ವಿದೇಶದಲ್ಲಿ ಶಿಕ್ಷಣ ಮತ್ತು ಉದ್ಯೋಗ ಪಡೆಯುವುದು ಅನೇಕ ಭಾರತೀಯರ ಕನಸಾಗಿದ್ದು, ಇದಕ್ಕಾಗಿ ಕುಟುಂಬಗಳು ಅಪಾರ ತ್ಯಾಗ ಮಾಡುತ್ತವೆ. ಆದರೆ, ಇತ್ತೀಚಿನ ವರದಿಗಳ ಪ್ರಕಾರ, ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ದೊಡ್ಡ ಪ್ರಶ್ನೆಯಾಗಿದೆ.

ವಿದೇಶದಲ್ಲಿ ಶಿಕ್ಷಣ, ಉದ್ಯೋಗ ಪಡೆದು ಅಲ್ಲೇ ನೆಲೆಸುವುದು ಅನೇಕ ಭಾರತೀಯರ ಕನಸು

ವಿದೇಶದಲ್ಲಿ ಶಿಕ್ಷಣ ಪಡೆಯುವುದು ವಿದೇಶದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಲಕ್ಷಾಂತರ ಭಾರತೀಯರ ಕನಸು ಇದಕ್ಕಾಗಿ ಅನೇಕರು ತಮ್ಮ ಹೊಲ ಗದ್ದೆ ಜಮೀನುಗಳನ್ನು ಮಾರಿದ ಉದಾಹರಣೆಗಳಿವೆ. ಮಕ್ಕಳನ್ನು ವಿದೇಶದಲ್ಲಿ ಓದಿಸುವುದಕ್ಕಾಗಿ ಅನೇಕರು ತಮ್ಮ ಆಸ್ತಿಯನ್ನೇ ಮಾರಿದ್ದಾರೆ. ಇನ್ನೂ ಅನೇಕ ಶ್ರೀಮಂತ ಹಾಗೂ ಉನ್ನತ ಮಧ್ಯಮ ವರ್ಗದ ಕುಟುಂಬಗಳಿಗೆ ವಿದೇಶದಲ್ಲಿ ಮಕ್ಕಳನ್ನು ಓದಿಸುವುದು ಒಂದು ಪ್ರತಿಷ್ಠೆಯ ಸಂಕೇತವೂ ಆಗಿದೆ. ಇನ್ನೂ ಅನೇಕರು ಸಾಲ ಸೋಲ ಮಾಡಿ ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಿದ್ದಾರೆ. ವಿದೇಶದಲ್ಲಿ ಮಕ್ಕಳು ಓದಿ ಉದ್ಯೋಗ ಗಿಟ್ಟಿಸಿಕೊಂಡರೆ ಕುಟುಂಬದ ಜೀವನಶೈಲಿ ಸುಧಾರಿಸಬಹುದು ನಾವು ಮತ್ತಷ್ಟು ಶ್ರೀಮಂತರಾಗಬಹುದು ಎಂಬುದು ಅನೇಕರ ಕನಸು ಆದರೆ ಹೀಗೆ ವಿದೇಶಕ್ಕೆ ಹೋದ ಮಕ್ಕಳು ಎಷ್ಟು ಸುರಕ್ಷಿತ ಈ ಬಗ್ಗೆ ಒಂದು ವರದಿ.

ಭಾರತೀಯರಿಗೆ ವಿದೇಶ ಎಷ್ಟು ಸುರಕ್ಷಿತ:

ಹೌದು ಕೇವಲ 90 ದಿನಗಳಲ್ಲಿ 44 ಭಾರತೀಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದಂತಹ ಆತಂಕಕಾರಿ ಘಟನೆಗಳು ನಡೆದಿವೆ. ಹಾಗಂತ ಬರೀ ಟಾರ್ಗೆಟ್ ದಾಳಿ ಮಾತ್ರವಲ್ಲ, ಇದರ ಜೊತೆಗೆ ವೈದ್ಯಕೀಯ ಸಮಸ್ಯೆಗಳು, ಅಪಘಾತಗಳು ಆತ್ಮ*ಹತ್ಯೆಯಂತಹ ಘಟನೆಗಳು ಅನೇಕರ ಜೀವವನ್ನು ಬಲಿ ಪಡೆದಿವೆ. ದೂರದ ದೇಶದಲ್ಲಿ ಮಕ್ಕಳ ಸಾವು ಕುಟುಂಬಕ್ಕೆ ಅಪಾರ ಭಾವನಾತ್ಮಕ ಆರ್ಥಿಕ ಒತ್ತಡವನ್ನು ಎದುರಿಸುತ್ತವೆ.

ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ವಿದೇಶಕ್ಕೆ ಹೋಗಿದ್ದ ಯುವಕನ ಭೀಕರ ಹತ್ಯೆ

ನವೆಂಬರ್ 25 ರಂದು ಯುಕೆಯ ಬಾರ್ಬೋರ್ನ್ ರಸ್ತೆಯಲ್ಲಿ ವಿಜಯ್ ಕುಮಾರ್ ತಮ್ಮ ಸ್ಥಳಕ್ಕೆ ಹಿಂತಿರುಗುತ್ತಿದ್ದಾಗ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿ ನಿರ್ಜನ ಪ್ರದೇಶದಲ್ಲಿ ಅವರನ್ನು ಹಲವಾರು ಬಾರಿ ಇರಿದು ಕೊಂದರು. ಹರಿಯಾಣದ ಅವರ ಹಳ್ಳಿಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ಸಂಭವಿಸಿದ ಅವರ ಸಾವು, ವಿದೇಶದಲ್ಲಿ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಭಾರತೀಯ ಮಹತ್ವಾಕಾಂಕ್ಷಿಗಳಿಗೆ ಎದುರಾಗುತ್ತಿರುವ ಸಂಕಷ್ಟಗಳಿಗೆ ಒಂದು ಉದಾಹರಣೆಯಾಗಿದೆ. ಕಥೆಗಳಲ್ಲಿ ಮತ್ತೊಂದು ಕರಾಳ ಅಧ್ಯಾಯವನ್ನು ಗುರುತಿಸುತ್ತದೆ.

ವಿಜಯ್ ಕುಮಾರ್ ಈ ಹಿಂದೆ ಕೇಂದ್ರ ಸರ್ಕಾರದ ಅಬಕಾರಿ ಮತ್ತು ಕಸ್ಟಮ್ಸ್ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಯುಕೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವುದಕ್ಕಾಗಿ ಅವರು ತಮ್ಮ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಅವರ ಈ ನಿರ್ಧಾರವು ಇಷ್ಟೊಂದು ದುರಂತದಲ್ಲಿ ಕೊನೆಗೊಳ್ಳುತ್ತದೆ ಎಂದು ಎಂದಿಗೂ ಯಾರೂ ಊಹಿಸಿರಲಿಲ್ಲ, ಆದರೆ ಭರವಸೆ ಮತ್ತು ಮಹತ್ವಾಕಾಂಕ್ಷೆಯಿಂದ ಅವರು ತೆಗೆದುಕೊಂಡ ನಿರ್ಧಾರ ಜೀವವನ್ನೇ ಬಲಿ ಪಡೆಯಿತು.

ಮಕ್ಕಳ ಸಾವಿಗೆ ಕಂಗಾಲಾದ ಕುಟುಂಬಗಳು:

ಅನೇಕ ಭಾರತೀಯರಿಗೆ, ವಿದೇಶದಲ್ಲಿ ವಾಸಿಸುವುದು ಬಹಳ ಹಿಂದಿನಿಂದಲೂ ಅವಕಾಶ, ಅನುಭವ ಮತ್ತು ಪ್ರಗತಿಯ ಸಂಕೇತವಾಗಿದೆ. ಅಮೆರಿಕಾ, ಕೆನಡಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರೇಲಿಯಾ ಯಾವಾಗಲೂ ಭಾರತೀಯರ ವಿದೇಶಿ ಕನಸಿನ ಪ್ರಮುಖ ತಾಣಗಳಾಗಿವೆ. ಇಲ್ಲಿನ ಪ್ರತಿಷ್ಠಿತ ಯೋಜನೆಗಳು, ಉತ್ತಮ ಅವಕಾಶಗಳು, ದೃಢವಾದ ಕ್ಯಾಂಪಸ್‌ಗಳು ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ದಾರಿ ಮಾಡಿಕೊಡುತ್ತದೆ. ಆದರೆ ಜಾಗತಿಕ ಶಿಕ್ಷಣದ ಆಕರ್ಷಣೆಯ ಕೆಳಗೆ, ಒಂದು ಕಟು ವಾಸ್ತವ ಇದೆ. ಕೆಲವು ದುರಂತ ಸಾವುಗಳು, ಹಿಂಸಾತ್ಮಕ ಹಲ್ಲೆಗಳು ಮತ್ತು ಅಪಘಾತಗಳ ಸರಣಿಯು ನೂರಾರು ಭಾರತೀಯ ಕುಟುಂಬಗಳನ್ನು ದುಃಖಿಸುವಂತೆ ಮಾಡಿದೆ ಮತ್ತು ವಿದೇಶಗಳಲ್ಲಿ ತಮ್ಮ ಮಕ್ಕಳ ಸುರಕ್ಷತೆಯನ್ನು ಪ್ರಶ್ನಿಸುವಂತಾಗಿದೆ.

ಇದನ್ನೂ ಓದಿ: ಮಹಿಳೆಯರ ಗೌರವ ರಕ್ಷಿಸಲು ಹೋಗಿ ಪ್ರಾಣತೆತ್ತ ರಾಷ್ಟ್ರಮಟ್ಟದ ಬಾಡಿಬಿಲ್ಡರ್

ಇತ್ತೀಚಿನ ವರ್ಷಗಳಲ್ಲಿ ಉತ್ತರ ಅಮೆರಿಕಾ, ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಘಟನೆಗಳು ಆತಂಕಕಾರಿಯಾಗಿದೆ. ಇದು ವ್ಯವಸ್ಥಿತ ಸುರಕ್ಷತಾ ಕ್ರಮಗಳು ಮತ್ತು ಅಂತರರಾಷ್ಟ್ರೀಯ ಶಿಕ್ಷಣ ನೀತಿಗಳ ಮರು ಮೌಲ್ಯಮಾಪನದ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ. ಇತ್ತೀಚೆಗೆ ವಿದೇಶಾಂಗ ಸಚಿವಾಲಯವೂ ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಾವಿನ ಪ್ರಮಾಣ ಮತ್ತು ಕಾರಣಗಳು ವಿವರ ಹಂಚಿಕೊಂಡಿದ್ದು, ಇದು ಒಂದು ಆತಂಕಕಾರಿ ಚಿತ್ರಣವನ್ನು ನೀಡಿದೆ. 2018 ಮತ್ತು 2024 ರ ನಡುವೆ, ಕನಿಷ್ಠ 842 ಭಾರತೀಯ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸಾವನ್ನಪ್ಪಿದ್ದಾರೆ.

ಭಾರತೀಯ ವಿದ್ಯಾರ್ಥಿಗಳ ಮೇಲೆ ಹಿಂಸಾತ್ಮಕ ದಾಳಿಯ ಸುದ್ದಿಗಳು ಆತಂಕ ಮೂಡಿಸಿದರೂ, ವಾಸ್ತವದಲ್ಲಿ . 96% ಸಾವುಗಳು ವೈದ್ಯಕೀಯ ಸಮಸ್ಯೆಗಳು, ಆತ್ಮಹತ್ಯೆಗಳು, ಅಪಘಾತಗಳು ಅಥವಾ ಇತರ ಅಹಿಂಸಾತ್ಮಕ ಕಾರಣಗಳಿಂದ ಸಂಭವಿಸಿದೆ. ಆದರೆ ಹಿಂಸಾತ್ಮಕ ದಾಳಿಗಳ ಸಾವಿನ ಸಂಖ್ಯೆ ಕೇವಲ 4% ರಷ್ಟಿವೆ. ಹಿಂಸಾತ್ಮಕ ಸಾವುಗಳು ಮಾಧ್ಯಮದ ಗಮನ ಸೆಳೆದರೂ, ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮದ ಸಮಸ್ಯೆಗಳು ಅತಿದೊಡ್ಡ ಬೆದರಿಕೆಗಳಾಗಿ ಉಳಿದಿದೆ.

ಇದನ್ನೂ ಓದಿ: 100 ರೂಪಾಯಿ ಕೇಳಿದ್ರೆ ಗಂಡನೂ ಕೊಡಲ್ಲ ಹೀಗಿರುವಾಗ ನೀವು ಸಿಎಂಗೆ ನಿಷ್ಠರಾಗಿರಬೇಕು: ಸಚಿವನ ವಿವಾದಾತ್ಮಕ ಹೇಳಿಕೆ

ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗಳಲ್ಲಿ 17 ಹಿಂಸಾತ್ಮಕ ಸಾವುಗಳು ದಾಖಲಾಗಿದ್ದರೆ, ಅಮೆರಿಕದಲ್ಲಿ ಒಂಬತ್ತು ಸಾವುಗಳು ಸಂಭವಿಸಿವೆ. ಅದರಲ್ಲೂ, ಅಮೆರಿಕದಲ್ಲಿ 141 ಭಾರತೀಯ ವಿದ್ಯಾರ್ಥಿಗಳ ಸಾವಿನೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ನಂತರದ ಸ್ಥಾನದಲ್ಲಿ ಕ್ರಮವಾಗಿ ಯುಎಇ (133) ಮತ್ತು ಕೆನಡಾ (119) ಇದೆ.

2018ರಿಂದ 2023ರ ಅವಧಿಯಲ್ಲಿ ವಿದೇಶದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಸಂಖ್ಯೆ

  • ಆಸ್ಟ್ರೇಲಿಯಾ 35
  • ಬಾಂಗ್ಲಾದೇಶ 4
  • ಜರ್ಮನಿ - 20
  • ಕೆನಡಾ - 90
  • ರಷ್ಯಾ - 40
  • ಯುಕೆ - 48