹಿಂದೊಮ್ಮೆ ಡ್ರೈವರ್ ಆಗಲು 7ನೇ ತರಗತಿ ಪಾಸ್ ಇದ್ದರೂ ಸಾಕಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಇಂದು ಅನೇಕ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಪಾಸ್ ಅನಿವಾರ್ಯ. ಅಂತಹ ಯುವಕರಿಗೆ ಈ ಅಂಕ ಇಳಿಕೆಯ ನಿರ್ಧಾರ ಸಹಕಾರಿಯಾಗುತ್ತದೆ,” ಎಂದು ವಿವರಣೆ ನೀಡಿದರು. ಕ್ವಾಲಿಫಿಕೇಶನ್ ಇಂಪಾರ್ಟೆಂಟ್. ಆದರೆ ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಅವರಿಗೆ ಉತ್ತೀರ್ಣವಾಗಲು ಸುಲಭವಾಗುವಂತೆ ಮಾಡುವುದು ತಪ್ಪೇನಲ್ಲ ಎಂದು ಸಚಿವರು ತಿಳಿಸಿದ್ದಾರೆ.
ನಾರ್ತ್ ಈಸ್ಟ್, ಕೇರಳ ಎಲ್ಲಾ ಮಾದರಿಗಳನ್ನು ಅಧ್ಯಯನ ಮಾಡಿದ ಬಳಿಕದ ನಿರ್ಧಾರ
“ನಾರ್ತ್ ಈಸ್ಟ್ ರಾಜ್ಯಗಳು, ಕೇರಳ, ತಮಿಳುನಾಡು—ಇವುಗಳಲ್ಲಿರುವ ಶಿಕ್ಷಣ ನೀತಿಗಳನ್ನು ನಾವು ಪರಿಶೀಲಿಸಿದೆವು. ಅವರಲ್ಲಿ ಅನೇಕ ರಾಜ್ಯಗಳಲ್ಲಿ ಪಾಸ್ ಅಂಕದ ಮಾನದಂಡ ನಮ್ಮಗಿಂತ ಕಡಿಮೆ ಇದೆ. ನಾವು ಮಾಡಿದದ್ದು ಸಂಶೋಧನೆ ಮತ್ತು ತತ್ಕಾಲೀನ ಅವಶ್ಯಕತೆಗಳ ಆಧಾರದ ಮೇಲೆ ತೆಗೆದುಕೊಂಡ good decision,” ಎಂದು ಸ್ಪಷ್ಟಪಡಿಸಿದರು. ಶಿಕ್ಷಣ ಇಲಾಖೆಯಲ್ಲಿ ಈಗ ಬದಲಾವಣೆ ತರಬೇಕಾದ ಅವಶ್ಯಕತೆ ಇದೆ. ನಮ್ಮ ರಾಜ್ಯದ ಮಕ್ಕಳಿಗೆ ಉತ್ತಮ ಅವಕಾಶ, ಅನುಕೂಲ ಮತ್ತು ಸ್ಪರ್ಧಾತ್ಮಕತೆಗೆ ಸಹಕಾರಿಯಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಸಿಎಂ, ಡಿಸಿಎಂ ಬ್ರೇಕ್ ಫಾಸ್ಟ್ ವಿಚಾರ
ಸಿಎಂ, ಡಿಸಿಎಂ ಬ್ರೇಕ್ ಫಾಸ್ಟ್ ವಿಚಾರವಾಗಿ ಹೇಳಿಕೆ ನೀಡಿದ ಸಚಿವ ಮಧು ಬಂಗಾರಪ್ಪ, ವಾಸ್ತವಾಂಶ ನೋಡಿದಾಗ ಗೊಂದಲ ಇತ್ತು. ಕಾರ್ಯಕರ್ತರಲ್ಲಿ ಗೊಂದಲ ಇತ್ತು. ಮಾಧ್ಯಮಗಳಲ್ಲಿ ಹೆಚ್ಚು ತೋರಿಸ್ತಿದ್ರಿ. ಇದು ಜನರಿಗೂ ಗೊಂದಲ ಆಗಿತ್ತು. ಅದನ್ನ ಈಗ ನಿವಾರಿಸಿದ್ದಾರೆ. ಸಿಎಂ ಮನೆಗೆ ಡಿಕೆ ಸಾಹೇಬ್ರು ಹೋಗಿದ್ದು, ಡಿಕೆಶಿ ಮನೆಗೆ ಸಿಎಂ ಸಾಹೇಬ್ರು ಬಂದಿದ್ದು ಒಳ್ಳೆಯದು. ಎಲ್ಲವೂ ಒಳ್ಳೆಯದಾಗ್ತಿದೆ ಎಂದರು. ಸಿಎಂ ಶಾಶ್ವತವಲ್ಲ ಎಂಬ ವಿಚಾರವಾಗಿ ಮಾತನಾಡಿ, ಅದನ್ನ ಬೇರೆ ಅರ್ಥದಲ್ಲಿ ನೋಡೋದು ಬೇಡ. ನಾವು ಮಾಧ್ಯಮಗಳಿಗೆ ಹೇಳ್ತೇನೆ. ನಾವು ಕೆಲವು ಬಾರಿ ರೇಗುತ್ತೇವೆ. ನಾವು ಮಾಧ್ಯಮಗಳ ಮುಂದೆ ಕೂಲಾಗಿರಬೇಕು. ಎರಡು ಬಾರಿ ಸಿಎಂ ಆಗಿದ್ದವರು. ಹಲವು ಯೋಜನೆ ಕೊಟ್ಟವರು. ಅವರು ಕ್ಲಿಯರ್ ಆಗಿ ಹೇಳಿದ್ದಾರೆ. ಹೈಕಮಾಂಡ್ ಹೇಳಿದಂತೆ ಕೇಳ್ತೇವೆ ಅಂತ. ಹೈಕಮಾಂಡ್ ಹೇಳಿದ್ದು ನಮಗೆ ವೇದವಾಕ್ಯ. ಯಾರ್ಯಾರು ವೈಯುಕ್ತಿಕ ಹೇಳಿಕೆ ಕೊಟ್ಟಿದ್ದಾರೆ. ಅದು ಅವರ ಹೇಳಿಕೆ. ನಾವು ಅದರ ಬಗ್ಗೆ ಮಾತನಾಡಲ್ಲ. ನಾಯಕತ್ವದ ಚರ್ಚೆ ಎಲ್ಲಿಯೂ ಆಗ್ತಿಲ್ಲ. ತಿಂಡಿಗೆ ಹೋಗಿ ಬಂದಿದ್ದಾರೆ ಮತ್ತೆ ನಾಯಕತ್ವ ಅಂದ್ರೆ. ಅದರ ಬಗ್ಗೆ ನಮ್ಮ ಮನಸ್ಸಿನಲ್ಲಿ ಏನು ಇಲ್ಲ ಎಂದರು.
ಮಂಗಳೂರಲ್ಲಿ ಸಿಎಂ, ಡಿಸಿಎಂ ಬೆಂಬಲಿಗರ ಘೋಷಣೆ ವಿಚಾರವಾಗಿ ಮಾತನಾಡಿದ ಶಿಕ್ಷಣ ಸಚಿವರು. ಅವರ ಅಭಿಮಾನಿಗಳು ಕೂಗಿರಬಹುದು.ವದೆಹಲಿಯಲ್ಲಿ ಕುಳಿತು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಸಾರ್ವಜನಿಕ ವಿಚಾರದಲ್ಲಿ ಟೈಮ್ ತೆಗೆದುಕೊಳ್ಬೇಕು. ಆಗ ನೀವು ಕೇಳಲ್ಲ, ನಾನು ಹೇಳೋಕೆ ಬರಲ್ಲ. ವೇಣುಗೋಪಾಲ್ ರಾಷ್ಟ್ರೀಯ ನಾಯಕರು. ಅವರ ಅಭಿಮಾನಿಗಳು ಕೇಳೋದು ಇರುತ್ತೆ. ಅದು ಅವರವರ ಅಭಿಪ್ರಾಯ. ಅವಕಾಶಕ್ಕಾಗಿ ಎಲ್ಲರೂ ಕಾಯ್ತಾರೆ. ಈಗ ನಮಗೆ ಕೊಟ್ಟಿದ್ದಾರೆ. ನಾಳೆ ಬೇರೆಯವರಿಗೆ ಕೊಡಬಹುದು. ಹೈಕಮಾಂಡ್ ತೀರ್ಮಾನ ಮಾಡುತ್ತೆ. ಸಿಎಂ,ಡಿಸಿಎಂ ಹೇಳಿದ ಮೇಲೆ ಇನ್ನೇನಿದೆ. ನಾವು ಏನಾದ್ರೂ ಕೇಳೋಕೆ ಬರುತ್ತಾ? ನಾನು ವಿಪಕ್ಷ ನಾಯಕರ ಮಾತು ಕೇಳಿದೆ. ಭಾವನಾತ್ಮಕ ವಿಚಾರದಲ್ಲೇ ಅಧಿಕಾರಕ್ಕೆ ಬಂದವರು. ಅವರು ವಿಪಕ್ಷದಲ್ಲಿರುವುದು ಯಾಕೆ? ಅವರ ಸ್ಥಾನಕ್ಕೆ ನಾಚಿಕೆ ಆಗಬೇಕು. ನಮ್ಮಂತರ ಬಳಿ ಅವರು ಪ್ರಶ್ನೆ ಕೇಳಲಿ.
ಅವರೇನು ಕೋಳಿಯನ್ನ ಜೀವಂತ ತಿನ್ನುತ್ತಾರಾ?
ನಾಟಿ ಕೋಳಿ ಮರ್ಡರ್ ಅಂತಾರೆ. ಅವರೇನು ಕೋಳಿಯನ್ನ ಜೀವಂತ ತಿನ್ನುತ್ತಾರಾ? ನಾನು ವಿಪಕ್ಷ ನಾಯಕರನ್ನ ಕೇಳ್ತೇನೆ. ಅವರ ನಾಯಕರು ದೆಹಲಿಗೆ ಹೋಗಿದ್ದೇಕೆ? ಅಲ್ಲಿ ಕುಮಾರಣ್ಣನನ್ನ ಭೇಟಿ ಮಾಡಿದ್ದೇಕೆ? ವಿಪಕ್ಷ ನಾಯಕರು ಹಗುರವಾಗಿ ಮಾತನಾಡಬಾರದು. ಜೀವಂತ ತಿನ್ನುತ್ತಾರಾ ಅಂತ ನನ್ನ ಬಾಯಲ್ಲಿ ಬಂತು. ವಿಪಕ್ಷದಲ್ಲಿದ್ದವರು ಸರಿಯಾಗಿ ಮಾತನಾಡಬೇಕು. ನಾವು ನಮ್ಮ ಕೆಲಸ ಅಷ್ಟೇ ಮಾಡಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ.


