Didac India 2022: ನೀವು ಕೇಳಿದ ಪ್ರಶ್ನೆಗೆ ಉತ್ತರಿಸುತ್ತೆ ಈ ಮರ..!

ಡೈಡ್ಯಾಕ್‌ ಸಮಾವೇಶದಲ್ಲಿ ಮಕ್ಕಳ ಕಲಿಕೆಗೆ ಸೂಕ್ತ ಉಪಕರಣ ಅನಾವರಣ, 200ಕ್ಕೂ ಹೆಚ್ಚು ಸಂಸ್ಥೆಗಳು ಭಾಗಿ

This Robot Tree Will Answer Your Question grg

ಬೆಂಗಳೂರು(ಸೆ.22):  ಶಿಕ್ಷಣ ಮತ್ತು ಕೌಶಲ ಕ್ಷೇತ್ರದಲ್ಲಿನ ಏಷ್ಯಾದ ಅತಿದೊಡ್ಡ ಶಿಕ್ಷಣ ಸಮಾವೇಶ ಡೈಡ್ಯಾಕ್‌ನ 12ನೇ ಆವೃತ್ತಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಅತ್ಯಾಧುನಿಕ ಮತ್ತು ನವೀನ ಆವಿಷ್ಕಾರಗಳು ಪ್ರದರ್ಶನಕ್ಕೆ ವೇದಿಕೆಯಾಗಿದೆ. ಸಾಂಪ್ರದಾಯಿಕ ಶಿಕ್ಷಣ ಕ್ರಮವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮೇಳೈಸಿ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಸೃಷ್ಟಿಸುವ, ತಣಿಸುವ ಹಲವು ಸಂಶೋಧನೆಗಳು ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಶಿಕ್ಷಣ ತಜ್ಞರನ್ನು ಆಕರ್ಷಿಸುತ್ತಿವೆ.

ಸೆಪ್ಟೆಂಬರ್‌ 23ರವರೆಗೆ ನಡೆಯುವ ಸಮಾವೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿಭಿನ್ನ ಉತ್ಪನ್ನಗಳನ್ನು ಹೊಂದಿರುವ ಸುಮಾರು 200ಕ್ಕೂ ಹೆಚ್ಚಿನ ವಿವಿಧ ಸಂಸ್ಥೆಗಳು ಪಾಲ್ಗೊಂಡಿವೆ. ಇ-ಕಲಿಕೆ, ಡಿಜಿಟಲ್‌ ಕ್ಲಾಸ್‌ ರೂಂ, ಸ್ಮಾರ್ಟ್‌ ತರಗತಿಗಳಿಗೆ ಸಂಬಂಧಿಸಿದ ಮಳಿಗೆಗಳು ಹೆಚ್ಚಿವೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗುವ ಪರಸ್ಪರ ಸಂವಹನಕ್ಕೆ ಅವಕಾಶ ಇರುವ ವಿವಿಧ ಉಪಕರಣಗಳನ್ನು ಹೆಚ್ಚಾಗಿ ಕಂಡುಬರುತ್ತಿವೆ.

ಹಾಸ್ಟಲ್‌ಗಳಲ್ಲಿ ಹೆಚ್ಚುವರಿ ಶೇ.25 ರಷ್ಟುಸಂಖ್ಯಾಬಲ ಹೆಚ್ಚಳ

ಅತ್ಯಾಧುನಿಕ ಗ್ಯಾಜೆಟ್‌ಗಳು, ಸಾಫ್ಟವೇರ್‌ ಅಪ್ಲಿಕೇಶನ್‌ಗಳು, ವರ್ಚುಯಲ್‌ ರಿಯಾಲಿಟಿ ಸಾಧನಗಳಿಂದ ಹಿಡಿದು ಆನ್‌ಲೈನ್‌ ಕಲಿಕಾ ಉಪಕರಣಗಳವರೆಗೂ ಶಿಕ್ಷಣ ಮತ್ತು ಕೌಶಲ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಸಂಸ್ಥೆಗಳು ತಮ್ಮ ಮಳಿಗೆ ತೆರಿದಿವೆ. ಆನ್‌ಲೈನ್‌ ಶಿಕ್ಷಣವನ್ನು ಹೆಚ್ಚು ಆಕರ್ಷಣೀಯಗೊಳಿಸುವ, ಮಕ್ಕಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಹಾಗೆಯೇ ಮಕ್ಕಳ ಮೇಲಿನ ಶಿಕ್ಷಕರ ನಿಗಾವನ್ನು ಇನ್ನಷ್ಟು ಸೂಕ್ಷ್ಮಗೊಳಿಸುವ ಹತ್ತು ಹಲವು ಅಪ್ಲಿಕೇಷನ್‌ಗಳು ಈ ಮೇಳದಲ್ಲಿದೆ.

ಯಾವುದೇ ಪ್ರಶ್ನೆಗೂ ಉತ್ತರ ಸಿದ್ಧ!

ಈ ಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಫೆಡರಲ್‌ ಸಾಫ್ಟ್‌ಸಿಸ್ಟಮ್ಸ್‌ ಅಭಿವೃದ್ಧಿ ಪಡಿಸಿರುವ ಮಾತನಾಡುವ ಮರ! ಮರದ ಮುಂದೆ ನಿಂತು ಯಾವುದೇ ಪ್ರಶ್ನೆಗಳನ್ನು ಕೇಳಿದರೂ ಅದಕ್ಕೆ ಉತ್ತರ ನೀಡುವಂತೆ ಕೃತಕ ಬುದ್ಧಿಮತ್ತೆ, ಯಾಂತ್ರಿಕ ಕಲಿಕೆಯನ್ನು ಬಳಸಿ ಈ ಮರವನ್ನು ರೂಪಿಸಲಾಗಿದೆ. ಮರದ ಕೆಳಗೆ ಕೂತು ತಪಸ್ಸು ಮಾಡಿದಾಗ ಜ್ಞಾನೋದಯ ಆದ ಹಲವು ಉದಾಹರಣೆಗಳು ಭಾರತೀಯ ಪರಂಪರೆಯಲ್ಲಿದೆ. ಈ ಪರಂಪರೆಯ ಮುಂದುವರಿದ ಭಾಗವಾಗಿ ಈ ಮರವನ್ನು ನಿರ್ಮಿಸಲಾಗಿದ್ದು, ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ನಿರ್ಮಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಎನ್‌.ಹರಿಬಾಬು ತಿಳಿಸಿದರು.

ಶಾಲೆಗಳಲ್ಲಿ ಡಿಸೆಂಬರ್‌ನಿಂದ ಭಗವದ್ಗೀತೆ ಪಾಠ: ಸಚಿವ ನಾಗೇಶ್‌

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಗೆ ಸಜ್ಜಾದ ರೋಬೋಟ್‌ಗಳು

ರೋಬೋ ತಂತ್ರಜ್ಞಾನವು ತಾಂತ್ರಿಕ ಜೀವನದಲ್ಲಿ ಹಾಸು ಹೊಕ್ಕಿದ್ದು, ಈಗ ಶೈಕ್ಷಣಿಕ ರಂಗದಲ್ಲಿ ಕ್ರಾಂತಿ ಮಾಡಲು ಸಜ್ಜಾಗಿದೆ. ಎಜುಟೆಕ್‌ ಸಂಸ್ಥೆಯು ಹ್ಯಾಂಡ್ಸ್‌-ಆನ್‌ ಎಲೆಕ್ಟ್ರಿಕ್‌ ವೆಹಿಕಲ್ಸ್‌ ಮತ್ತು ಹೈಬ್ರೀಡ್‌ ಲ್ಯಾಬ್ಸ್‌ ಎಂಬ ಪರಿಕಲ್ಪನೆಯೊಂದಿಗೆ ವಿವಿಧ ವಯಸ್ಸಿನ ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಭಿನ್ನ ಶ್ರೇಣಿಯ ರೋಬೋಟ್‌, ಉಪಕರಣಗಳನ್ನು ತಯಾರಿಸಿದೆ. ಕಾರುಗಳು, ರೋಬೋಟ್‌ಗಳು, ಡ್ರೋನ್‌ ಹೀಗೆ ಆಧುನಿಕ ಸಲಕರಣೆಗಳ ಬಿಡಿಭಾಗಗಳ ಜೋಡಣೆ, ಆವುಗಳ ಕಾರ್ಯನಿರ್ವಹಣೆ, ಅವುಗಳ ಪ್ರಾಮುಖ್ಯತೆ ಮುಂತಾದವುಗಳನ್ನು ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗಿದೆ. ಇಲ್ಲಿರುವ ರೋಬೋವೊಂದು ಮನುಷ್ಯನ ಹಾವಭಾವಗಳನ್ನು ಗಮನಿಸಿ ಪ್ರತಿಕ್ರಿಯಿಸುವ, ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ವಿಧಾನ ಕುತೂಹಲಕಾರಿಯಾಗಿದೆ.

ಪ್ರವೇಶ ಉಚಿತ

ಯುಕೆ, ಜರ್ಮನಿ, ಆಸ್ಪ್ರೇಲಿಯಾ, ಕೆನಡಾ, ಫಿನ್‌ಲ್ಯಾಂಡ್‌, ಪೋಲಾಂಡ್‌, ಸಿಂಗಾಪೂರ, ಕೆನಡಾ ಮುಂತಾದ ದೇಶಗಳ ಪ್ರತ್ಯೇಕ ಅಂತಾರಾಷ್ಟ್ರೀಯ ಪೆವಿಲಿಯನ್‌ಗಳಿದ್ದು, ತಮ್ಮಲ್ಲಿನ ಉನ್ನತ ಶಿಕ್ಷಣ ಅವಕಾಶಗಳ ಬಗ್ಗೆ ಮಾಹಿತಿ ನೀಡುತ್ತಿವೆ. ಈ ಸಮಾವೇಶವು ವಿಶೇಷವಾಗಿ ಶಿಕ್ಷಣ ತಜ್ಞರು, ಶಿಕ್ಷಕರು, ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಆಡಳಿತ ವರ್ಗದವರಿಗೆ ಆಯೋಜಿಸಲಾಗಿದ್ದು, ಪ್ರವೇಶ ಉಚಿತ.
 

Latest Videos
Follow Us:
Download App:
  • android
  • ios