ಭಾರತದ ವೈಮಾನಿಕ, ರಕ್ಷಣಾ ಉದ್ಯಮಕ್ಕೆ ಕರ್ನಾಟಕವೇ ತವರು ಮನೆ..!
- ಭಾರತದ ರಕ್ಷಣಾ ವಲಯದ ಒಟ್ಟು 67% ಏರ್‌ಕ್ರಾಫ್ಟ್‌ಗಳು ಮತ್ತು ಹೆಲಿಕಾಪ್ಟರ್‌ಗಳು ಕರ್ನಾಟಕ ರಾಜ್ಯದಲ್ಲೇ ತಯಾರಾಗುತ್ತವೆ.
- ಭಾರತದ ಒಟ್ಟು 65% ಎ&ಡಿ ರಫ್ತು ಕರ್ನಾಟಕದ ಕೊಡುಗೆಯಾಗಿದೆ.
- ಭಾರತದ 25%ದಷ್ಟು ಏರ್‌ಕ್ರಾಫ್ಟ್ ಮತ್ತು ಸ್ಪೇಸ್‌ಕ್ರಾಫ್ಟ್ ಉದ್ಯಮಗಳ ನೆಲೆ ಕರ್ನಾಟಕದಲ್ಲಿದೆ.
(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಭಾರತದ ವೈಮಾನಿಕ ಮತ್ತು ರಕ್ಷಣಾ ಉದ್ಯಮಕ್ಕೆ ಕರ್ನಾಟಕ ತವರು ಮನೆಯಂತಾಗಿದೆ. ಏಕೆ ಅಂತೀರಾ ಭಾರತದ ರಕ್ಷಣಾ ವಲಯದ ಒಟ್ಟು 67% ಏರ್‌ಕ್ರಾಫ್ಟ್‌ಗಳು ಮತ್ತು ಹೆಲಿಕಾಪ್ಟರ್‌ಗಳು ಕರ್ನಾಟಕ ರಾಜ್ಯದಲ್ಲೇ ತಯಾರಾಗುತ್ತವೆ. ಭಾರತದ ಒಟ್ಟು 65% ವೈಮಾನಿಕ ಹಾಗೂ ರಕ್ಷಣಾ ರಫ್ತು ಕರ್ನಾಟಕದ ಕೊಡುಗೆಯಾಗಿದೆ. ಭಾರತದ 25%ದಷ್ಟು ಏರ್‌ಕ್ರಾಫ್ಟ್ ಮತ್ತು ಸ್ಪೇಸ್‌ಕ್ರಾಫ್ಟ್ ಉದ್ಯಮಗಳ ನೆಲೆ ಕರ್ನಾಟಕದಲ್ಲಿದೆ, ಹಾಗೂ ಮೌಲ್ಯ ಸರಪಳಿಯ ಚಟುವಟಿಕೆಗಳಲ್ಲಿ ಕರ್ನಾಟಕ ಪರಿಣತಿ ಸಾಧಿಸಿದೆ.
ಮೌಲ್ಯ ಸರಪಳಿಯ ಚಟುವಟಿಕೆಗಳಲ್ಲಿ ಪರಿಣತಿ ಸಾಧಿಸಿದೆ ಕರ್ನಾಟಕ:
ಸಂಶೋಧನೆ & ವಿನ್ಯಾಸ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸೇರಿದಂತೆ, ಭಾರತದ ಪ್ರಮುಖ ಸಂಶೋಧನೆ ಮತ್ತು ವಿನ್ಯಾಸ ಸಂಸ್ಥೆಗಳನ್ನು ಹೊಂದಿರುವ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
ಇದನ್ನು ಓದಿ: ಏರೋ ಇಂಡಿಯಾ: ರಕ್ಷಣಾ ಕಂಪನಿ ಸಿಇಒಗಳ ಜೊತೆ 13ಕ್ಕೆ ಸಚಿವರ ಸಭೆ
ತರಬೇತಿ: ಕರ್ನಾಟಕದಲ್ಲಿ ಡಸಾಲ್ಟ್ ಸಿಸ್ಟಮ್ಸ್ ಸಂಸ್ಥೆಯ ಸಹಯೋಗದಲ್ಲಿ ಆರಂಭಿಸಲಾದ ಸೆಂಟರ್ ಆಫ್ ಎಕ್ಸಲೆನ್ಸ್ ಕಾರ್ಯಾಚರಿಸುತ್ತಿದ್ದು, ಉದ್ಯಮ ಸಿದ್ಧವಾದ, ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು ಒದಗಿಸುತ್ತಿದೆ.
ಪೂರೈಕೆದಾರರು: ಭಾರತೀಯ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮದ 70% ಪೂರೈಕೆದಾರರು ಕರ್ನಾಟಕದಲ್ಲಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್ 2023-24: ರಕ್ಷಣಾ ವಲಯಕ್ಕೆ ಹೆಚ್ಚಿದ ಕೊಡುಗೆ; ಆಧುನೀಕರಣಕ್ಕೆ ಒತ್ತು..!
ಉತ್ಪಾದನೆ: ಕರ್ನಾಟಕದಲ್ಲಿ 2,000ಕ್ಕೂ ಹೆಚ್ಚಿನ ಸಂಖ್ಯೆಯ ಎಂಎಸ್ಎಂಇಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳು ಉಪ ಗುತ್ತಿಗೆ ಕಾರ್ಯಗಳನ್ನು ನಿರ್ವಹಿಸುತ್ತಿವೆ.
ಕರ್ನಾಟಕ ಪೂರಕ ಉದ್ಯಮಗಳಿಗೂ ಅತ್ಯಂತ ಸಮರ್ಥ ಬೆಂಬಲ ಒದಗಿಸುತ್ತಿದೆ
ಯಂತ್ರೋಪಕರಣಗಳು: ಕರ್ನಾಟಕದ ರಾಜಧಾನಿ ಬೆಂಗಳೂರು ಮಾತ್ರವೇ ಭಾರತದ 60%ಕ್ಕೂ ಹೆಚ್ಚಿನ ಯಂತ್ರೋಪಕರಣಗಳನ್ನು ಉತ್ಪಾದಿಸುತ್ತದೆ.
ಇದನ್ನೂ ಓದಿ: Defence Budget 2023: ರಕ್ಷಣಾ ಕ್ಷೇತ್ರಕ್ಕೆ ಸಿಂಹಪಾಲು, ಉಳಿದ ಕ್ಷೇತ್ರಕ್ಕೂ ಇದೆ ಅವರ ಪಾಲು!
ಕ್ಯಾಪಿಟಲ್ ಗೂಡ್ಸ್: ಕರ್ನಾಟಕ ಭಾರತದ ಎರಡನೇ ಅತಿಹೆಚ್ಚು ಹೆವಿ ಇಲೆಕ್ಟ್ರಿಕಲ್ ಉಪಕರಣಗಳನ್ನು ಉತ್ಪಾದಿಸುವ ರಾಜ್ಯವಾಗಿದೆ.
ಇಎಸ್‌ಡಿಎಂ: 85ಕ್ಕೂ ಹೆಚ್ಚು ಚಿಪ್ ವಿನ್ಯಾಸ ಸಂಸ್ಥೆಗಳನ್ನು ಕರ್ನಾಟಕ ಹೊಂದಿದ್ದು, ಭಾರತದ ಅತಿದೊಡ್ಡ ಚಿಪ್ ವಿನ್ಯಾಸ ಕೇಂದ್ರ ಎನಿಸಿಕೊಂಡಿದೆ.
ಜಾಗತಿಕ ಏರೋಸ್ಪೇಸ್ ಕೇಂದ್ರ: ಬೆಂಗಳೂರು ಜಗತ್ತಿನ ಮೊದಲ ಮೂರು ಏರೋಸ್ಪೇಸ್ ನಗರಗಳಲ್ಲಿ ಒಂದಾಗಿದ್ದು, ವಿದೇಶೀ ಹೂಡಿಕೆಗಳನ್ನು ತನ್ನತ್ತ ಸೆಳೆಯುತ್ತಿದೆ. (ಭವಿಷ್ಯದ ಏರೋಸ್ಪೇಸ್ ನಗರಗಳ ರಾಂಕಿಂಗ್ ಅನ್ನು ಎಫ್‌ಡಿಐ ಇಂಟಲಿಜೆನ್ಸ್ ನೀಡುತ್ತದೆ)
2022-27ರ ಏರೋಸ್ಪೇಸ್ & ರಕ್ಷಣಾ ನೀತಿಯಡಿ ಆಕರ್ಷಕ ಪ್ರೋತ್ಸಾಹಕ ಪ್ಯಾಕೇಜ್:
2022-27ರ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ ಪ್ರಮುಖ ಉಪ ವಲಯ ಹಾಗೂ ಇತರ ವಲಯಗಳಿಗೆ ಪ್ರತ್ಯೇಕ ಪ್ಯಾಕೇಜ್ ಒದಗಿಸುತ್ತದೆ. ಈ ಪ್ಯಾಕೇಜ್ ಪಡೆದುಕೊಳ್ಳುವ ವಲಯಗಳು ಈ ಕೆಳಗಿನಂತಿವೆ.
1. ನಾಗರಿಕ ಮತ್ತು ರಕ್ಷಣಾ ವೈಮಾನಿಕ ವಲಯಗಳಿಗೆ ಇಂಟಿಗ್ರೇಟೆಡ್ ಎಂಡ್ ಅಸೆಂಬ್ಲಿಗಳನ್ನು ಒದಗಿಸುವ ಸಂಸ್ಥೆಗಳು.
2. ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆ (ಎಂಆರ್‌ಓ).
3. ಎಲ್‌ಇಓ ಉಪಗ್ರಹಗಳನ್ನು ಒಳಗೊಂಡಂತೆ, ಬಾಹ್ಯಾಕಾಶ ಉಪಕರಣಗಳನ್ನು ಉತ್ಪಾದಿಸುವ ಸಂಸ್ಥೆಗಳು.
4. ಏರೋಸ್ಪೇಸ್ ಮತ್ತು ರಕ್ಷಣಾ ವಲಯಕ್ಕೆ ಸಂಬಂಧಿಸಿದ ಕಂಪೋಸಿಟ್ ಉತ್ಪಾದನೆ ಮತ್ತು ತ್ರೀಡಿ ಪ್ರಿಂಟಿಂಗ್.
5. ಏರೋಸ್ಪೇಸ್, ರಕ್ಷಣಾ ಮತ್ತು ಬಾಹ್ಯಾಕಾಶ ವಲಯದ ಇಲೆಕ್ಟ್ರಾನಿಕ್ ಉಪಕರಣ ಉತ್ಪಾದನೆ.
ಏರೋಸ್ಪೇಸ್ ಮತ್ತು ರಕ್ಷಣಾ ನೀತಿ 2022-27ರಡಿ ಗುರುತಿಸಲಾದ ಆರು ಪ್ರಮುಖ ಕ್ರಮಗಳು:
1. ಗುರುತಿಸಲಾದ ಐದು ಪ್ರಮುಖ ಕೇಂದ್ರಗಳಾದ ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು ಹಾಗೂ ಚಾಮರಾಜನಗರಗಳಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಪಾರ್ಕ್‌ಗಳ ಸ್ಥಾಪನೆ. ಏರೋಸ್ಪೇಸ್ ಮತ್ತು ರಕ್ಷಣಾ ಪಾರ್ಕ್ ಅಭಿವೃದ್ಧಿದಾರರಿಗೆ ಕರ್ನಾಟಕ ಕೈಗಾರಿಕಾ ನೀತಿ 2020-25ರ ಅನುಸಾರ ಪ್ರೋತ್ಸಾಹ ಧನ ನೀಡಲಾಗುವುದು.
2. ಏರೋಸ್ಪೇಸ್ ಮತ್ತು ರಕ್ಷಣಾ ವಲಯದ ಸಾಮಾನ್ಯ ಪರೀಕ್ಷಾ ವ್ಯವಸ್ಥೆಗಳನ್ನು ಪ್ರಚಾರಪಡಿಸುವುದು. ಇಂತಹಾ ಪರೀಕ್ಷಾ ವ್ಯವಸ್ಥೆಗಳ ನಿರ್ಮಾಣದ ಒಟ್ಟು ಮೊತ್ತದ 25%, ಗರಿಷ್ಠ 50 ಕೋಟಿಯ ತನಕ ರಾಜ್ಯ ಸರ್ಕಾರ ಹಣಕಾಸಿನ ಸಹಾಯ ಒದಗಿಸುವುದು.
3. ಏರೋಸ್ಪೇಸ್ ಮತ್ತು ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಕೌಶಲ್ಯಾಭಿವೃದ್ಧಿಗೆ ಉತ್ತೇಜನ ಮತ್ತು ಪ್ರಚಾರ ಒದಗಿಸುವುದು. ಈ ಕ್ರಮಗಳಲ್ಲಿ ಉತ್ಪಾದನಾ ವಲಯಗಳಲ್ಲಿ ತರಬೇತಿ ನೀಡುವುದಕ್ಕಾಗಿ ಉದ್ಯಮಗಳಿಗೆ ಸಬ್ಸಿಡಿ ನೀಡುವುದೂ ಸೇರಿದೆ.
4. ಅತ್ಯಾಧುನಿಕ ಮತ್ತು ನವೀನವಾದ ಸಂಶೋಧನೆ ಮತ್ತು ಅಭಿವೃದ್ಧಿ ವ್ಯವಸ್ಥೆಗಳಿಗೆ ಹೆಚ್ಚಿನ ಪ್ರಚಾರ ಒದಗಿಸುವುದು. ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಇಂಜಿನಿಯರಿಂಗ್ ಆರ್&ಡಿ ನೀತಿ 2021 ಏರೋಸ್ಪೇಸ್ ಮತ್ತು ರಕ್ಷಣಾ ವಲಯವನ್ನು ಆದ್ಯತೆಯ ವಲಯವನ್ನಾಗಿ ಗುರುತಿಸಿದೆ. ಆ ಮೂಲಕ ಈ ಕ್ಷೇತ್ರಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
5. ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಪಾದನೆಗೆ ಕರ್ನಾಟಕವನ್ನು ಪ್ರಮುಖ ತಾಣವನ್ನಾಗಿ ರೂಪಿಸುವುದು.
6. ಎಂಎಸ್ಎಂಇಗಳ ಅಭಿವೃದ್ಧಿಗೆ ನೀಡುತ್ತಿರುವ ಉತ್ತೇಜನವನ್ನು ಮುಂದುವರೆಸುವುದು. ಅದರೊಡನೆ, ಏರೋಸ್ಪೇಸ್ ಮತ್ತು ರಕ್ಷಣಾ ನೀತಿ 2022-27, ಏರೋಸ್ಪೇಸ್ ಮತ್ತು ರಕ್ಷಣಾ ವಲಯವನ್ನು ಅವಶ್ಯ ಸೇವೆಗಳಡಿ ತಂದು, ಉದ್ಯಮ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಕಾರ್ಯಾಚರಿಸಲು ಅನುಕೂಲ ಮಾಡಿಕೊಡುತ್ತದೆ.